ಯಾಲಕ್ಕಿ ಹಾಲಕ್ಕಿ

Author : ಜೀವರಾಜ ಹ ಛತ್ರದ

Pages 92

₹ 110.00




Year of Publication: 2021
Published by: ಶ್ರೀ ಗುರು ಕರಿಬಸವೇಶ್ವರ ಪ್ರಕಾಶನ
Address: ಹಿರೇಬೂದಿಹಾಳ, ತಾ. ಹಿರೇಕೆರೂರು-581109, ಜಿ. ಹಾವೇರಿ

Synopsys

ಕವಿ-ಲೇಖಕ ಜೀವರಾಜ ಹ ಛತ್ರದ ಅವರ  ಕವನ ಸಂಕಲನ-ಯಾಲಕ್ಕಿ ಹಾಲಕ್ಕಿ. ಹಾವೇರಿ ನೆಲದ ಸೊಗಡನ್ನು ಇಲ್ಲಿ ಭಿನ್ನವಾಗಿ ಬಿಂಬಿಸಲಾಗಿದೆ. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಎರಡನ್ನೂ ಬೆಸೆಯುವ ಮಧ್ಯ ಕರ್ನಾಟಕವಾಗಿ ಹಬ್ಬಿರುವ ಜಿಲ್ಲೆಯ ಹಾವೇರಿಯಲ್ಲಿ ಏನಿದೆ ಎನ್ನುವುದಕ್ಕಿಂತ ಏನಿಲ್ಲವೆಂದು ಕೇಳುವುದು ಸೂಕ್ತ ಎಂಬುದನ್ನು ವಿಶ್ಲೇಷಿಸಲಾಗಿದೆ. ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಕವಾಗಿ ತನ್ನದೇ ಛಾಪು ಹೊಂದಿದ ಮಧ್ಯ ಕರ್ನಾಟಕವೇ ಹಾವೇರಿ ಜಿಲ್ಲೆ ಎಂದು ಲೇಖಕರು ವಿವರಿಸಿದ್ದಾರೆ. ರಾಣೆಬೆನ್ನೂರಿನಲ್ಲಿ ಬೀಜೋತ್ಪಾದನೆ ಕೇಂದ್ರಗಳು , ಬಂಕಾಪುರದಲ್ಲಿ ನವಿಲು ಧಾಮ ಹಾಗೂ ದೇಸಿಯ ಕಿಲಾರಿ ತಳಿಯ ಪಶು ಸಂಗೋಪನೆ , ದೇವಿಹೊಸೂರಿನ ಕೃಷಿ ಸಂಶೋಧನಾ ಕೇಂದ್ರ, ಹನುಮನ ಮಟ್ಟಿಯ ಕೃಷಿ ವಿಶ್ವ ವಿದ್ಯಾಲಯ , ರಾಣೆಬೆನ್ನೂರಿನ ಹತ್ತಿ ಮಾರುಕಟ್ಟೆ , ಹಾನಗಲ್ಲಿನ ಭತ್ತ ಹಾಗೂ ಮಾವಿನ ಮಾರುಕಟ್ಟೆ, ಜಿಲ್ಲೆಯಲ್ಲಿ ತುಂಗಭದ್ರಾ ವರದಾ ಕುಮದ್ವತಿ ಮತ್ತು ಧರ್ಮಾ ಮೆಣಸಿನಕಾಯಿ, ಶೇಂಗಾ ಸಿರಿಧ್ಯಾನಗಳು ಹಿಗೆ ಹಾವೇರಿಯಲ್ಲಿರುವ ಪ್ರಮುಖ ಬೆಳೆಗಳಾಗಿವೆ. ಧಾರ್ಮಿಕವಾಗಿ ನಾಡಿನಲ್ಲಿಯೇ ಹೆಸರು ಮಾಡಿದ ಅನೇಕ ಮಠ ಹಾಗೂ ಧಾರ್ಮಿಕ ಕೇಂದ್ರಗಳನ್ನು ನೋಡಬಹುದು. ಶೈಕ್ಷಣಿಕವಾಗಿ ಜಿಲ್ಲೆ ಉತ್ತಮ ಸ್ಥಿತಿಯಲ್ಲಿದ್ದರೂ ಕೂಡ ಇದುವವರೆಗೂ ಒಂದೂ ವೈದ್ಯಕೀಯ ಮಹಾವಿದ್ಯಾಲಯ ಇಲ್ಲದಿರುವುದು ಜಿಲ್ಲೆಗೆ ಹಿನ್ನಡೆ. ಹೀಗೆ ಹಾವೇರಿ ಜಿಲ್ಲೆಯ ವಿವಿಧ ಆಯಾಮಗಳನ್ನು ಪರಿಚಯಿಸುವ ಕೃತಿ ಇದೆ. 

About the Author

ಜೀವರಾಜ ಹ ಛತ್ರದ

ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರು. ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು.  ಪ್ರಸ್ತುತ ಬ್ಯಾಡಗಿ ತಾಲೂಕಿನ ಮಾಸನಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  ಕೃತಿಗಳು: ಖುಷಿ ತರಲಿ ಕೃಷಿ, ಅಕ್ಕಡಿ ಕಾಳು( ವೈಚಾರಿಕ ಲೇಖನಗಳು), ಯಾಲಕ್ಕಿ ಹಾಲಕ್ಕಿ, ರಮ್ಯಗಾನ, ಅನುವಿನು, ದಾಂಪತ್ಯ ಗೀತೆಗಳು, ಜೀವಣ್ಣನ ಆಧುನಿಕ ತ್ರಿಪದಿಗಳು, ಅಸಲಿ ಮಳೆ, ಹನಿ ಹನಿ ಕಾವ್ಯಧಾರೆ, ಮಂಜೂರ್ಶಿ, ಸೂರು ಗುಡ್ಡ, ಉದಯ ರಶ್ಮಿ (ಕವನ ಸಂಕಲನಗಳು) ...

READ MORE

Related Books