ಯಕ್ಷಗಾನ ಪ್ರಸಂಗಮಾಲಿಕಾ

Author : ಶ್ರೀಧರ ಡಿ.ಎಸ್.

Pages 306

₹ 240.00




Year of Publication: 2019
Published by: ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಟಾನ
Address: ಅನೂಚಾನನಿಲಯ, ಇಡ್ಕಿದು ಅಂಚೆ, ಬಂಟ್ವಾಳ ತಾಲೂಕು- 574 220

Synopsys

ಲೇಖಕ ಶ್ರೀಧರ ಡಿ.ಎಸ್.‌ ಅವರ ಕೃತಿ ʻಯಕ್ಷಗಾನ ಯಕ್ಷಗಾನ ಪ್ರಸಂಗಮಾಲಿಕಾʼ ದ್ವಿತೀಯ ಸಂಪುಟ. ಪುಸ್ತಕದ ಬೆನ್ನುಡಿಯಲ್ಲಿ, “ಯಕ್ಷಗಾನ ಪ್ರಸಂಗಗಳನ್ನು ಕನ್ನಡ ಸಾಹಿತ್ಯದೊಳಗಣ ವಿಶಿಷ್ಟ ಕಾವ್ಯಪ್ರಕಾರವೆಂದು ಪರಿಗಣಿಸುವುದು ಅವಶ್ಯ. ಕಳೆದ ನೂರಾರು ವರ್ಷಗಳಿಂದ ಪ್ರಸಂಗರಚನೆಯ ಪರಂಪರೆ ನಡೆದುಬಂದುದು ನಮ್ಮ ಸಮಕಾಲದಲ್ಲಿಯೂ ಮುಂದುವರಿದಿರುವುದು ಗಮನಾರ್ಹ ವಿಷಯ. ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಗಮನಿಸುವ ಛಂದೋಬಂಧಗಳಲ್ಲದೆ ವಿವಿಧ ಗೇಯಬಂಧಗಳು ಇಂದಿಗೂ ಜೀವಂತವಾಗಿ ಪ್ರಸಂಗಗಳಲ್ಲಿ ಕಂಡುಬರುವುದು ಉಲ್ಲೇಖನೀಯ. ಈ ಪರಂಪರೆಯನ್ನು ಮುಂದುವರಿಸುತ್ತಿರುವ ಸಮಕಾಲೀನ ಯಕ್ಷಗಾನಕವಿಗಳಲ್ಲಿ ಶ್ರೀಯುತರಾದ ಶ್ರೀಧರ ಡಿ. ಎಸ್. ಅವರು ಮುಖ್ಯರೆಂಬುದನ್ನು ಉಲ್ಲೇಖಿಸಲೇಬೇಕು. ಪುರಾಣದ ಸಂದುಗೊಂದುಗಳಿಂದ ಯಕ್ಷಗಾನದ ಕಲಾತ್ಮಕತೆಗೆ ಹೊಂದುವ ಕಥಾಭಾಗಗಳನ್ನು ಅವರು ಆಯ್ದುಕೊಳ್ಳುವುದನ್ನು ನೋಡಿದಾಗ ನಮ್ಮ ಪುರಾಣ ಪ್ರಪಂಚ ಎಂತಹ ಅಗಾಧವಾದ ಕಥೆ ಮತ್ತು ಜೀವನಾನುಭವಗಳ ಗವಿಯೆಂಬುದು ಸ್ಪಷ್ಟವಾಗುತ್ತದೆ. ಕಥೆಗಳ ಸಾಮಾನ್ಯರೂಪವನ್ನು ಯಕ್ಷಗಾನಕ್ಕೆ ಅಳವಡಿಸುವಲ್ಲಿ ಅವರ ಸಾಮರ್ಥ್ಯ ಮಿಗಿಲಾದುದು. ಯಕ್ಷಗಾನ ಛಂದೋಬಂಧಗಳ ಒಳಗುಟ್ಟುಗಳನ್ನು ಅರಿತ ಅವರು ಅನೇಕ ಯುವ ಯಕ್ಷಗಾನ ಕವಿಗಳಿಗೆ ಈ ವಿಷಯದಲ್ಲಿ ಮಾರ್ಗದರ್ಶನವನ್ನೂ ಮಾಡಿದವರು” ಎಂದು ಹೇಳೀದ್ದಾರೆ.

About the Author

ಶ್ರೀಧರ ಡಿ.ಎಸ್.
(25 August 1950)

.ಡಿ.ಎಸ್. ಶ್ರೀಧರ ಅವರು ಶಿವಮೊಗ್ಗ ಜಿಲ್ಲೆಯ  ಸಾಗರ ತಾಲೂಕು ನಿಟ್ಟೂರು ಸಮೀಪದ ಧರೆಮನೆ ಗ್ರಾಮದವರು. ತಂದೆ ಶ್ರೀಪಾದಯ್ಯ (ಯಕ್ಷಗಾನ ಕಲಾವಿದರು)  ತಾಯಿ ಸರಸ್ವತಿ. ತಂದೆ ಶ್ರೀಪಾದಯ್ಯ ಕೃಷಿಕರಾಗಿಯೂ ಯಕ್ಷಗಾನ ಕಲಾವಿದರೂ ಆಗಿದ್ದರು. ಹೆಬ್ಬಿಗೆ ಸರಕಾರೀ ಶಾಲೆಯಲ್ಲಿ 7ನೇ ತರಗತಿ, ನಂತರ ಉಡುಪಿಯಲ್ಲಿ ಹೈಸ್ಕೂಲ್  ಹಾಗೂ ಪಿ. ಯು. ಸಿ., ಪದವಿ ವ್ಯಾಸಂಗ ಪೂರ್ಣಗೊಳಿಸಿದರು. ಉಡುಪಿ ರಾಘವೇಂದ್ರ ಪುಸ್ತಕ ಭಂಡಾರದಲ್ಲಿ ಉದ್ಯೋಗಿಯಾಗಿದ್ದು, ಅಂಚೆ ತೆರಪಿನ ಶಿಕ್ಷಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದರು. ಕೆಮ್ಮಣ್ಣು ಮತ್ತು ಕೋಟ ವಿದ್ಯಾಸಂಸ್ಥೆಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ನಂತರ 1991ರಲ್ಲಿ ಕಿನ್ನಿಗೋಳಿ ಪೊಂಪೈ ಕಾಲೇಜಿಗೆ ಪೂರ್ಣಕಾಲಿಕ ಉಪನ್ಯಾಸಕರಾಗಿ ಅಲ್ಲಿಯೇ ನಿವೃತ್ತರಾದರು.  ...

READ MORE

Related Books