‘ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ’ ಸುಜಾತ ಲಕ್ಷ್ಮೀಪುರ ಅವರ ಕವನ ಸಂಕಲನ. ಈ ಕೃತಿಗೆ ಪ್ರೊ.ಟಿ.ಯಲ್ಲಪ್ಪ ಅವರ ಬೆನ್ನುಡಿ ಬರಹವಿದೆ. ಸುಜಾತ ಲಕ್ಷ್ಮೀಪುರ ಅವರು ಕವಿಯಾಗಿ ಪರಂಪರೆಯೊಡನೆ ನಡೆಸುವ ಅನುಸಂಧಾನ, ಹೆಣ್ಣಿನ ಭಾವಕೋಶದೊಡನೆ ಕನ್ನಡ ಕಾವ್ಯ ಜಗತ್ತು ದಕ್ಕಿಸಿಕೊಂಡು ಬಂದ ಅನುಸಂಧಾನದಿಂದ, ಭವಿಷ್ಯದ ಬಗ್ಗೆ ತಳೆಯುವ ಭರವಸೆಗಳಿಂದ ಗಮನಾರ್ಹವಾಗಿವೆ. ಇವರ ಅವಳು ಮತ್ತು ಕವಿತೆ, ಭಾಷೆ ಮತ್ತು ಅವರು, ಕೆಂಪಾದವೋ, ಬೇಕೆಂದೇ, ಅವರು ಈಗೀಗಾ, ಒಲೆಹತ್ತಿ ಉರಿಯುತ್ತಿದೆ, ಮುಟ್ಟು, ದ್ರೌಪದಿಯ ಸ್ವಗತ. ಕವಿತೆಗಳು ಈವರೆಗಿನ ಮಹಿಳಾ ಕಾವ್ಯ ಆಗು ಮಾಡಿಕೊಂಡ ವಸ್ತುಗಳೇ ಆದರೂ ಸುಜಾತ ಅವರು ಹೆಣ್ತನದ ಘನತೆಯನ್ನು ಬಿಟ್ಟುಕೊಡುದೆ, ಪುರುಷ ದ್ವೇಷಿಯಲ್ಲದ, ಗಂಡಿನೊಡನೆ ಸಾಧಿಸಿಕೊಳ್ಳಲೆಳಸುವ ಆತ್ಮ ಸಾಂಗತ್ಯದ ತನ್ನ ಅಂತರ್ ಸ್ಥಾಯೀಭಾವಜಿಂಜ ಹೊಸತೆನಿಸುವಂತಿವೆ.
ಬಯಲು ಆಲಯ, ಆಕೃತಿಯಂತಹ ಕವಿತೆಗಳ ವಸ್ತು ಆಧ್ಯಾತ್ಮ ಹಾಗೂ ಕಾವ್ಯ ಮೀಮಾಂಸೆ, ಸೌಂದರ್ಯ ಮೀಮಾಂಸೆಗಳನ್ನು ಆಗುಮಾಡಿಕೊಂಡಿವೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಜೊತೆಗೆ ಸುಜಾತ ಅವರ ಕವಿತೆಗಳು ತನ್ನ ಸುತ್ತಣ ತಲ್ಲಣಗಳಿಗೆ ಕೇವಲ ಕನ್ನಡಿ ಹಿಡಿವ ಪ್ರತಿಬಿಂಬವಾಗದೇ, ರೈತರ, ರೋಗಿಗಳ, ಬಡವರ, ಅಬಲೆಯರ, ಬದುಕಿನ ಕಡೆಗೆ ಮಾನವೀಯ ಮಿಡಿತವನ್ನು ಹೊಂದಿ, ಅವರ ಬದುಕಿಗೆ ಗತಿಬಿಂಬವಾಗಲು ಹಂಬಲಿಸುತ್ತವೆ. ಕನ್ನಡ ಕಾವ್ಯಲೋಕ ಈ ಅಭಿಜಾತ ಪ್ರತಿಭೆ ಸುಜಾತರನ್ನು ಪ್ರೀತಿಯಿಂದ ಬರಮಾಡಿಕೊಳ್ಳಲೆಂದು ಹಾರೈಸಿದ್ದಾರೆ.
ಡಾ. ಸುಜಾತ ಲಕ್ಷ್ಮೀಪುರ ಕನ್ನಡ ಸ್ನಾತಕೋತ್ತರ ಪದವಿಯನ್ನು ಎರಡು ಚಿನ್ನದ ಪದಕ, ತೃತೀಯ ರ್ಯಾಂಕ್ ನೊಂದಿಗೆ ಪಡೆದಿದ್ದಾರೆ. ಹದಿನೈದು ವರ್ಷಗಳಿಂದ ಕನ್ನಡ ಭಾಷಾ ಬೋಧನೆಯಲ್ಲಿ ತೊಡಗಿಕೊಂಡಿರುವ ಅವರು ಅಧ್ಯಯನ ಮತ್ತು ಬರವಣಿಗೆಗಳನ್ನು ತಮ್ಮ ನೆಚ್ಚಿನ ಹವ್ಯಾಸಗಳನ್ನಾಗಿಸಿಕೊಂಡಿದ್ದಾರೆ. ಅವರ ಹಲವಾರು ಕವಿತೆಗಳು. ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಲವಾರು ವಿಚಾರ ಸಂಕೀರ್ಣಗಳಲ್ಲಿ, ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಉಪನ್ಯಾಸ, ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ವಿಷಯ ಮಂಡನೆ, ಕವಿಗೋಷ್ಠಿಗಳಲ್ಲಿ ಕವಿತಾ ವಾಚನ. ನಿರೂಪಣೆ, ಹೀಗೆ ಹಲವಾರು ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಹಳೆಗನ್ನಡ ಸಾಹಿತ್ಯದ ಅಧ್ಯಯನ ಶಿಬಿರ, ಸರ್ಟಿಫಿಕೇಟ್ ಆಧಾರಿತ ...
READ MORE