ಲೇಖಕರೂ, ಚಿಂತಕರೂ ಆದ ಎಲ್. ಎನ್. ಮುಕುಂದರಾಜ್ ಅವರ ‘ವಿಯತ್ತಳ ವಿಹಾರಿ’ ಕೃತಿಯಲ್ಲಿನ ಪ್ರತಿಯೊಂದು ಬರಹವೂ ಬದುಕನ್ನು ಬಲಪಡಿಸುವ ಇಲ್ಲವೇ ಬಡವಾಗಿಸುವ ಮುಖ್ಯ ಸಂಗತಿಯೊಂದನ್ನು ಕುರಿತ ಚಿಂತನೆಯಾಗಿದೆ.
ವ್ಯಕ್ತಿ, ವಿಚಾರ, ವಿಮರ್ಶೆ, ಬರಹಗಳನ್ನು ಕುರಿತಾದ ಇವರ ಚಿಂತನೆಯು ಸಮಾಜದ ಮತ್ತು ಸಾಹಿತ್ಯದ ಒಳಹನ್ನು ಅರಿಯಲು ಪೂರಕವಾಗಿದೆ.
ಬಿ.ಎಂ.ಶ್ರೀ ಪರಿಚಯ, ಮನುಷ್ಯ ಪ್ರೇಮ ಮುಖ್ಯ ಕಾಳಜಿ : ಚದುರಂಗ, ಸ್ಯಾಫೋ ಕಾವ್ಯದ ವಿಜಯಲಕ್ಷ್ಮೀ ಮೇಡಂ, ಶರ್ಮ – ಎತ್ತರ ಕುಲದ ಉತ್ತಮರು, ಸಿಜಿಕೆ ; ರಂಗನಿಷ್ಠೆಗೆ ದೈತ್ಯ ಪ್ರತಿಮೆ , ಚಿದಾನಂದ ಮೂರ್ತಿ ವ್ಯಕ್ತಿಚಿತ್ರ, ನಿಸರ್ಗಪ್ರಿಯರ ಒಂದು ಕವಿತೆ, ನಲ್ಲೂರು ; ನೂತನರಿಗೆ ನೂತನ , ಜರಗನಹಳ್ಳಿ ಪುಟಾಣಿ ಕವಿತೆ ಬರೆದವರಲ್ಲ !. ನನ್ನೊಳಗಿನ ನಾಗರಾಜಮೂರ್ತಿ, ಮುಂತಾದ ವ್ಯಕ್ತಿಚಿತ್ರಗಳನ್ನು ರಚಿಸಿದ್ದಾರೆ.
ಪಂಚೇಂದ್ರಿಯಗಳಿಗೆ ಲಗ್ಗೆ- ರಮೇಶ್ ತಾಂತ್ರಿಕತೆ, ನಾಗತಿಹಳ್ಳಿ ರೈತ ಪ್ರವಾಸ : ಸಾಂಸ್ಕೃತಿಕ ಪ್ರಶ್ನೆಗಳು, ಚೌಟರ ತೋಟ : ಕೃಷಿ ಸಂಸ್ಕೃತಿಯ ಪ್ರತೀಕ, ನಮ್ಮೊಳಗಿನ ವೈರಿಗಳು, ಮಾನವೀಯ ಸಂಬಂಧ, ಮುಂತಾದ ವಿಚಾರ ಲೇಖನಗಳನ್ನು ಬರೆದಿದ್ದಾರೆ.
ಒಂದಿಷ್ಟು ವಿಮರ್ಶಾ ಬರಹಗಳಾದ ಕಂಬಾಳು ರಾಮಾಯಣ : ಮೈಥಿಲಿ, ದೊಡ್ಡ ಮನೆ : ಒಂದು ಟಿಪ್ಪಣಿ, ಆಕಾಶದ ಹುಡುಗಿ, ಹಿಂದಿನ ಸಾಲಿನ ಹುಡುಗರು : ಶೈಕ್ಷಣಿಕ ವ್ಯಾಖ್ಯಾನ, ದೊಡ್ಡರಂಗೇಗೌಡ : ಕವಿತೆ - ಜನತೆ ಸೇತುಬಂಧ, ಜಿನದತ್ತ ಕವಿಯ ಹೆಜ್ಜೆಸಾಲು ಮುಂತಾದವುಗಳನ್ನು ಈ ಕೃತಿಯಲ್ಲಿ ಪ್ರಕಟಿಸಿದ್ದಾರೆ.
ಎಲ್. ಎನ್. ಮುಕುಂದರಾಜ್ ಹೊಸ ತಲೆಮಾರಿನ ಹೆಸರಾಂತ ಲೇಖಕರು, ಕನ್ನಡ ಎಂ.ಎ. ಪಡೆದ ಇವರು ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. - ದೇಶ ಕೋಶ ದಾಸವಾಳ, ನಿರಂಕುಶ ಮುಂತಾದ ಕವನ ಸಂಕಲನಗಳು, ವೈಶಂಪಾಯನ ತೀರ, ಇಗೋ ಪಂಜರ ಅಗೋ ಮುಗಿಲು, ಸಂಗ್ರಾಮ ಭಾರತ ಮುಂತಾದ ನಾಟಕಗಳು, ಅನೇಕ ಜೀವನ ಚರಿತ್ರೆಗಳು ಹಾಗೂ ಅನುವಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ಆಕಾಶವಾಣಿ ಹಾಗೂ ದೂರದರ್ಶನ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಲ್ಲದೆ ನಟಿಸಿದ್ದಾರೆ. ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸುವುದಲ್ಲದೆ, ಪ್ರತಿಭಾವಂತ ಸಂಸದೀಯ ಪಟು ಪುಸ್ತಕ ಮಾಲಿಕೆ, ಸುವರ್ಣ ಸಂಭ್ರಮಗಳ ಸಂಪಾದಕರಾಗಿಯೂ ದುಡಿದಿದ್ದಾರೆ. ಶಿಕ್ಷಕ ...
READ MORE