ವಿಶ್ವ ಚೇತನ

Author : ವಿಶ್ವನಾಥ ಅರಬಿ

Pages 132

₹ 140.00




Year of Publication: 2022
Published by: ನುಡಿ ಪುಸ್ತಕ ಪ್ರಕಾಶನ

Synopsys

ಗುಮ್ಮಟ ನಗರಿಯ ಯುವ ಸಾಹಿತಿಗಳಾದ ಶ್ರೀ ವಿಶ್ವನಾಥ ಬಸಪ್ಪ ಅರಬಿ ಇವರು ವಿಶ್ವಕ್ಕೆ ಚೇತನವನ್ನು ಒದಗಿಸುತ್ತೇನೆ ಎಂಬ ಸದಾಶಯದೊಂದಿಗೆ ತಮ್ಮ ಚೊಚ್ಚಲ ಕೃತಿ 'ವಿಶ್ವ ಚೇತನ' (ಕವನ ಸಂಕಲನ)ದ ಮೂಲಕ ಸಾಹಿತ್ಯ ಲೋಕಕ್ಕೆ ಕಾಲಿಡುತ್ತಿದ್ದಾರೆ. ವಿಶ್ವನಾಥ ಅವರು ತಮ್ಮ ವಿಡಂಬನಾತ್ಮಕ ಮತ್ತು ವಿಮರ್ಶಾತ್ಮಕ ಕವನಗಳ ಮೂಲಕ ಸಮಾಜದ ಓರೆ-ಕೋರೆಗಳನ್ನು ತಿದ್ದುವ ಪ್ರಯತ್ನ ಮಾಡಿರುವುದು ಶ್ಲಾಘನೀಯ. ಅವರು ತಮ್ಮ ದಿನನಿತ್ಯದ ಬದುಕಿನಲ್ಲಿ ಅನುಭವಿಸಿದ ಭಾವಗಳಿಗೆ ಪದಗಳಿಂದ ಜೀವ ತುಂಬಿ ಕವನಗಳನ್ನು ರಚಿಸಿದ್ದಾರೆ. ಇಲ್ಲಿನ ಪ್ರತಿ ಕವನಗಳೂ ಮನುಷ್ಯನ ದುರ್ಗುಣಗಳನ್ನು ಕೊಂದು, ಹೊಸ ಹುಮ್ಮಸ್ಸಿನೊಂದಿಗೆ ನವೋದಯವನ್ನು ಬಯಸುತ್ತವೆ. ವಿಶ್ವನಾಥರವರು ವೃತ್ತಿಯಲ್ಲಿ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳಾಗಿದ್ದು, ಕೆಲಸದ ಒತ್ತಡದಲ್ಲಿಯೂ ಸಹ ಕನ್ನಡ ಸಾಹಿತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡದ್ದು ವಿಶೇಷ ಮತ್ತು ಅಭಿನಂದನೀಯ. ಇವರು ಸಮಾಜದಲ್ಲಿ ಉಳ್ಳವರ ದರ್ಪ ಮಣ್ಣಾಗಿ, ಶಾಂತಿ ನೆಲೆಸಲಿ ಮತ್ತು ದ್ವೇಷ-ಅಸೂಯೆಗಳು ಇಲ್ಲವಾಗಿ, ಸ್ನೇಹ-ಪ್ರೀತಿ ಮನೆ ಮಾಡುವ ಮೂಲಕ ಮುಗ್ಧರ ಬಾಳು ಬೆಳಗಲೆಂದು ಆಶಿಸುವ ಸರಳ ವ್ಯಕ್ತಿತ್ವದವರು. ಈಗಾಗಲೇ ಹಲವಾರು ಪತ್ರಿಕೆಗಳಲ್ಲಿ ಪ್ರತಿನಿತ್ಯ ತಮ್ಮ ಕವನಗಳ ಮೂಲಕ ಎಲ್ಲರ ಮನಗೆದ್ದು, ಈಗ ಕವನ ಸಂಕಲನದೊಂದಿಗೆ ಸಾಹಿತ್ಯ ಲೋಕದಲ್ಲಿ ಪ್ರಜ್ವಲಿಸಲಿರುವ ಶ್ರೀ ವಿಶ್ವನಾಥ ಅರಬಿಯವರಿಂದ ಇನ್ನಷ್ಟು ಹೆಚ್ಚಿನ ಕೃತಿಗಳು ಹೊರಬರಲೆಂದು ಮನಸಾ ಶುಭ ಹಾರೈಸುವೆ ಎಂಬುದಾಗಿ  ರಾಜ್ಯ ಪ್ರಶಸ್ತಿ ಪುರಸ್ಕೃತ ಯುವ ಸಾಹಿತಿಗಳು ಎಚ್.ಜಿ.ಸಂಗೀತಾ.ಮಠಪತಿ ತಿಳಿಸಿದ್ದಾರೆ.

About the Author

ವಿಶ್ವನಾಥ ಅರಬಿ
(02 May 1999)

ಲೇಖಕ ವಿಶ್ವನಾಥ ಅರಬಿ ಅವರು ಮೂಲತಃ  ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಾವೂರಿನವರು. ವಿಜಯಪುರದಲ್ಲಿ ವಾಸವಾಗಿದ್ದಾರೆ. ತಂದೆ ಬಸಪ್ಪ, ತಾಯಿ ಶಂಕ್ರಮ್ಮ, ವಿಜಯಪುರದಲ್ಲಿ ಪ್ರಾಥಮಿಕ-ಪ್ರೌಢಶಿಕ್ಷಣ, ಪಿ ಯು ಸಿ.ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ, ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಎ. ಸ್ನಾತಕೋತ್ತರ (ಅರ್ಥಶಾಸ್ತ್ರ)  ಪದವಿ ಪಡೆದರು. ಕಾಲೇಜು ಹಂತದಲ್ಲಿ ಚರ್ಚಾ ಸ್ಪರ್ಧೆ,ಭಾಷಣ ಸ್ಪರ್ಧೆ, ಆಶುಭಾಷಣ, ದೇಶ ಭಕ್ತಿ ಗೀತೆ ಹೀಗೆ ರಾಜ್ಯಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಹಲವು ಪ್ರಶಸ್ತಿಗಳನ್ನು ಹಾಗೂ 2016-2017 ಸಾಲಿನಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಅಣಕು ಯುವ ...

READ MORE

Related Books