‘ವಿಷಾದಗಾಥೆ’ ಲೇಖಕ ಡಿ.ಬಿ. ಮಲ್ಲಿಕಾರ್ಜುನಸ್ವಾಮಿ ಅವರ ಕವನ ಸಂಕಲನ. ಈ ಕೃತಿಗೆ ಡಾ.ವಿಜಯಾ ಹಾಗೂ ಡಾ.ಬೈರಮಂಗಲ ರಾಮೇಗೌಡ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ “ಮಹಾಕಾವ್ಯಗಳಲ್ಲಿ ಮತ್ತು ಆಧುನಿಕ ಕಾವ್ಯದಲ್ಲಿ ಭಾವವನ್ನೇ ಕೇಂದ್ರವಾಗಿಸಿಕೊಂಡು, ಕಂಡುಂಡ ಅನುಭವಗಳಲ್ಲಿನ ವಿಷಾದವನ್ನು ಕೆಲವೇ ಶಬ್ದಗಳಲ್ಲಿ ಆಪ್ತತೆ ಮತ್ತು ನವಿರುತನಗಳೊಂದಿಗೆ ಓದುಗರ ಮನ ತಟ್ಟಿ ಕಾಡುವ ಹಾಗೆ ಅಭಿವ್ಯಕ್ತಿಸುತ್ತಿರುವ ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಹಲವರನ್ನು ಆಕರ್ಷಿಸುವಂಥ ಹೊಸ ದಾರಿಯಲ್ಲಿ ನಡೆಯುತ್ತಿರುವುದು ಕುತೂಹಲಕಾರಿಯಾಗಿದೆ” ಎಂದಿದ್ದಾರೆ ಡಾ. ಬೈರಮಂಗಲ ರಾಮೇಗೌಡ.
ಬೇಕೋ ಬೇಡವೋ.. ನುಗ್ಗಿ ಬಂದಪ್ಪಳಿಸುವ ನೋವು ವಿಷಾದದ ಮುಸುಕಿನಲ್ಲಿ ಅಡಗಿದ್ದರೂ ಬದಿಗೆ ಸರಿಸುತ್ತ ಕತ್ತಲೆಯ ಗಾಢ ಮೌನದ ನಡುವೆ ಸುಳಿವ ಮಿಂಚು ಹುಳುವಿಗಾಗಿ ಕಾಯುತ್ತಾ, ಬದುಕು ಬಹಳ ದೊಡ್ಡದು, ಹಣತೆಯಾದರೂ ಹಚ್ಚಿಡಬೇಕು ಎನ್ನುತ್ತ ಬದುಕನ್ನು ಅರ್ಥಮಾಡಿಸುವ ಉತ್ಕಟ ಜೀವನ ಪ್ರೀತಿಯನ್ನು ಈ ವಿಷಾದ ಗಾಥೆಗಳು ಬಯಲಾಗಿಸುತ್ತವೆ ಎಂದಿದ್ದಾರೆ ಡಾ. ವಿಜಯಾ.
ರಂಗಕರ್ಮಿ, ಲೇಖಕ ಡಾ. ಡಿ.ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಅವರು ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ (31-07-1958) ಗ್ರಾಮದವರು. ತಂದೆ- ಡಿ.ಎಸ್. ಬಸಟ್ಟಪ್ಪ, ತಾಯಿ- ಸಿ.ಆರ್. ಮಂಗಳಗೌರಮ್ಮ. ಕನ್ನಡ ಎಂ.ಎ ಪದವೀಧರರು. ಎಂ.ಪಿ.ಎ.ಎಂ.ಫಿಲ್(ಜಾನಪದ ರಂಗಭೂಮಿ) ಹಾಗೂ ಅಭಿನಯ ತರಂಗದ (ರಂಗಶಿಕ್ಷಣ) ಡಿಪ್ಲೊಮಾ ಪಡೆದಿದ್ದಾರೆ. 1976ರಲ್ಲಿ ನಾಗಮಂಗಲದ ಉದಯಭಾನು ಕಲಾಸಂಘದ ‘ಸಂಚು ಹೂಡಿದ ಸಿಂಹ’ ನಾಟಕದ ಮೂಲಕ ರಂಗಪ್ರವೇಶ ಮಾಡಿದರು. 19881ರಲ್ಲಿ ಅಭಿನಯ ತರಂಗ ಸೇರಿ, ‘ಕೋತಿಕತೆ’, ‘ಜನಮರುಳೋ’, ‘ಮಾ ನಿಷಾಧ’, ‘ಚಿರಸ್ಮರಣೆ’, ‘ಕಿಂಗ್ ಲಿಯರ್’, ‘ಟೊಳ್ಳುಗಟ್ಟಿ’, ‘ಪ್ರತಿಜ್ಞಾ ಯೌಗಂಧರಾಯಣ’ ಹಾಗೂ ಬೆಂಗಳೂರಿನ ಇತರ ತಂಡಗಳಲ್ಲಿ 30ಕ್ಕೂ ...
READ MORE