'ವಸುಂಧರೆಯ ಪ್ರಾಯ' ವಿಜಯಾ ಸುಬ್ಬರಾಜ್ ಅವರ ಐದನೆಯ ಕವನ ಸಂಕಲನ. ಈ ಸಂಕಲನದಲ್ಲಿ- ಒಂದು ಸಂವಾದ, ಬರುವೆಯಾದರೆ ಬಾ ಗಾಂಧಿ, ಅಡಿಗೆ ಮನೆ, ನಿನಗರ್ಥವಾಗಲಿಲ್ಲ, ಹೀಗೊಂದು ಕ್ಷಣದಲ್ಲಿ, ಸದ್ದುಗಳ ಬೆನ್ನಲ್ಲಿ, ನಿಲ್ದಾಣಗಳನ್ನು ಹಾಯುವಾಗ, ಚಿನ್ನದ ಪುತ್ಥಳಿ, ಶೃತಿ ಮಾಡಿಟ್ಟ ವೀಣೆ, ಭುವನ ಸುಂದರಿಯರಿಗೆ, ಕಳೆದ ವಿಳಾಸ, ಗೆಳೆಯನ ನೆನಪಿನಲ್ಲಿ, ಡ್ರಾಪ್ ಕೊಡಿ ಆಂಟೀಪ್ಲೀಸ್, ಪ್ರೀತಿ ಎಂಬ ಹುಡುಗನಿಗೆ, ವಸಂತಗಳ ಕನಸು ಬಿತ್ತುವ, ಸಿಟ್ಟು . ದೇಶನಾಯಕರ ಮರಣ, ರಸ್ತೆಗಳು, ನೆನಪಾಗದ ದೊರೆ, ಹೆಣ್ಣು, ಮದರ್ ಥೆರೆಸಾ, ಸಹಸ್ರಮಾನದ ಶಿಶುಪುರುಷ, ಸಂಕ್ರಾಂತಿ ಗೀತೆ, ವಿಜಯೋತ್ಸವ, ಪು.ತಿ.ನ ನೆನಪಿನಲ್ಲಿ, ನಿದ್ದೆ ಮಾಡುವ ಹುಡುಗಿ, ವಸುಂಧರೆಯ ಪ್ರಾಯ, ಪ್ರೀತಿಗೆಲ್ಲಿದೆ ಎಲ್ಲೆ, ಸಖನಿಗೆ, ಹವಾಮಾನದ ವೀಕ್ಷಣಾಲಯದ ವರದಿ, ನಾನು-ಲೆಕ್ಕ, ಸ್ವಾಗತ, ಅಂದು-ಇಂದು, ನಿರೀಕ್ಷೆಗಳನ್ನು ಹೇರಬೇಡ, ಕಿತ್ತುಹೋದ ತಾಳಿ ಸರ ಸೇರಿದಂತೆ 40 ಕವನಗಳಿವೆ.
ವಿಜಯಾ ಸುಬ್ಬರಾಜ್ ಅವರು ಬೆಂಗಳೂರಿನಲ್ಲಿ 1947 ಏಪ್ರಿಲ್ 20ರಂದು ಜನಿಸಿದರು. ತಾಯಿ ಲಕ್ಷ್ಮಿ, ತಂದೆ ಸೀತಾರಾಂ. ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಬಿಯುಸಿಟಿಎ ನ ಉಪಾಧ್ಯಕ್ಷೆ, ಕನ್ನಡ ನುಡಿ ನಿಯತಕಾಲಿಕೆಯ ಸಂಪಾದಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ವಿಜಯಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ...
READ MORE