‘ಉತ್ತರ ಕಾಂಡ ಮತ್ತು ಇತರ ಕೆಲವು ಕವನಗಳು’ ಹಿರಿಯ ಸಾಹಿತಿ ವಿ.ಜಿ.ಭಟ್ಟ ಅವರ ಕವನ ಸಂಕಲನ. ಇಲ್ಲಿರುವ ಕವನಗಳ ರಚನೆ ವೈಶಿಷ್ಟ್ಯಪೂರ್ಣ, ಕವಿತೆಗೆ ಬೇಕಿರುವ ಮಾಗಿದ ದೃಷ್ಟಿ, ಅನುಭವದ ಗಟ್ಟಿತನ ಎಲ್ಲವೂ ಅವರ ಕಾವ್ಯಗಳಲ್ಲಿ ಪ್ರತಿಫಲಿಸುತ್ತದೆ. ಸಮಾಜವನ್ನು ವಿಡಂಬಿಸುವ ಘಾಟು ಮೂಗಿಗೆ ಬಡಿಯುತ್ತದೆ. ವ್ಯಂಗ್ಯ ಕೊರೆಯುತ್ತದೆ. ಮಾತಿನ ಮೊನೆ ಚುಚ್ಚುತ್ತದೆ. ಈ ಕಾರಣಕ್ಕಾಗಿಯೇ ಈ ಕವನ ಸಂಕಲನ ಓದುಗರನ್ನು ಎಂದಿನಂತೆ ಸೆಳೆಯುತ್ತದೆ.
ಕವಿ ವಿ.ಜಿ. ಭಟ್ಟ ಎಂತಲೇ ಪರಿಚಿತರಾಗಿರುವ ವಿಷ್ಣು ಗೋವಿಂದ ಭಟ್ಟ ಅವರು ಜನಿಸಿದ್ದು 1923 ಡಿಸೆಂಬರ್ 3ರಂದು. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಕಡತೋಕಾ ಗ್ರಾಮ ಇವರ ಹುಟ್ಟೂರು. ಮುಂಬೈ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಹೈಸ್ಕೂಲ್ ಉಪಾಧ್ಯಾಯರಾಗಿ ಕೆಲಕಾಲ ಕೆಲಸ ಮಾಡಿ ನಂತರ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಕೃತಿಗಳೆಂದರೆ ಅರಣ್ಯರೋದನ, ಕಾವ್ಯವೇದನೆ, ತುಂಟನ ಪದಗಳು, ಕಿಷ್ಕಂಧೆ ಮತ್ತು ಆತ್ಮಗೀತೆ (ಕವನ ಸಂಕಲನಗಳು), ಪೆದ್ದಂ ಕತೆಗಳು ಮತ್ತು ದಿವಸ (ಕಥಾಸಂಕಲನಗಳು), ಸವಿನೆನಪು (ಇತರೆ) ಸಹ್ಯಾದ್ರಿ (ಜೀವನಚರಿತ್ರೆ), ಖಾದಿಗ್ರಾಮೋದ್ಯೋಗ ...
READ MORE