ಲೇಖಕ ಡಾ. ಅನಿಲ್ಕುಮಾರ್ ಪಿ. ಗ್ರಾಮಪುರೋಹಿತ ಅವರ ಕವನ ಸಂಕಲನ ʻತುಂತುರುʼ. ಪುಸ್ತಕದ ಮುನ್ನುಡಿಯಲ್ಲಿ ಲೇಖಕಿ ಪಲ್ಲವಿ ಇಡೂರು ಅವರು, “ಈ ಬಾರಿ ಪುಟ್ಟ ಪುಟ್ಟ ಚುಟುಕುಗಳಂತಹ ಕವನಗಳನ್ನೊಳಗೊಂಡ ತುಂತುರು' ಹೆಸರಿನಲ್ಲಿ ಕವನ ಸಂಕಲನವೊಂದನ್ನು ಬರೆದು ಅಚ್ಚರಿ ಮೂಡಿಸಿದ್ದಾರೆ. ಆ ಮೂಲಕ ಕವಿಗಳ ಕಾವ್ಯಗಳ ಲೋಕಕ್ಕೆ ಮೊದಲ ಹೆಜ್ಜೆಯಿರಿಸಿದ್ದಾರೆ. ಮೂಲತಃ ಬರಹಗಾರ್ತಿಯಾದ ನನಗೆ ಸಾಮಾನ್ಯವಾಗಿ ಕವನ ಸಂಕಲನಗಳನ್ನು ಓದುವಾಗ ಕಲ್ಪನೆಗಳ ಲೋಕವೆನಿಸುತ್ತಿರುತ್ತದೆ. ಆದರೆ ಮೊದಲ ಬಾರಿಗೆ ಈ ಕವನ ಸಂಕಲನವೇ ವಾಸ್ತವಿಕತೆಗೆ ಬಹಳ ಹತ್ತಿರವಿದೆ ಅನ್ನಿಸಿದ್ದು. ನಮ್ಮ ನಿಮ್ಮೆಲ್ಲರ ನಡುವೆ ನಡೆಯುವ ಎಷ್ಟೋ ವಿಷಯಗಳನ್ನು ಹೇಳಲು ಕಾವ್ಯವನ್ನು ಮಾಧ್ಯಮವಾಗಿಸಿಕೊಂಡು 'ಹೌದಲ್ಲಾ' ಅನ್ನಿಸುವ ಥಟ್ ಎನ್ನುವ ಭಾವ ಮೂಡಿಸಿಬಿಡುವ ಚುಟುಕು ಕವನಗಳ ಸರಮಾಲೆಯನ್ನು ಹೊಂದಿರುವ ಕಾವ್ಯ ಸಂಕಲನ ಈ ತುಂತುರು” ಎಂದು ಹೇಳಿದ್ದಾರೆ.
ಅನಿಲ್ ಕುಮಾರ್ ಪಿ.ಗ್ರಾಮಪುರೋಹಿತ್ ಅವರು ಎಂ.ಎಸ್ಸಿ, ಎಂ.ಫಿಲ್, ಪಿಹೆಚ್ ಡಿ ಪದವೀಧರರು. ಸಾಹಿತ್ಯ ಕೃಷಿಯಲ್ಲಿ ಮೂರು ದಶಕಗಳಿಂದಲೂ ಹೆಚ್ಚು ಕಾಲ ತೊಡಗಿಸಿಕೊಂಡಿದ್ದಾರೆ. ತಮ್ಮ ಪೊಲೀಸ್ ಇಲಾಖೆಯ ಸೇವೆಯೊಂದಿಗೆ ಸಾಹಿತ್ಯದ ಬಗ್ಗೆ ಒಲವನ್ನು ಬೆಳೆಸಿಕೊಂಡಿರುವ ಇವರು ಈಗಾಗಲೇ ಸಂಚಾರ ವಿಭಾಗಕ್ಕೆ ಸಂಬಂಧಿಸಿದಂತೆ ರಸ್ತೆ ಸುರಕ್ಷತೆ, ರಸ್ತೆ ಸುರಕ್ಷಾ ಶತಕ ಪುಸ್ತಕಗಳನ್ನು ರಚಿಸಿದ್ದಾರೆ. ಜೊತೆಗೆ ಜೀಕಬೇಕು, ತುಂತುರು, ಪಟ್ಟಕ ಎಂಬ ಮೂರು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಕೃತಿಗಳು: ಜೀಕಬೇಕು, ತುಂತುರು, ರಸ್ತೆ ಸುರಕ್ಷತೆ, ರಸ್ತೆ ಸುರಕ್ಷಾ ಶತಕ , ಪಟ್ಟಕ , ಮೆಲುಕು, ಭಾವತೋರಣ, ಟ್ರಾಫಿಕ್ ಮ್ಯಾನ್ಯುಯಲ್ (ಅನುವಾದ), Traffic is ...
READ MORE