ಪ್ರೇಮ್ ಸಾಗರ್ ಕಾರಕ್ಕಿಯವರ ಕವನ ಸಂಕಲನ 'ತುಮುಲಗಳು'. ಈ ಪುಸ್ತಕಕ್ಕೆ ಮುನ್ನುಡಿ ಬರೆದಿರುವ ಮೂಡ್ನಾಕೂಡು ವಿಶ್ವನಾಥ್ ಅವರು 'ಇದೊಂದು ಕುದಿವ ಮನಸುಗಳ ತಲ್ಲಣ' ಎನ್ನುತ್ತಾರೆ. ಜೊತೆಗೆ ಕಾರಕ್ಕಿಯವರ ಎಲ್ಲಾ ಕವನಗಳು ಮನಃಶಾಸ್ತ್ರೀಯವಾಗಿ ಹೆಚ್ಚು ಚಿಂತಿಸಲು ಅನುವು ಮಾಡಿಕೊಡುತ್ತವೆ ಎಂಬುದು ಮೂಡ್ನಾಕೂಡು ವಿಶ್ವನಾಥ್ ಅವರ ಅಭಿಪ್ರಾಯ.
ಮನದ ಮೂಲೆಗಳಿಂದ
ಹೊಮ್ಮುವುದು ದುರ್ಗಂಧ,
ಅಲ್ಲಿ ಆಳಗಳಿಲ್ಲ
ಕೊಳೆತು ನಾರುತ್ತಿರುವ
ಕನಸುಗಳ ಕಳೇಬರಗಳಿಂದ
ಆಗ ಅರಿವಾಗುವುದು
ನಗುವ ಹೂಗಳ ನಂದನವನದಲ್ಲಿ
ಮನಸ್ಸು ಇಂದು ಸತ್ತ ಕನಸುಗಳ ರುದ್ರಭೂಮಿ
ಇಂತಹ ಪದಗಳಲ್ಲಿ ಹೊರಡುವ ಭಾವಗಳು ಮತ್ತು ನೆಗೆಷನ್ ಇವರ ಕವನಗಳಲ್ಲಿ ಹೆಚ್ಚು ಗೋಚರಿಸುತ್ತವೆ .
ಒಂದು ಹನಿಯೂ ಇರದ
ಒಣಗಿದ ಖಾಲಿ ಬಾಟಲುಗಳನ್ನು
ಒಡೆಯದಂತೆ ಹೊರತೆಗೆದು
ಇಲ್ಲದಿದ್ದರೂ ಕುಡಿದು ತೂರಾಡಿ
ಬದುಕುತ್ತಲೇ ಇದ್ದೇನೆ
ಈ ಸಾಲುಗಳು, ಕಾವ್ಯ ಜೋಡಣೆ ಜೊತೆೆಗೆ ಯುವಮನಸ್ಸು ನೋವಿಗೆ ತನ್ನನ್ನು ತಾನು ಒಪ್ಪಿಸಿಕೊಳ್ಳುವ ಪರಿ ಹೊಸತೆನಿಸುತ್ತದೆ. ಕವಿ ಪ್ರೇಮ್ ಸಾಗರ್ ಕಾರಕ್ಕಿಯವರು ಮನಸಿನ ತುಮುಲಗಳನ್ನು ಪದಗಳ ಮೂಲಕ ಹೊರಹಾಕಿ ಹಗುರಗೊಳ್ಳುವ ಸಲುವಾಗಿ, ಜೊತೆಗೆ ಅವೇ ಭಾವನೆಗಳ ತೀವ್ರತೆಯನ್ನು ಮತ್ತೆ ಎಂದಾದರೂ ಅನುಭವಿಸುವುದಕ್ಕಾಗಿ ಪದಗಳಲ್ಲಿ ಕಾಯ್ದಿಡುವ ಆಸೆಬುರುಕುತನದಿಂದ ಈ ಕವನ ಸಂಕಲನವನ್ನು ರಚಿಸಿದ್ದೇನೆ ಎಂದಿದ್ದಾರೆ.
ಪ್ರೇಮ್ ಸಾಗರ್ ಕಾರಕ್ಕಿ - ಚಿಕ್ಕಮಗಳೂರಿನ ಕಳಸ ಊರಿನವರು. ವೃತ್ತಿಯಿಂದ ಇಂಗ್ಲಿಷ್ ಉಪನ್ಯಾಸಕರಾಗಿದ್ದಾರೆ. ಕೃತಿಗಳು: ತುಮುಲಗಳು' (ಕವನಸಂಕಲನ ), ಕಮೂ ಅವರ 'ದ ಫಾಲ್' ಎಂಬ ಕೃತಿಯನ್ನು 'ಪತನ' ಶಿರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE