ಭುವನಾ ಹಿರೇಮಠರ “ಟ್ರಯಲ್ ರೂಮಿನ ಅಪ್ಸರೆಯರು” ಕಾಲದ ಹೊಸ ಶಬ್ದದುಡುಗೆಯುಟ್ಟ ಕವನ ಸಂಕಲನ, ಡಿಜಿಟಲ್ ರೂಪದ ಕೃತಿಯಾಗಿದ್ದು, ನವನಾಗರೀಕತೆಯ ಶಬ್ದಗಳಿಂದ ನಿರ್ಮಿತವಾದ ಕೃತಿ. ಶಿವರುದ್ರಪ್ಪನವರು “ಹಳೆಯ ಶಬ್ದಗಳು ಮುಪ್ಪಿನಿಂದ ಮೃತವಾಗುತ್ತವೆ” ಎಂದು ಹೇಳಿದ್ದಕ್ಕೆ ಭುವನಾ ಹಿರೇಮಠರು ನ್ಯಾಯ ಒದಗಿಸಿದ್ದಾರೆ. ಕವನಗಳನ್ನು ಸೀಳಿ ಸೀಳಿ ಒದಬೇಕೆಂಬ ಹಂಬಲ ಜಾಸ್ತಿಯಾಗುತ್ತಾ ಹೋಗುತ್ತದೆ.
ವಿಶಿಷ್ಟ ಪ್ರೇಮ, ಹೆಣ್ಣಿನಲ್ಲಿ ನಿಜವಾದ ಹೆಣ್ಣನ್ನ ನೋಡುವ ರೀತಿ, ಕಳವಳ ಬಹಳ ತೀವ್ರವಾಗುತ್ತಾ ಹೋಗುತ್ತದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಎಲ್ಲಾ ದಿನಗಳು ಗಂಡಿನ ದಿನಗಳೇ ಆಗಿರುವುದರಿಂದ ಒಂದು ದಿನವನ್ನು ತನ್ನದಾಗಲಿ ಎಂದು ಕೇಳುವ ಆರ್ತತೆ, ನಿಗೂಢವಾಗಿದ್ದು, ಈಡೇರಿಸಿಕೊಳ್ಳುವ ಉದ್ದೇಶ ಹಿಡಿಪ್ರೇಮವಾಗಿದ್ದು, ಪ್ರೇಮಪರವಶತೆ ಇಡೀ ಒಂದು ದಿನ ಬೇಗ ಹಾಳು ಮಾಡುತ್ತದೆ.
ಪದ್ಯಗಳು ಆಪ್ತ ನಿವೇದನೆಗಳಾದಾಗ ನೇರವಾಗಿ ಕಾವ್ಯ ಸಂವೇದಿಗಳ ಹೃದಯವನ್ನು ಪ್ರವೇಶಿಸುತ್ತವೆ. ಪ್ರಸ್ತುತ ಕವಯಿತ್ರಿಯ ಬರವಣಿಗೆ ಆ ಸ್ವರೂಪದ್ದು. ಇಲ್ಲಿ ಇಲ್ಲದ ಬಡಿವಾರಗಳಿರುವುದಿಲ್ಲ. ಮಾತಿನ ಜಾನು ಮತ್ತು ನಾಜೂಕುಗಳು ಇರುವುದಿಲ್ಲ. ಇರುವುದು ಪ್ರಾಮಾಣಿಕ ಬಿಸಿಯುಸಿರು ಮಾತ್ರ ಆ ಕಾರಣಕ್ಕಾಗಿಯೇ ನಮಗೆ ಈ ಕವಿ ಪ್ರಿಯರಾಗುತ್ತಾರೆ. ಮಾತುಗಳು ಇಲ್ಲಿ ತರ್ಕಕ್ಕೆ ಸಿಕ್ಕಿಕೊಳ್ಳದೇ ಸಲೀಸಾಗಿ ಆತ್ಮಧರ್ಮಕ್ಕೆ ಜಾರಿಕೊಳ್ಳುತ್ತವೆ.
ಭುವನಾ ಹಿರೇಮಠ ಅವರ ಪೂರ್ಣ ಹೆಸರು ಭುವನೇಶ್ವರಿ ರಾಚಯ್ಯ ಹಿರೇಮಠ. ಹುಟ್ಟೂರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸೋಮನಟ್ಟಿ ಎಂಬ ಪುಟ್ಟ ಹಳ್ಳಿ. ತಂದೆ- ರಾಚಯ್ಯ (ಪ್ರವಚನಕಾರರು), ತಾಯಿ - ಶಿವಗಂಗಾ. ಸದ್ಯ ಬೆಳಗಾವಿ ಜಿಲ್ಲೆಯ ಹಿರೇನಂದಿಹಳ್ಳಿಯ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಓದು, ಬರವಣಿಗೆಯ ಹವ್ಯಾಸವಿರುವ ಭುವನಾ ಹಿರೇಮಠರ ಮೊದಲ ಕವನ ಸಂಕಲನ ಟ್ರಯಲ್ ರೂಮಿನ ಅಪ್ಸರೆಯರು ಕೃತಿ ಪ್ರಕಟಣೆಗೊಂಡಿದೆ. 2020ರಲ್ಲಿ ಅವರ 'ಹಸಿರು ಪೈಠಣ ಸೀರಿ' ಕಥೆಗೆ ವಿಜಯ ಕರ್ನಾಟಕ ಯುಗಾದಿ ಕತಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ದೊರೆತಿದೆ. ...
READ MORE