ವಾಸ್ತವದ ಸೂಕ್ಷ್ಮ ಘಟನಾವಳಿಗಳನ್ನು ಕವಿತೆಗಳಾಗಿಸುವ ತುಡಿತ ಹೊಂದಿರುವ ರಾಯಚೂರಿನ ಯುವ ಕವಿ ವೇಣು ಜಾಲಿಬೆಂಚಿ ಅವರ ಚೊಚ್ಚಲ ಕವನ ಸಂಕಲನ ’ತಿಳಿಯದೇ ಹೋದೆ’. ಸಾಹಿತಿ ಹ.ಸ.ಬ್ಯಾಕೋಡ ಕೃತಿಯ ಬೆನ್ನುಡಿಯಲ್ಲಿ ಅಭಿಪ್ರಾಯಪಟ್ಟಿರುವಂತೆ ’ಭಾವನಾತ್ಮಕ ನೆಲೆಯಲ್ಲಿ ಯೋಚಿಸುವ, ವಾಸ್ತವ ಲೋಕದ ಅರಿವಿರುವವರು ಮಾತ್ರ ಸದಾ ಹೊಸತನದ ಕವಿತೆಗಳ ಹುಟ್ಟಿಗೆ ಕಾರಣರಾಗುತ್ತಲೇ ಇರುತ್ತಾರೆ. ಅಂತವರ ಕವಿತೆಗಳು ಸದಾ ಕಾಡುತ್ತವೆ. ಇಂತಹ ಕವಿತೆಗಳನ್ನು ಓದಿಕೊಳ್ಳುತ್ತಲೇ ತಾನು ಅಂತಹ ಕವಿತೆಗಳನ್ನು ಕಟ್ಟಬೇಕೆಂದು ಕವಿ ವೇಣು ಜಾಲಿಬೆಂಚಿ ಗಟ್ಟಿ ಮನಸ್ಸು ಮಾಡಿದ್ದಾರೆ’ ಎಂದಿದ್ದಾರೆ.
ಕವಿ ವೇಣು ಜಾಲಿಬೆಂಚಿ ಅವರದ್ದು ಮೂಲತಃ ರಾಯಚೂರು. 1982 ಆಗಸ್ಟ್ 01ರಂದು ಜನನ. ತಮ್ಮ ಜಿಲ್ಲೆಯಲ್ಲೇ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರ ‘ತಿಳಿಯದೇ ಹೋದೆ’ ಕವನ ಸಂಕಲನ 2018ರಲ್ಲಿ ಪ್ರಕಟವಾಗಿದೆ. ಗಜಲ್‌ನಲ್ಲೂ ಆಸಕ್ತಿ ಹೊಂದಿರುವ ಅವರ ಹಲವಾರು ಕವನಗಳು ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ...
READ MORE