ತಿಳಿನೀರು

Author : ಪ್ರಭಾಕರ ಬಿಳ್ಳೂರು

Pages 45

₹ 1.00




Year of Publication: 1972
Published by: ಚಂದ್ರಗಂಗಾ ಜ್ಞಾನಪೀಠ ಪ್ರಕಾಶನ
Address: ಮಿರ್ಜಿ ಅಣ್ಣಾರಾಯ, ಶಾಂತಿ ಸೇವಾ ಸದನ, ಶೇಡಬಾಳ, ಜಿಲ್ಲೆ: ಬೆಳಗಾವಿ.

Synopsys

ಕವಿ-ಸಾಹಿತಿ ಪ್ರಭಾಕರ ಬಿಳ್ಳೂರು ಅವರು ಬರೆದ ಮೊದಲ ಕವನ ಸಂಕಲನ-ತಿಳಿನೀರು. ಸುತ್ತಲಿನ ಜೀವನದ ಸುಖ-ದುಃಖಗಳೊಂದಿಗೆ ಆಂತರ್ಯದಲ್ಲಿ ಸಾಧಿಸಬೇಕಾದ ವಿಕಾಸದೆಡೆಗೆ ಇಲ್ಲಿಯ ಕವನಗಳು ಆಶಿಸುತ್ತವೆ. ಸಾಬರಮತಿಯ ಸಂತ ಮಹಾತ್ಮಗಾಂಧಿ, ಶರಣೆ ಅಕ್ಕಮಹಾದೇವಿ ಮುಂತಾದ ಮಹನೀಯರ ವ್ಯಕ್ತಿ ಗೌರವವು ಪ್ರತಿಯೊಬ್ಬರ ಬಾಳಿನ ಜೀವಾಳವೂ ಆಗಬೇಕು ಕವಿತೆಗಳ ಸ್ಥಾಯಿ ಹಾಗೂ ಕೇಂದ್ರ ಭಾವ.

ಕಾದಂಬರಿಕಾರ ಮಿರ್ಜಿ ಅಣ್ಣಾರಾಯರು ಮುನ್ನುಡಿಯಲ್ಲಿ ‘ಕವಿ ಜೀವನಕ್ಕೆ ಭಕ್ತಿಭಾವವು ಇಲ್ಲಿ ಎಲ್ಲ ಕವನಗಳಲ್ಲಿ ಮೂಡಿನಿಂತಿದೆ ಎಂದು ಪ್ರಶಂಸಿಸಿದ್ದಾರೆ. ಇಲ್ಲಿಯ ಬಹುತೇಕ ಕವನಗಳು ಸಂಯುಕ್ತ ಕರ್ನಾಟಕ, ಸುಧಾ, ಕಲ್ಯಾಣ ಕಿರಣ, ಕನ್ನಡಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಎಂದು ಲೇಖಕರು ಕೃತಿಗೆ ಬರೆದ ತಮ್ಮ ಮಾತುಗಳಲ್ಲಿ ಸ್ಪಷ್ಟಪಡಿಸಿದ್ದಾರೆ. 

 

About the Author

ಪ್ರಭಾಕರ ಬಿಳ್ಳೂರು
(01 December 1938 - 13 February 2019)

ಪ್ರಭಾಕರ ಬಿಳ್ಳೂರು ಅವರು ಬೆಳಗಾವಿ ಜಿಲ್ಲೆಯ ಅಥಣಿಯವರು (ಜನನ: 01-12-1938) ಅಥಣಿಯಲ್ಲೇ ಪಿಯುಸಿ ನಂತರ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಎಂಎ. ತದನಂತರ ಬಿ.ಇಡಿ ಪದವಿ ಪಡೆದರು. ಶಿರುಗುಪ್ಪಿಯ  ಶ್ರೀ ಸಿದ್ದೇಶ್ವರ ವಿದ್ಯಾಲಯದ ಮುಖ್ಯೋಪಾಧ್ಯಯರಾಗಿ ನಿವೃತ್ತರಾದರು. ಇವರ ಮೊದಲ ನಾಟಕ-ಶ್ರೀ ಧರ್ಮ ರಕ್ಷಕ ಮಹಾವೀರ’. ಮೊದಲ ಕವನ ಸಂಕಲನ-ತಿಳಿನೀರು. ಪೂಜ್ಯ ಮಾತಾಜಿ ಪ್ರಕಾಶನ ಸಂಸ್ಥೆಯೊಂದನ್ನುಸ್ಥಾಪಿಸಿದ್ದರು. ಮಿರ್ಜಿ ಅಣ್ಣಾರಾಯರ ಚಂದ್ರಗಂಗಾ ಜ್ಞಾನಪೀಠ ಪ್ರಕಾಶನವು ಇವರ ‘ತಿಳಿನೀರು’ ಕವನ ಸಂಕಲನವನ್ನು ಪ್ರಕಟಿಸಿತ್ತು. ಸಿಂಪಿಯೊಡೆದ ಮುತ್ತುಗಳು-ಎಂಬುದು ಇವರ ಮತ್ತೊಂದು ಕವನ ಸಂಕಲನ. 2019ರ ಫೆಬ್ರವರಿ 13 ರಂದು ನಿಧನರಾದರು. ...

READ MORE

Related Books