ಸ್ವಯಂ ದೀಪ

Author : ವಿದ್ಯಾಶ್ರೀ ಅಡೂರ್

Pages 78

₹ 100.00




Year of Publication: 2021
Published by: ಆಡೂರು ಪ್ರಕಾಶನ
Address: ಮುಂಡಾಜೆ-574228

Synopsys

’ಸ್ವಯಂ ದೀಪ’ ಕೃತಿಯು ಕವಯತ್ರಿ ವಿದ್ಯಾಶ್ರೀ ಅಡೂರ್ ಅವರ ಕವನಸಂಕಲನ. ಬದುಕಿನ ದ್ವಂದ್ವ ಹಾಗೂ ಮನಸ್ಸಿನ ಯೋಚನೆಗಳ ಬಗ್ಗೆ ತಮ್ಮ ಕವಿತೆಗಳಲ್ಲಿ ಮಾತಾಡುತ್ತಾರೆ. ’ಸ್ವಯಂ ದೀಪ’ ಬಾಲ್ಯದಲ್ಲಿ ಕಂಡಂತಹ ಪ್ರಕೃತಿಯನ್ನು ತನ್ನಲ್ಲೇ ವಿವರಿಸುತ್ತಾ, ನದಿ, ತೊರೆ, ಮರ, ಗಿಡ, ಬದುಕಿನ ಘಟನೆಗಳು ಇನ್ನೂ ಅನೇಕ ಸಂಗತಿಗಳಿಗೆ ಅಕ್ಷರ ರೂಪವನ್ನು ನೀಡಿದ್ದಾರೆ. ಕವಯಿತ್ರಿ ಇಲ್ಲಿ ತಾನು ಕಂಡ ವಿಷಯಗಳಿಗೆ ಕವನದ ರೂಪ ಕೊಟ್ಟಿದ್ದಾರೆ. ಕೊರೊನಾ ಕೂಡ ಹಲವಾರು ಕವಿತೆಗಳ ವಸ್ತುವಾಗಿದೆ.

ಕೃತಿಗೆ ಮುನ್ನುಡಿ ಬರೆದಿರುವ ಪ್ರಾಧ್ಯಾಪಕ ಪ್ರೇಮಶೇಖರ ಅವರು, ಕಾವ್ಯಲೋಕಕ್ಕೆ ಕಾಲಿಡುವ ಬಹತೇಕ ಹೆಣ್ಣುಮಕ್ಕಳಂತೆ ವಿದ್ಯಾಶ್ರೀ ಸಹಾ ಆಯ್ದುಕೊಳ್ಳುವ ವಸ್ತುಗಳು ಪ್ರಕೃತಿ ಮತ್ತದರ ನಿತ್ಯವೂ ಬದಲಾಗುವ ರೂಪಗಳು; ತಾಯಿ ಮತ್ತವಳ ಪ್ರೀತಿ, ಬಾಲ್ಯದ ನೆನಪುಗಳು ; ಮಾಂತ್ರಿಕವೂ, ಯಾಂತ್ರಿಕವೂ ಆಗಿರುವ ಬದುಕು; ಆ ಬದುಕಿನ ಹಾದಿಯಲ್ಲಿ ನನಸಾಗದ ಕನಸುಗಳು. ಹೀಗೆ ಎಲ್ಲವೂ ಕೂಡ ಇಲ್ಲಿ ಕವಿಯ ವಸ್ತುವಾಗಿದೆ. ಇಲ್ಲಿರುವ ‘ಮೆಲ್ಲಗೆ ಅರಳುತ್ತಿರುವ ಸೃಜನಶೀಲ ಮಲ್ಲಿಗೆ’ ಶೀರ್ಷಿಕೆಯ ಕವಿತೆಯೊಂದು ಹೀಗಿದೆ;
ಕವಿತೆಯೆಂದರೆ ಮನದೊಳಗೊಂದು
ಚುಚ್ಚುವ ನೋವು...
ಕವಿತೆಯೆಂದರೆ ಉಕ್ಕಿಹರಿವ
ಮನಸಿನ ನಲಿವು...

ಎನ್ನುತ್ತಾ ಕವಿತೆಯೆನ್ನುವುದು ಬದುಕಿನ ಎರಡು ವೈರುಧ್ಯಗಳ ನಡುವಿನ ಅನಂತ ವಿಸ್ತಾರದಲ್ಲಿ ಹರಡಿಹೋಗಿರುವುದೆಲ್ಲವನ್ನೂ ವಿವರಿಸುತ್ತದೆ. ‘ಮನದ ಇನಿ ದನಿ’ ಶೀರ್ಷಿಕೆಯ ಕವಿತೆಯೊಂದು ಕವಿತೆಯ ರೂಪವನ್ನು ಹೀಗೆ ಕಟ್ಟಿಕೊಟ್ಟಿದೆ;
ಭಾವ ಪರವಶಳೂ ನಾ
ಆ ದೇವನಾಸರೆಗೆ...
ಜೀವತಂತುವ ಸೆಳೆದು
ಬೆಸೆವಂತ ಈ ಪರಿಗೆ ...

ಸಿಲುಕದೆ  ಸಿಕ್ಕುಗಳಲ್ಲಿ
ನಡೆಯುವ ಮಾತುಗಳೆಲ್ಲಿ
ಕಾಯ್ವಂತ ಕೈಗಳು ಇರದೇ...
ಧಾವಂತದೀ ಭವದೊಳಗೆ...

ಇವೆಲ್ಲವುಗಳ ನಡುವೆ ಕವಯಿತ್ರಿ ನಾವು ಊಹಿಸಲಾಗದ ಬಗೆಯಲ್ಲಿ ಕಣ್ಸೆಳೆಯುವ ಮಟ್ಟಿಗೆ ಅಂದವಾಗಿ, ಸುಂದರವಾಗಿ, ಆಕರ್ಷಕವಾಗಿ ಎದುರುನಿಂತುಬಿಡುತ್ತಾಳೆ. ಮತ್ತೆ ಮತ್ತೆ ದಕ್ಕುವ ಪ್ರೆಸೆಂಟ್ ಸರ್ಪ್ರೈಸ್ ಗಳು ಭಾವಜೀವಿಯೂ ಹಾಗೂ ಅಷ್ಟೇ ವಾಸ್ತವವಾದಿಯೂ ಆಗಿರುವ ವಿದ್ಯಾಶ್ರೀಯವರನ್ನೂ ಮತ್ತಷ್ಟು ಹತ್ತಿರದಿಂದ ನೋಡುವಂತೆ ನಮ್ಮನ್ನು ಪ್ರೇರೆಪಿಸುತ್ತದೆ ಎಂದಿದ್ದಾರೆ.  

About the Author

ವಿದ್ಯಾಶ್ರೀ ಅಡೂರ್

ಲೇಖಕಿ ವಿದ್ಯಾಶ್ರೀ ಅಡೂರ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆಯವರು. ಬಿ.ಎ ಪದವೀಧರರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ. ಕೃತಿಗಳು: ಸ್ವಯಂ ದೀಪ ...

READ MORE

Related Books