ಸ್ಥಾಪಿತ ಬದುಕಿನಲ್ಲಿ ಚಲನಶೀಲವಾಗದೇ ಯಾವ ಅನುಭವಗಳು ದಕ್ಕದೆಂದು ಕವಿ ಇಲ್ಲಿನ ಕವಿತಗಳಲ್ಲಿ ಸಾರಿದಂತಿದೆ. ಸುಖ ದುಃಖ,ನೋವು ನಲಿವು, ಸಿಟ್ಟು ಸೆಡವು ಎಲ್ಲವನ್ನು ಜೊತೆಗಿರಿಸಿಕೊಂಡು ಸಾಗುವ, ಸಂಯಮದ ಬದುಕು ರೂಪಿಸುವ ದಿಸೆಯಲ್ಲಿ ಪ್ರಯತ್ನಗಳು ಸಾಗಬೇಕೆಂದು ಕವಿ ಇಲ್ಲಿ ಆಶಿಸುತ್ತಾರೆ.
‘ನೆಟ್ಟು ಬೆಳೆಸಿದ ಮರಗಳು ನಾವು ಈ ಭೂಮಿಯ ಮೇಲೆ, ಸಿಟ್ಟು ಬಿಟ್ಟು ಸಂಯಮದಿ ಬರೆಯಬೇಕು ಭೂತಾಯಿಯ ಲೀಲೆ’ ಹೀಗೆ ಅವರ ಕವಿತೆಗಳು ಮಾನವರ ಮಾನವೀಯತೆಯನ್ನು ಪ್ರಕೃತಿಯೊಂದಿಗೆ ಓದುಗರ ಭಾವವನ್ನು ಸಂದಿಸುತ್ತವೆ.
ಸುರೇಶ ಎಲ್. ರಾಜಮಾನೆ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೋಕಿನವರು. ಸದ್ಯ ರಾಯಚೂರು ಜಿಲ್ಲೆ ಲಿಂಗಸಗೂರಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಸುರೇಶ್ ಅವರು 'ಸುಡುವ ಬೆಂಕಿಯ ನಗು' ಮತ್ತು 'ಮೌನ ಯುದ್ಧ' ಎಂಬ ಎರಡು ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ. ...
READ MORE