‘ಸೂರ್ಯ ಕಂದೀಲು ಹಿಡಿದು ಬರಲಿ’ ಲೇಖಕ ಡಾ. ಸಿ.ಬಿ. ಚಿಲ್ಕರಾಗಿ ಅವರ ಎರಡನೇ ಕವನ ಸಂಕಲನ. ಇಲ್ಲಿಯ ಕವಿತೆಗಳಲ್ಲಿ ವಿಭಿನ್ನತೆ ಇದೆ. ರಾತ್ರಿ ನೋಡಲು ಸೂರ್ಯ ಬರಲಿ ಆದರೆ ಅವನು ಪಥಭ್ರಷ್ಟನಾದರೆ ಬೆಳಕು ಇರುವುದಿಲ್ಲ ಎನ್ನುವ ಕವಿ ಪ್ರಥಭ್ರಷ್ಟರಾದವರೆಲ್ಲರಿಗೂ ತಮ್ಮ ಶಕ್ತಿಗಳು ಮಾಯವಾಗುತ್ತವೆ ಎಂದು ಎಚ್ಚರಿಸುತ್ತಾರೆ. ಇದಕ್ಕೆ ಸೂರ್ಯನೂ ಹೊರತಲ್ಲ. ಹಾಗಾಗಿ ಕತ್ತಲಿನ ಮನುಷ್ಯರನ್ನು ನೋಡಲು ಸೂರ್ಯ ಕಂದೀಲು ಹಿಡಿದು ಬರಬೇಕೆನ್ನುವ ಕಲ್ಪನೆ ಚಿಲ್ಕರಾಗಿಯವರದ್ದು. ಇಂಥ ವಿಚಾರಗಳನ್ನು ಪ್ರತಿಪಾದಿಸುವ ಐವತ್ತು ಕವನಗಳು ಈ ಸಂಕಲನದಲ್ಲಿವೆ.
ಡಾ. ಸಿ.ಬಿ. ಚಿಲ್ಕರಾಗಿ ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಚಿಲ್ಕರಾಗಿ ಗ್ರಾಮದವರು. ಚಿಲ್ಕರಾಗಿ, ಗುಡಿಹಾಳ, ಮಸ್ಕಿ ಮತ್ತು ಕೊಪ್ಪಳ ಜಿಲ್ಲೆಯ ಕನಕಗಿರಿ, ಗಂಗಾವತಿ ಪ್ರೌಢ ಶಿಕ್ಷಣ ಹಾಗೂ ಕಾಲೇಜು, ಪದವಿ ಶಿಕ್ಷಣ ನಂತರ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದರು. ಸದ್ಯಕ್ಕೆ, ಕೊಪ್ಪಳ ಜಿಲ್ಲಾ ಕೇಂದ್ರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದಾರೆ. ಕೃತಿಗಳು:ತಿಳಿವಳಿಕೆ ಬಯಲು, ನೂರೆಂಟು ನಾಯಿ ಬೊಗಳಿದರೇನು, ಪಣತಿ ಮತ್ತು ಮಹಾನವಮಿ, ಎಲ್ಲಿತ್ತು ಈ ಮೊದಲು ಎಲ್ಲಿಂದ ಬಂತವ್ವ ಹಾಗೂ ಹಮ್ಮಿಗೆ ಬ್ರಹ್ಮ ತಾ ಕೆಟ್ಟ ಎನ್ನುವ ಕೃತಿಗಳನ್ನುರಚಿಸಿದ್ದಾರೆ. ...
READ MORE