ಕವಿ ಚನ್ನಪ್ಪ ಕಟ್ಟಿಯವರ ಕವನ ಸಂಕಲನ ಸೂರ್ಯನಿಗೆ ‘ಸಾವ ನೋಡಲು ಬೇಸರವಿಲ್ಲ’. ಚನ್ನಪ್ಪ ಕಟ್ಟಿಯವರ ಈ ಸಂಕಲನದಲ್ಲಿ ವೈವಿಧ್ಯಪೂರ್ಣ ಕವಿತೆಗಳಿವೆ. ಮತ್ತೆ ಮತ್ತೆ ಓದಿದಾಗ, ಇಡಿಯಾಗಿ ಅವುಗಳ ಸತ್ವ ಇನ್ನಷ್ಟು ಶಕ್ತಿ ಪಡೆದುಕೊಂಡು ದಟ್ಟವಾದ ಅನುಭವಗಳನ್ನು ಕಟ್ಟಿಕೊಡುತ್ತದೆ. ಒಂದು ಚಳುವಳಿಯಲ್ಲಿ ಹಾಯ್ದು ಬಂದಾಗಲೂ ತನ್ನ ಸೃಜನಶೀಲತೆಯ ಸಹಜಗುಣವನ್ನು ಚನ್ನಪ್ಪ ಕಟ್ಟಿ ಕಾಯ್ದುಕೊಂಡಿದ್ದಾರೆ ಎಂಬುದಕ್ಕೆ ಈ ಕೃತಿ ಸಾಕ್ಷಿ.
ಡಾ. ಚನ್ನಪ್ಪ ಕಟ್ಟಿಯವರ ಪೂರ್ಣ ಹೆಸರು ಚನ್ನಪ್ಪ ಕನಕಪ್ಪ ಕಟ್ಟಿ. ಮೂಲತಃ ಗದಗ ಜಿಲ್ಲೆ, ರೋಣ ತಾಲ್ಲೂಕು ಹಿರೇಹಾಳ ಗ್ರಾಮದವರು. ಪ್ರಾಥಮಿಕ ಶಿಕ್ಷಣವನ್ನು ಹಿರೇಹಾಳ ಗ್ರಾಮದಲ್ಲಿ ಮುಗಿಸಿದ ಅವರು ಮಾಧ್ಯಮಿಕ ಶಿಕ್ಷಣವನ್ನು ಶ್ರೀ ವೀರಪುಲಿಕೇಶಿ ಮಾಧ್ಯಮಿಕ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ಆನಂತರ ಶ್ರೀವೀರಪುಲಿಕೇಶಿ ಪದವಿ ಪೂರ್ವ ಮಹಾವಿದ್ಯಾಲಯ, ಬಾದಾಮಿಯಲ್ಲಿ ಪದವಿ ಪೂರ್ಣ ಶಿಕ್ಷಣ ಪಡೆದ ಅವರು, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡದಲ್ಲಿ ಇಂಗ್ಲಿಷ್ ನಲ್ಲಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆನಂತರ ಸಿಂದಗಿಯ ಜಿ.ಪಿ.ಪೋರವಾಲ ಕಲಾ, ವಾಣಿಜ್ಯ ಹಾಗೂ ವಿ.ವಿ.ಸಾಲಿಮಠ ವಿಜ್ಞಾನ ...
READ MORE