‘ಸುಮಿತ್ರಾನಂದನ ಪಂತ ಕವಿತೆಗಳು’ ಕೃತಿಯು ಕಾಶೀನಾಥ ಅಂಬಲಗೆ ಅವರ ಕವನಸಂಕಲನವಾಗಿದೆ. ಹಿಂದಿ ಸಾಹಿತ್ಯದ ಜ್ಞಾನಪೀಠ ಪುರಸ್ಕೃತ ಕವಿ ಸುಮಿತ್ರಾ ನಂದನ್ ಸಂತ'ರು ರಚಿಸಿರುವ ಕವಿತೆಗಳನ್ನು ಕನ್ನಡಕ್ಕೆ ಪ್ರೊ. ಕಾಶೀನಾಥ ಅಂಬಲು ಅನುವಾದಿಸಿದ್ದಾರೆ. ಹಿಂದಿಯ ಕಾವ್ಯ ಪ್ರಪಂಚಕ್ಕೆ ಹೊಸ ಹಾದಿಯನ್ನು ತೋರಿದವರು, ಹೊಸ ದಿಕ್ಕಿಗೆ ಕೊಂಡೊಯ್ದು ಆಧುನಿಕ ಹಿಂದಿ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಸುಮಿತಾನಂದನ್, ಈ ಸಂಕಲನದ ಪ್ರತಿ ಕವಿತೆಯೂ ಸೃಜನಶೀಲತೆಯ ಕಸುವಿನಿಂದ ಕೂಡಿದೆ. ಆಧುನಿಕ ಪ್ರಜ್ಞೆಯ ಈ ಕಾವ್ಯ ಸಂಕಲನ ವರ್ತಮಾನದ ಸಂಘರ್ಷಗಳ ಹಿನ್ನೆಲೆಯಲ್ಲಿ ಹೊಸ ಸಾಂಸ್ಕೃತಿಕ ಪ್ರೇರಣೆಗಳನ್ನೂ, ಹೊಸ ಸೌಂದರ್ಯ ಪ್ರಜ್ಞೆಯ ಭಾವನೆಗಳನ್ನೂ ಭೌತಿಕ ಹಾಗೂ ಆಧ್ಯಾತ್ಮಿಕ ವಿಕಾಸಗಳನ್ನು ಸಮನ್ವಯಗೊಳಿಸುತ್ತದೆ.
ನೈತಿಕ ಮತ್ತು ಮಾನವೀಯ ಪ್ರಜ್ಞೆಯ ಬೆಳಕನ್ನು ಕಟ್ಟಿಕೊಡುತ್ತದೆ. ಸುಮಾರು 40 ಕವನಗಳನ್ನೊಳಗೊಂಡಿರುವ ಕಾವ್ಯಕೃತಿ ಪ್ರಾರಂಭದಲ್ಲಿ ಪ್ರಕೃತಿಯ ನಿರ್ಮಲ ಸೌಂದರ್ಯವನ್ನು ಚಿತ್ರಿಸುತ್ತಾ, ಸಮಾಜವಾದದ ವಿಚಾರಧಾರೆಗಳಿಗೆ ಪ್ರಭಾವಿತಗೊಂಡು ಲೋಕ ಕಲ್ಯಾಣದ ಆಶಯಗಳ ಕುರಿತು ಮಾತನಾಡುತ್ತದೆ. ನಂತರದಲ್ಲಿ ಸತ್ವದರ್ಶನದ ಹುಡುಕಾಟದಲ್ಲಿ ತೊಡಗುತ್ತದೆ. ಹೀಗೆ ವಿಶ್ವ ಮಾನವತೆಯ ಸತ್ಯವನ್ನು ಹುಡುಕುವ ಮತ್ತು ಪ್ರತಿಪಾದಿಸುವ ಇಲ್ಲಿನ ಕವಿತೆಗಳು ಮತ್ತೆ ಮತ್ತೆ ಓದಿಸಿಕೊಳ್ಳುತ್ತವೆ. ಪ್ರತಿಬಾರಿಯ ಓದೂ ಸಹ ಹೊಸ ಹೊಸ ಆರ್ಥಗಳನ್ನು ಸ್ಪುಟಿಸುತ್ತದೆ.
ಒಟ್ಟಾರೆ ಸಾಮಾಜಿಕ ಚಿಂತನೆಯ ಮಾಗಿದ ಅನುಭವ ಈ ಸಂಕಲನದಲ್ಲಿ ಕಾಣಬಹುದು. ಹಾಗೆಯೇ ಸಮಾಜವನ್ನು ಆಧುನಿಕ ನೆಲೆಯಿಂದ ಕಾಣುವುದು ಸಹ ಕವಿಯ ಸಮಕಾಲೀನ ಪ್ರಜ್ಞೆಗೆ ಸಾಕ್ಷಿಯಾಗಿದೆ. ಅನುವಾದವೂ ಸಹ ಕವಿಯ ಆಶಯಗಳಿಗೆ ಭಂಗ ಬರದಂತೆ ಮೂಡಿಬಂದಿದೆ.
ಕಾಶೀನಾಥ ಅಂಬಲಗೆ ಅವರು ಹುಟ್ಟಿದ್ದು 10-07-1947 ರಲ್ಲಿ. ಬೀದರ ಜಿಲ್ಲೆಯ, ಬಸವಕಲ್ಯಾಣ ತಾಲೂಕಿನ ಮುಚಳಂಬಿ ಎಂಬ ಗ್ರಾಮದಲ್ಲಿ. ಇವರ ತಂದೆ ರಾಚಪ್ಪ ಅಂಬಲಗೆ, ತಾಯಿ ಗುರಮ್ಮ ಅಂಬಲಗೆ. ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅಂಬಲಗೆ ಹಿಂದಿ ಭಾಷೆಯಲ್ಲೂ ಎಂ.ಎ ಪದವಿ ಗಳಿಸಿದ್ದಾರೆ. ಬಿ.ಎಡ್ ಜೊತೆಗೆ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಪಿಎಚ್.ಡಿ ಪದವಿಯನಂತರ ಅಧ್ಯಾಪಕ ವೃತ್ತಿಯನ್ನು ಆಯ್ದುಕೊಂಡ ಅವರು ಮಹಾವಿದ್ಯಾಲಯದಲ್ಲಿ 21ವರ್ಷ, ವಿಶ್ವವಿದ್ಯಾಲಯದಲ್ಲಿ 12 ವರ್ಷ ಹಿಂದಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ತೊಡಗಿಸಿಕೊಂಡಿದ್ದಾರೆ. ಕವಿ, ಲೇಖಕ, ಸಾಹಿತಿ, ಕಾದಂಬರಿಗಾರರಾದ ಅಂಬಲಗೆ ಅನುವಾದಕರಾಗಿಯೂ ಪ್ರಸಿದ್ಧರು. ಜೊತೆಗೆ ...
READ MORE