ಮಧುರಾ ಮೂರ್ತಿ ಇವರ ರಚನೆಯ 'ಸುಮಧುರ ಮುಕ್ತಕ' ಸಂಕಲನ ಮುಕ್ತಕಗಳ ಮಾಲೆಯಾಗಿದೆ. ಇದು ಶ್ರೀಮತಿ ಶೋಭಾ ಹರಿಪ್ರಸಾದ್ ಇವರ ಮುನ್ನುಡಿಯೊಂದಿಗೆ, ಟಿ.ಎನ್.ಶಿವಕುಮಾರ್(ತನಾಶಿ) ಅವರ ಬೆನ್ನುಡಿಯೊಂದಿಗೆ ಮತ್ತು ಎಂ.ಮುತ್ತುಸ್ವಾಮಿ ಅವರ ಹೊನ್ನುಡಿಯೊಂದಿಗೆ ಆಕರ್ಷಿಸುವಂತೆ 775 ಮುಕ್ತಕಗಳಿಂದ ಕೂಡಿದೆ. ಮುಕ್ತಕ ಇದು ಛಂದೋಬದ್ಧ ಕಾವ್ಯದ ಒಂದು ಪ್ರಕಾರವಾಗಿದ್ದು ನಿಯಮಬದ್ಧವಾಗಿ ಒಂದು ಉತ್ತಮ ಸಾಮಾಜಿಕ ಸಂದೇಶವನ್ನು ನಾಲ್ಕು ಸಾಲಿನಲ್ಲಿ ಹೇಳುವ ಸಾಹಿತ್ಯ ಶೈಲಿಯಾಗಿದೆ. ಇವರು ತಮ್ಮ ಮುಕ್ತಕಗಳಲ್ಲಿ ಪರಿಸರ ಕಾಳಜಿ, ಸಾಮಾಜಿಕ ಕಳಕಳಿ, ಅತಿಯಾದ ಬಯಕೆಗಳ ಫಲ, ಹೆಣ್ಣಿನ ಬಗ್ಗೆ ತೋರುವ ನಿರ್ಲಕ್ಷ್ಯ ಹೀಗೆ ನಾನಾ ಪ್ರಕಾರಗಳಲ್ಲಿದ್ದು ಧನಾತ್ಮಕ ಚಿಂತನೆಗಳನ್ನು ಮೂಡಿಸುವಂತೆ ಅರ್ಥಪೂರ್ಣ ಮುಕ್ತಕಗಳನ್ನು ರಚಿಸಿ ಓದಲು ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನದಿಂದ ತಮ್ಮ ಮುಂದೆ ಪ್ರಸ್ತುತಪಡಿಸಿದ್ದಾರೆ. ಓದಲು ಯೋಗ್ಯವಾದ, ಲಯಬದ್ಧವಾಗಿ ಹಾಡಬಹುದಾದ ಕೃತಿ ಈ 'ಸುಮಧುರ ಮುಕ್ತಕ'
ಕವಯತ್ರಿ ಮಧುರಾ ಎನ್. ಭಟ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಗೋಡು ಗ್ರಾಮದವರು. ಹೊನ್ನಾವರದಲ್ಲಿ ವ್ಯಾಸಂಗ ಮಾಡಿದ್ದು, ಸದ್ಯ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಾರೆ. ತಮ್ಮದೇ ಸಿ ಎನ್ ಸಿ ಮ್ಯಾನ್ಯುಫ್ಯಾಕ್ಚರಿಂಗ್ ಕಂಪನಿ ಹೊಂದಿದ್ದಾರೆ. ಗಝಲ್, ಕವಿತೆ, ಛಂದೋಬದ್ಧ ಕಾವ್ಯ ಹೀಗೆ ಸಾಹಿತ್ಯದ ಹಲವಾರು ಪ್ರಕಾರಗಳ ರಚನೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಕೃತಿಗಳು: ಮಧುರ, ಗೋಧೂಳಿ (ಗಜಲ್ ಸಂಕಲನಗಳು) ...
READ MORE