ಕವಿ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರ ಕವನ ಸಂಕಲನ- ಸುಗಂಧ ಪುಷ್ಪಗಳು. ಒಟ್ಟು 26 ಕವನಗಳನ್ನು ಸಂಕಲಿಸಲಾಗಿದೆ. ಕಾಲಮಾನದ ಅಂಶಗಳಿಗೆ ಸ್ಪಂದಿಸಿ ಸಾಮಾಜಿಕ ಕಳಕಳಿಯನ್ನು ತುಂಬಿಕೊಂಡು ಜೀವನಮೌಲ್ಯಗಳ ಸ್ಥಾನಕ್ಕಾಗಿ ಪರಿಸರ ಘಮಲು ತುಂಬಲು ಪ್ರಯತ್ನಿಸಿವೆ. ಮಹಿಳೆಯ ಆಕ್ರಂದನ, ಮುಖಂಡ,ದೇವರ ನ್ಯಾಯ, ನಿರಾಶ್ರಿತರು, ಎಲ್ಲಿಗೆ ಬಂದು ಪ್ರಜಾಪ್ರಭುತ್ವ,ಜಾತಿ ವಿಷಬೀಜ, ಮತದಾರ, ವರದಕ್ಷಿಣೆ, ಹದಗೆಟ್ಟ ರಾಜಕೀಯ, ಹೊಲಸಾದ ಸಮಾಜ, ಕುಡುಕರ ಸಾಮ್ರಾಜ್ಯ, ಇತ್ಯಾದಿ ಕವಿತೆಗಳು ಗಮನ ಸೆಳೆಯುತ್ತವೆ ಎಲ್ಲ ಕನಸುಗಳು ಸಾಮಾನ್ಯ ಪ್ರಜೆಯ ಅರ್ಥ ಪ್ರಜಾಪ್ರಭುತ್ವದ ಪ್ರಭುವಿನಲ್ಲಿ ಇರುವ ತೊಳಲಾಟವನ್ನು ದೀನತೆಯಿಂದ ಅಸಹಾಯಕತೆಯನ್ನು ಸಂಕೋಚವಿಲ್ಲದೆ ಅನಾವರಣಗೊಳಿಸಿವೆ ಈ ಅನಾವರಣದ ವ್ಯಾಖ್ಯಾನದಲ್ಲಿ ದೇಶ ಸಮಾಜದ ಹದಗೆಡಬೇಕಾದರೆ ಇದಕ್ಕೆ ಕಾರಣ ಯಾರು ಎಂಬ ಪ್ರಶ್ನೆಗೆ ಉತ್ತರ ಪ್ರತಿಯೊಬ್ಬನು ಎಂಬುದನ್ನು ತನ್ನಲ್ಲಿಯೇ ಕಂಡುಕೊಳ್ಳುವ ಸತ್ಯವಾಗಿರುತ್ತದೆ' ಎಂಬ ಸಂದೇಶವೂ ಕವನಗಳ ಮೂಲಕ ನೀಡಿದ್ದಾರೆ..
ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಬಾಚನಾಳ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಕಮಲಾಪುರದಲ್ಲಿ ಪಿಯುಸಿ, ಕಲಬುರಗಿಯಲ್ಲಿ ಪದವಿ ಶಿಕ್ಷಣ ಪೂರೈಸಿದರು. ಸರ್ಕಾರದ ವಿವಿಧ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಂತರ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರರಾಗಿ (2006) ನಿವೃತ್ತರಾದರು. ಕಮಲಾಪುರ ಸುತ್ತಮುತ್ತಲಿನ ಸಾಧು-ಸಂತರ ಬಗ್ಗೆ, ಜಾನಪದ,ವಚನ ಸಾಹಿತ್ಯ,ನಾಟಕ, ಕವನ, ಜೀವನ ಚರಿತ್ರೆ,ಕುರಿತು 30ಕ್ಕಿಂತ ಹೆಚ್ಚು ಕೃತಿಯನ್ನು ರಚಿಸಿದ್ದಾರೆ. ಕೃತಿಗಳು: ಬದುಕಿನ ಪ್ರಜ್ಞೆ, ಕಾನನದ ಹೂಗಳು, ಸುಗಂಧ ಪುಷ್ಪಗಳು, ಸುಮಂಗಲ ಗೀತೆಗಳು (ಸಂ) ಜೇನುಹನಿ (ಕವನ ಸಂಕಲನ), ನಿತ್ಯಸತ್ಯ (ಚಿಂತನಗಳು), ಜನಮೆಚ್ಚಿದ ನಾಯಕ ಶ್ರೀ ಶಂಕರಶೆಟ್ಟಿ ಪಾಟೀಲರು ...
READ MORE