‘ಸೌಗಂಧಿಕಾ’ ವಿಶಾಲಾ ಆರಾಧ್ಯ ಅವರ ಕವನ ಸಂಕಲನ. ಈ ಕೃತಿಗೆ ವೈ.ಬಿ.ಎಚ್. ಜಯದೇವ್ ಅವರು ಬೆನ್ನುಡಿ ಬರೆದು ‘ಇಲ್ಲಿಯ ಕವಿತೆಗಳಲ್ಲಿ ಪಳಗಿದ ಭಾಷೆ, ತೀವ್ರವಾದ ಸಂವೇದನೆಗಳು, ಸಮಕಾಲೀನತೆಯ ಎಚ್ಚರ, ಲಯಗಾರಿಕೆ, ಕ್ಲೀಷೆಯಿಲ್ಲದೆ ಭಾಷೆ ಎಲ್ಲವೂ ವಿಶಾಲಾ ಆರಾಧ್ಯ ಅವರ ಕಾವ್ಯ ಪ್ರತಿಭೆಗೆ ಸಾಕ್ಷಿಯಾಗಿವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟು 56 ಕವಿತೆಗಳ ಈ ಭಾವಗುಚ್ಛ-ಸೌಗಂಧಿಕಾದಲ್ಲಿ, ಬದುಕಿನ ನೋವಿನ ಕ್ಷಣಗಳ ಜೊತೆಗೆ ಆತ್ಮೀಯ ಸಂಬಂಧಗಳನ್ನು ಸೂಕ್ಷ್ಮವಾಗಿ ನಿರೂಪಿಸುತ್ತಾರೆ. ಮೃದು ಭಾವಗಳು, ಮಧುರ ಯಾತನೆಗಳು, ವಿರಹ-ನೋವು ಇತ್ಯಾದಿ ಒಂದು ದೊಡ್ಡ ಭಾವ ಜಗತ್ತನ್ನೇ ತೆರೆದಿಡುವ ಇಲ್ಲಿಯ ಕವಿತೆಗಳು ಆಪ್ತ ಸಂವಾದದಂತಿವೆ.
ಕವಯತ್ರಿ ವಿಶಾಲಾ ಆರಾಧ್ಯ ಅವರು ಬೆಂಗಳೂರು ಜಿ. ಆನೇಕಲ್ ತಾಲ್ಲೂಕಿನ ರಾಜಾಪುರದವರು. ಎಂ.ಎ. ಕನ್ನಡ ಸ್ನಾತಕೋತ್ತರ ಪದವೀಧರರು. ಶಿಕ್ಷಕ ತರಬೇತಿ ಪೂರ್ಣಗೊಳಿಸಿದ್ದು, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅಭ್ಯಾಸಿಗಳು. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು, ತಮ್ಮ ಉತ್ತಮ ಸೇವೆಯಿಂದಾಗಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ಶಿಕ್ಷಕ ರತ್ನ ಪ್ರಶಸ್ತಿ, ಕನ್ನಡ ನಿಧಿ ಪ್ರಶಸ್ತಿ, ಸುವರ್ಣ ಸಂಭ್ರಮ ಶಿಕ್ಷಕ ಪ್ರಶಸ್ತಿ, ಆದರ್ಶ ಅಧ್ಯಾಪಕಿ ಪ್ರಶಸ್ತಿ, ಆದರ್ಶ ಮಹಿಳಾ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಸಂದಿವೆ. ಕವನ ಕತೆಗಳನ್ನು ಬರೆವ ಅವರು ವಿಶೇಷವಾಗಿ ಮಕ್ಕಳ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ. ಮಕ್ಕಳಿಗಾಗಿ ...
READ MORE