ನರಸಿಂಹಮೂರ್ತಿಯವರ ಕವನ ಸಂಕಲನ 'ಸೂರ್ಯದಂಡೆ'. ಈ ಕೃತಿಗೆ ಖ್ಯಾತ ಸಾಹಿತಿ ಜಿ.ಎಸ್. ಶಿವರುದ್ರಪ್ಪ ಬೆನ್ನುಡಿ ಬರೆದಿದ್ದಾರೆ. ‘ನರಸಿಂಹಮೂರ್ತಿಯವರ ಸೂರ್ಯದಂಡೆಯೊಳಗಿನ ಕವಿತೆಗಳು ತಮ್ಮ ವಸ್ತು ವೈವಿಧ್ಯ, ಬಂಧ ವೈವಿಧ್ಯ, ಮತ್ತು ಅನುಭವ ಪ್ರಪಂಚವನ್ನು ಅವರು ಗ್ರಹಿಸುವ ವಿಶಿಷ್ಟ ನಿಲುವುಗಳಿಂದಾಗಿ, ನನ್ನ ಮಟ್ಟಿಗೆ ತುಂಬ ಗಮನಾರ್ಹವಾದ ಪ್ರಯೋಗ ಮತ್ತು ಪರಿಣತಿಗಳನ್ನು ಪ್ರಕಟಿಸುತ್ತವೆ’ ಎಂದಿದ್ದಾರೆ ಜಿ.ಎಸ್.ಎಸ್. ಕನ್ನಡ ಕಾವ್ಯ ಪರಂಪರೆಯೊಳಗೆ ಬಹುದೂರದವರೆಗೆ ತಮ್ಮ ಬೇರುಗಳನ್ನು ಚಾಚುತ್ತಾ ಹೊಸಗನ್ನಡದ ಈವರೆಗಿನ ಹಲವು ಸಾಹಿತ್ಯ ಚಳುವಳಿಗಳೊಳಗಿನಿಂದ ಅನೇಕ ಅಪೇಕ್ಷಣೀಯವಾದ ಅಂಶಗಳನ್ನು ತಕ್ಕ ಎಚ್ಚರ ಹಾಗೂ ವಿವೇಚನೆಯಿಂದ ಅರಗಿಸಿಕೊಳ್ಳುತ್ತಾ ಒಂದು ಬಗೆಯ ಪುನರ್ಭವಗಳನ್ನು ಪಡೆದುಕೊಂಡಂತೆ ತೋರುವ ಇಲ್ಲಿನ ಹಲವು ಕವಿತೆಗಳು, ಮತ್ತೆ ನವೋದಯ ಕಾವ್ಯ ಸಂದರ್ಭವನ್ನು ನೆನಪಿಗೆ ತರುವಂಥ ಕಾಳಜಿಗಳನ್ನು, ಅದಮ್ಯವಾದ ಜೀವನಪ್ರೀತಿ ಹಾಗೂ ಉತ್ಸಾಹಗಳನ್ನು ಮೂಲಸ್ಥಾಯಿಯನ್ನಾಗಿ ಮಾಡಿಕೊಂಡಿವೆ.
ಕವಿ, ಕತೆಗಾರ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ, ಸಂಪಾದಕ, ಅನುವಾದಕ ಹೀಗೆ ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಬಿದರಹಳ್ಳಿ ನರಸಿಂಹಮೂರ್ತಿ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ. ಇಂಗ್ಲಿಷ್ ಉಪನ್ಯಾಸಕರಾಗಿ ಸರ್ಕಾರಿ ಸೇವೆಗೆ ಸೇರಿ ಪ್ರಿನ್ಸಿಪಲ್ ಆಗಿ ನಿವೃತ್ತರಾಗಿ ಹೊನ್ನಾಳಿಯಲ್ಲೇ ನೆಲೆಸಿದ್ದ ಬಿದರಹಲ್ಳಿಯವರು ಹೆಚ್ಚೂ ಕಡಿಮೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿಮಾಡಿದ್ದಾರೆ. ಅವರ ಪ್ರಕಟಿತ ಕೃತಿಗಳು: ಕಾವ್ಯ: ಕಾಡಿನೊಳಗಿದೆ ಜೀವ(1979), ಸೂರ್ಯದಂಡೆ(1996), ಅಕ್ಕಿಕಾಳು ನಕ್ಕಿತಮ್ಮ(2001), ಭಾವಕ್ಷೀರ(2006), ಅಕ್ಕನೆಂಬ ಅನುಭಾವಗಂಗೆ(2017) ಕಥಾಸಂಕಲನ: ಶಿಶು ಕಂಡ ಕನಸು(1993, 2005), ಹಂಸೆ ಹಾರಿತ್ತು(2000, 2010), ನೀರಾಳ ಸೊಲ್ಲು(2017), ಸಸಿಯ ...
READ MORE