‘ಸೂಜುಮೆಣಸು ಕೆಸುವಿನೆಲೆ’ ಸಿಂಧುಚಂದ್ರ ಹೆಗಡೆ ಅವರ ಕವನ ಸಂಕಲನ. ಈ ಕೃತಿಗೆ ಸುಬ್ರಾಯ ಮತ್ತೀಹಳ್ಳಿ ಅವರು ಮುನ್ನುಡಿ ಬರೆದು ‘ಸಿಂಧು ಅವರ ರಚನೆಗಳನ್ನು ಗಮನಿಸುತ್ತಾ ಹೋದಂತೆ, ಹೊಸದೊಂದು ಅನುಭವಲೋಕಕ್ಕೆ ಪ್ರವೇಶಿಸಿದಂತಾಯಿತು. ಅವರ ಹೆಚ್ಚಿನೆಲ್ಲ ಕವಿತೆಗಳಲ್ಲಿ ಹೆಣ್ತನವೇ ಸ್ಥಾಯಿಯಾಗಿ ಬೆಳಗುತ್ತಿದ್ದರೂ, ಅಲ್ಲಿ ಯಾವುದೇ ವ್ಯವಸ್ಥೆಯ ವಿರುದ್ಧ ಏಕಪಕ್ಷೀಯ ಆಕ್ರೋಶವಿಲ್ಲ. ಅಥವಾ ಪುರುಷ ಪ್ರಭುತ್ವದ ಕಟು ವ್ಯಂಗ್ಯವೂ ಇಲ್ಲ. ಬದಲಾಗಿ ಆತ್ಮಾವಲೋಕನವಿದೆ. ಆತ್ಮ ವಿಮರ್ಶೆಯಿದೆ.’ ಎಂದು ಪ್ರಶಂಸಿಸಿದ್ದಾರೆ.
ಕವಯಿತ್ರಿ, ಕತೆಗಾರ್ತಿ ಸಿಂಧು ಚಂದ್ರ ಅವರು ಮೂಲತಃ ಉತ್ತರಕನ್ನಡ ಜಿಲ್ಲೆಯವರು. ತಂದೆ ಜಯರಾಮ ಹೆಗಡೆ, ತಾಯಿ ರೇವತಿ. ಬದುಕಿನ ಮೊದಲ ಹನ್ನೆರಡು ವರ್ಷಗಳನ್ನು ಹಾಸನದಲ್ಲಿ ಕಳೆದಿರುವ ಸಿಂಧು ಪದವಿಯವರೆಗೆ ಓದಿದ್ದು ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ. ಕರ್ನಾಟಕ ವಿಶ್ವ ವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕೆ.ಡಿ.ಸಿ.ಸಿ ಬ್ಯಾಂಕ್ ಉದ್ಯೋಗಿ. ಬದುಕಿನ ಅನುಭವದಿಂದಲೇ ಸತ್ವಯುತ ಬರವಣಿಗೆಗೆ ಬುನಾದಿ ದಕ್ಕುತ್ತದೆ ಎಂದು ನಂಬಿರುವ ಅವರು 2010ರಲ್ಲಿ ತಮ್ಮ ಚೊಚ್ಚಲ ಕವನ ಸಂಕಲನ ‘ನಗುತ್ತೇನೆ ಮರೆಯಲ್ಲ’ ಪ್ರಕಟಿಸಿದರು. ಇದೀಗ ಕಣ್ಣಿಗೆ 'ಕನಸಿನ ಕಾಡಿಗೆಯನ್ನು ಹಚ್ಚಿಕೊಂಡು’, ‘ಹಗಲುರಾತ್ರಿಗಳನ್ನು' ವಿಭಿನ್ನ ದೃಷ್ಟಿಕೋನ ದಿಂದ ...
READ MORE