ಸೋನೆ ಹನಿಗಳು

Author : ಬಸವರಾಜ ಸಬರದ

Pages 96

₹ 75.00




Year of Publication: 2019
Published by: ಸಂವಹನ
Address: ನಂ.12/1ಎ, ಸಂಜೆ ಬಜಾರ್ ಹಿಂಭಾಗ, ಶಿವರಾಮಪೇಟೆ, ಮೈಸೂರು- 570001

Synopsys

‘ಸೋನೆ ಹನಿಗಳು’ ಲೇಖಕ ಬಸವರಾಜ ಸಬರದ ಹನಿಗವಿತೆಗಳ ಸಂಕಲನ. ಸಬರದ ಅವರು ಕನ್ನಡದ ಹೆಸರಾಂತ ಬಂಡಾಯ ಲೇಖಕರು: ಮೌಲಿಕವಾಗಿ ಬಹಳ ಬರೆದವರು. ಗದ್ಯ-ಪದ್ಯ ಸವ್ಯಸಾಚಿಯಾಗಿ ಸೇವ್ಯ ಸಾಹಿತ್ಯವನ್ನು ಕೊಟ್ಟವರು. ಪ್ರಕೃತಿ, ಅವರ ಹನಿಗವನ(ಮುಕ್ತಕ) ಗಳ ಮೂರನೆಯ ಮನನಯೋಗ್ಯ ಸಮುಚ್ಚಯ ಸೋನೆ ಹನಿಗಳು. ‘ಮುತ್ತು ಸುರಿದಂತೆ ನಿನ್ನ ಮಾತು ಸೋನೆ ಮಳೆಯಂತೆ ನಿನ್ನ ಪ್ರೀತಿ’ ಎಂಬ ಉದ್ಗಾರ ಕವಿಯದು. ಎಂತಲೇ ಇಲ್ಲಿರುವುದು. ಸೊಬಗಿನ ಸೋನೆ, ಮುತ್ತಿನ ಮಳೆ, ಮುಕ್ತಾಹಾರ! ಮಾನವೀಯತೆ ಸಂಪತ್ತಿಗಿಂತ ಹಿರಿದು, ಸ್ನೇಹ ಎಲ್ಲಕ್ಕಿಂತ ದೊಡ್ಡದು, ಎಂಬ ಉದ್ಘೋಷ ಸಬರದ ರಚನೆಗಳ ಇಂದಿನ ಸ್ಥಾಯಿಯ ಬೆರಗನ್ನು ಅರುಹುತ್ತದೆ. ಮಾನವೀಯತೆ ಇಲ್ಲಿ ಮಡುಗಟ್ಟಿದೆ. ಸ್ನೇಹ ವ್ಯಾಪಕಾರ್ಥದಲ್ಲಿ ವ್ಯೂಹಗೊಂಡಿದೆ. ಅದು ಸಂಕುಚಿತಾರ್ಥದಲ್ಲಿ ಮೋಹ ಕೂಡ. ಈ ಕವಿತೆಯಲ್ಲಿ ಮೊರೆಯುತ್ತಿವೆ, ಮರ್ಮರಿಸುತ್ತಿವೆ, ಒಲವಿನ ಅಲೆಗಳು, ಒಮ್ಮೆ ಉತ್ಸುಕತೆ, ಮತ್ತೊಮ್ಮೆ ವಿಷಣ್ಣತೆ ಇಲ್ಲಿ ಒಂದರ ಮೇಲೊಂದು ಹೊರಳಿಹೋಗುತ್ತವೆ. ನೆರಳು- ಬೆಳಕುಗಳ ದ್ವಂದ್ವ ಒಮ್ಮೆ ಮೋದಕ್ಕೆ, ಮತ್ತೊಮ್ಮೆ ಖೇದಕ್ಕೆ ಹಾದಿಯಾಗುತ್ತದೆ.

About the Author

ಬಸವರಾಜ ಸಬರದ
(20 June 1954)

ಬಸವರಾಜ ಸಬರದ ಅವರು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನ ಕುಕನೂರಿನವರು. ಹುಟ್ಟಿದ್ದು 1954 ಜೂನ್‌ 20ರಂದು. ತಾಯಿ ಬಸಮ್ಮ, ತಂದೆ ಬಸಪ್ಪ ಸಬರದ. ಹುಟ್ಟೂರು ಕುಕನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ಹಲವಾರು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ.  ಶೈಕ್ಷಣಿಕವಾಗಿ ಮಾತ್ರವಲ್ಲದೇ ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ಅಸ್ಪೃಶ್ಯತಾ ನಿವಾರಣೆ, ದಲಿತ-ಬಂಡಾಯ ಚಳವಳಿ ಮುಂತಾದ ಸಾಮಾಜಿಕ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.   ನನ್ನವರ ಹಾಡು, ಹೋರಾಟ, ...

READ MORE

Related Books