58 ಕವಿತೆಗಳ ಸಂಕಲನ ಸೆಳೆತಗಳ ಸುಳಿಯಲ್ಲಿ. ಬದುಕು ಕಲಿಸಿದ ಪಾಠವನ್ನು ಸಕರಾತ್ಮಕವಾಗಿ ತೆಗೆದುಕೊಳ್ಳುವ ಹಾಗೆಯೇ ವ್ಯಕ್ತಪಡಿಸುವ ಕವಿಯ ಜೀವನ ಪ್ರೀತಿ ಅದಮ್ಯವಾದುದು. ಸೆಳೆಯಗಳ ಸುಳಿಯಲ್ಲಿ ಸಂಕಲನದ ಕವಿತೆಗಳು ಇಂತಹ ಹಲವಾರು ವಿಷಯ ವಸ್ತುಗಳ ಮೇಲೆ ರೂಪುಗೊಂಡಿವೆ. ಕಬ್ಬಿನ ಗದ್ದೆಯ ಚುಕ್ಕಿ, ತುಳಸಿ ಬಾರಿಸಿದಳು. ಗಂಟೆ, ಮುಂತಾದ ಗೀತೆಗಳು ಶಿಶು ಗೀತೆಗಳಾಗಿಯೂ ಗಮನ ಸೆಳೆಯುತ್ತವೆ. ಇದಷ್ಟೇ ಅಲ್ಲದೆ ವಯೋಸಹಜ ಪ್ರೀತಿ, ಪ್ರೇಮ ಸೆಳೆತದ ಸುಳಿಯಲ್ಲಿ ಈ ಕವಿಯೂ ಬಿದ್ದಿದ್ದಾರೆ. ’ಚಂದ್ರನ್ 'ಜಾನ್'ಪದ', 'ಗದ್ದದ ಗುಳಿ', 'ನನ್ನಾಕೆ' ಕವಿತೆಗಳಲ್ಲಿ ಇದು ವ್ಯಕ್ತವಾಗುತ್ತದೆ.
ಯುವ ಬರಹಗಾರ ಚಂದ್ರಯ್ಯ ಚಪ್ಪರದಳ್ಳಿಮಠ ಅವರ ಹುಟ್ಟೂರು ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಕೋಟಿಹಾಳದವರು. ಇಂಗ್ಲಿಷ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಸ್ತುತ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೆಳೆತಗಳ ಸುಳಿಯಲ್ಲಿ ಇವರ ಚೊಚ್ಚಲ ಕವನ ಸಂಕಲನ. ...
READ MORE