ಲೇಖಕ ಎಸ್.ಬಿ. ಮಾಳಗೊಂಡ ಅವರ ಕವನ ಸಂಕಲನ ಕೃತಿ ʻಸತ್ಪಾತʼ. ಪುಸ್ತಕದ ಬೆನ್ನುಡಿಯಲ್ಲಿ ಲೇಖಕ ರಾಗಂ ಅವರು, “ಮೊದಲಿನಿಂದಲೂ ಕವಿತೆ ಕುರಿತು ನನ್ನ ನಂಬಿಕೆ ಅದನ್ನು ಕೇಳಬಹುದು, ಆದರೆ ಅದು ಆಡುವ ಮಾತಿನ ಸದ್ದಲ್ಲ. ಅದನ್ನು ಹಾಡಬಹುದು, ಆದರೆ ಅದು ಸಂಗೀತದ ರಾಗಬದ್ದವಾದ ಶಬ್ದವಲ್ಲ. ಅದನ್ನು ಓದಬಹುದು, ಆದರೆ ಅದು ಮುದ್ರಿತಾಕ್ಷರಗಳ ನೋಟವಲ್ಲ. ಅದು ಅರ್ಥವತ್ತಾದ ಮಾಹಿತಿ, ಲಯಬದ್ದ ಭಾಷೆಯಿಂದ ಹೇಳಬಲ್ಲ ಒಂದು ಪ್ರತಿಭಾಶಿಶು, ಕವಿಕಲ್ಪನೆ, ಹಾಡು, ಮಾತು. ಮುದ್ರಾಕ್ಷರಗಳು ಅದಕ್ಕೆ ಬೇರೆ ಬೇರೆಯಾದ ಅರ್ಥವಾಹಕಗಳು, ಸಂಗೀತದ ನಿಯಮಗಳಂತೆ ಪದ ರಚಿತವಾಗಿಲ್ಲ. ಆಡುನುಡಿಯಂತೆಯೂ ಅದಿಲ್ಲ, ಅದರ ಭಾಷೆಯನ್ನು ಅಂತಃಕರಣದ ಪ್ರಶಾಂತ ಕಿರಣವೆನ್ನಬಹುದು. ಪದ್ಯವೊಂದು ಅಂತರಂಗದ ಒಳಗತಿಯಾಗಿಬಿಟ್ಟಿದೆ. ನಿಃಶಬ್ದ ಮನದ ನಿಸರ್ಗಧಾರೆಯಾಗಿದೆ. ಕಾಲ ಹೋದಹಾಗೆ ಕವಿತೆ ಅತೀಂದ್ರಿಯವೂ, ಬೌದ್ದಿಕವೂ, ಆಧ್ಯಾತ್ಮಿಕವೂ ಆಗುತ್ತ ಹೋಗುತ್ತದೆ. ಮಿತ್ರ ಮಾಳಗೊಂಡರ ಕಾವ್ಯದಲ್ಲಿ ಈ ಸ್ಥಿತ್ಯಂತರಗಳನ್ನು ಗಮನಿಸಬಹುದಾಗಿದೆ” ಎಂದು ಹೇಳಿದ್ದಾರೆ.
ಸತ್ಯಪ್ಪ ಭೀ ಮಾಳಗೊಂಡ ಅವರು ಮೂಲತಃ ಬಾಗಲಕೋಟೆಯವರು. ಪದವಿ ಪೂರ್ವ ಹಾಗೂ ಪದವಿ ಶಿಕ್ಷಣಗಳನ್ನು ಜಮಖಂಡಿಯಲ್ಲಿ ಪೂರೈಸಿದ್ದಾರೆ. ಬಳಿಕ, ಪಿಎಸ್ಐ ಹುದ್ದೆಗೆ ಆಯ್ಕೆಯಾಗಿ ಕಾರ್ಕಳ, ಹೇಬ್ರಿ, ಶಂಕರನಾರಾಯಣ, ಅಥಣಿ, ವಿಜಯಪುರ, ಮುದ್ದೇಬಿಹಾಳ, ಆಲಮೆಲ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ, ನಂತರ 2016ರಲ್ಲಿ ಸಿಪಿಐ ಆಗಿ ಪದೋನ್ನತಿಯನ್ನು ಪಡೆದಿದ್ದಾರೆ. ಹುಬ್ಬಳ್ಳಿ ಗ್ರಾಮೀಣ, ಧಾರವಾಡ ಸೈಬರ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ಬೆಳಗಾವಿಯ ನಂದಗಡದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ...
READ MORE