ಸಾಂತ್ವನ-ಕವಿ ಮುರುಗೆಪ್ಪ ಹಣಮನಹಳ್ಳಿ ಅವರ ಕವನ ಸಂಕಲನ. ಒಟ್ಟು 68 ಕವಿತೆಗಳಿವೆ. ಕೃತಿಗೆ ಮುನ್ನುಡಿ ಬರೆದ ಸಾಹಿತಿ ‘ಡಾ:ಎಂ.ಜಿ.ದೇಶಪಾಂಡೆ ಅವರು ‘ನಿನ್ನದಲ್ಲೋ ಕವನವು ಹುಂಜ ನಿನ್ನದಾದರು ಯಾಳ್ಯ ನಿನ್ನದಲ್ಲೋ ’ ಇಂತಹ ಸಾಲುಗಳು ಮಾನವ ಅನಿವಾರ್ಯವಾಗಿ ತಲೆ ತಗ್ಗಿಸಬೇಕಾಗುವುದು ಎಂಬ ಸಂದೇಶವು ಬಹುತೇಕ ಕವಿತೆಗಳ ಶಕ್ತಿಯಾಗಿವೆ ಎಂದು ಪ್ರಶಂಸಿಸಿದ್ದರೆ ಕೃತಿಗೆ ಬೆನ್ನುಡಿ ಬರೆದ ಹಿರಿಯ ಕವಿ ಲಿಂಗಾರೆಡ್ಡಿ ಶೇರಿ ಜಾಕನಹ಼ಳ್ಳಿ ಅವರು ‘ಕವಿಗಳು "ಆಧ್ಯಾತ್ಮದ ಬರಹಕ್ಕೆ ಬಂಡಾಯದ ಸ್ಪರ್ಶ, ಬಂಡಾಯದ ಬರಹಕ್ಕೆ ಆಧ್ಯಾತ್ಮದ ಸ್ಪರ್ಶ ನೀಡಿದ್ದಾರೆ’ ಎಂದು ಶ್ಲಾಘಿಸಿದ್ದಾರೆ.
ಮುರುಗೆಪ್ಪ ಹಡಪದ ಹಣಮನಹಳ್ಳಿ ಅವರು ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ನವರು. ತಂದೆ ರೇವಣಸಿದ್ದಪ್ಪ, ತಾಯಿ ಚೆನ್ನಮ್ಮ. ವೃತ್ತಿಯಿಂದ ಸಹಶಿಕ್ಷಕರು. ತತ್ವಪದ ಸಾಹಿತ್ಯದಲ್ಲಿ ವಿಶೇಷ ಒಲವು. ಇವರ ಕಾವ್ಯನಾಮ ಶ್ರೀ 3,13,9,18 ಹಾಗೂ ಅಂಕಿತನಾಮ ಕೊಡೇಕಲ್ಲ ಚನ್ನಬಸವಣ್ಣ. ಕೃತಿಗಳು: ಮನದಂಗಳ (ಕವನ ಸಂಕಲನ-2009), ಸಾಂತ್ವನ (ಕವನ ಸಂಕಲನ-2022) ...
READ MORE