’ಸಂತೆಯೊಳಗಣ ಮೌನ’ ಕೃತಿಯು ಚನ್ನಬಸವ ಆಸ್ಪರಿ ಅವರ ಕವನ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಬಸವರಾಜ ಪಿ. ಡೋಣೂರ ಅವರು, ಭೂತ, ವರ್ತಮಾನ ಹಾಗೂ ಭವಿಷ್ಯದ ಬಗ್ಗೆ ಇಲ್ಲಿನ ಕವನಗಳು ಮಾತನಾಡುವಂತೆ ಮನುಷ್ಯನ ಕ್ಷುದ್ರತೆ ಹಾಗೂ ಉದಾತ್ತತೆಯ ಬಗ್ಗೆಯೂ ಮಾತನಾಡುತ್ತವೆ. ವಸ್ತುವಿನ ವೈವಿಧ್ಯ, ಭಾಷೆಯ ಲಾಲಿತ್ಯ, ಆಪ್ತ ಶೈಲಿ, ಜೀವಂತ ಅನುಭವ, ಸಮರ್ಥ ಅಭಿವ್ಯಕ್ತಿಯ ಕಾರಣದಿಂದಾಗಿ ಈ ಕವನಗಳು ಓದುಗರ ಕುತೂಹಲ ಹೆಚ್ಚಿಸುತ್ತವೆ. ಕವಿಯ ಬದ್ಧತೆ, ನೈತಿಕತೆ ಈ ಕವನಗಳಿಗೆ ಅರ್ಥವಂತಿಕೆ ತಂದಿವೆ. ಅನುಭವದ ಅಭಿವ್ಯಕ್ತಿಯಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುವ ಬಿಕ್ಕಟ್ಟು ರೂಪಕಗಳನ್ನು ಬೆಳೆಸುವಲ್ಲಿ ಕಾಣುವ ಚಿಕ್ಕ ತೊಡರು ಹಾಗೂ ಅನುಭವದ ಪುನರಾವರ್ತನೆ ತೊಡೆದುಹಾಕಿ ಸಂಕೀರ್ಣವಾದ, ನಿಬಿಢವಾದ ಕಾವ್ಯ ಅಸ್ಪರಿ ಅವರಿಗೆ ಸಾಧ್ಯ ಎನ್ನುವುದನ್ನು ಇಲ್ಲಿನ ಅನೇಕ ಕವನಗಳು ನಿರೂಪಿಸುತ್ತವೆ. ಬಹುತೇಕ ಕವನಗಳು ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸುವ ಗುರಿ ಹೊಂದಿದೆ’ ಎಂದಿದ್ದಾರೆ.
ಲೇಖಕ ಚನ್ನಬಸವ ಆಸ್ಪರಿ ಮೂಲತಃ ಕೊಪ್ಪಳ ಜಿಲ್ಲೆಯ ಬೇವಿನಹಾಳದವರು. ಕಾವ್ಯ, ಅನುವಾದ, ಆಧ್ಯಾತ್ಮ, ಉಪನ್ಯಾಸ ಅವರ ಆಸಕ್ತಿಯ ಕ್ಷೇತ್ರವಾಗಿದೆ. ಜವಾಹರ್ ನವೋದಯ ವಿದ್ಯಾಲಯದಲ್ಲಿಪ್ರಾಥಮಿಕ-ಪ್ರೌಢಶಿಕ್ಷಣ, ಧಾರವಾಡದ ಕ.ವಿ.ವಿ.ಯಿಂದ ಬಿ.ಎ ಪದವಿ. (ಇಂಗ್ಲಿಷ್ ಸಾಹಿತ್ಯದಲ್ಲಿ ಬಂಗಾರದ ಪದಕ) ಶಿವಮೊಗ್ಗದ ಬಿ.ಇಡಿ ಕಾಲೇಜಿನಲ್ಲಿ ಪ್ರಶಿಕ್ಷಣ ಪೂರೈಸಿ, ಆಂಗ್ಲಭಾಷಾ ಶಿಕ್ಷಕರಾಗಿ, ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿಯೂ ಇದ್ದಾರೆ. ಮೈಸೂರಿನ ಕ.ರಾ.ಮು ವಿಶ್ವವಿದ್ಯಾಲಯದಿಂದ ಎಂ.ಎ, ಎಂ.ಇಡಿ ಪದವಿ ಹಾಗೂ ಭಾರತೀಯ ಭಾಷಾ ಸಂಸ್ಥಾನ ಮೈಸೂರಿನಿಂದ ತಮಿಳಿನಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಬೆಳಗಾವಿಯ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ Indian literature in English ನಲ್ಲಿ ಪಿ.ಹೆಚ್.ಡಿ ಮಾಡುತ್ತಿದ್ದಾರೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಅವರ ಕವಿತೆಗಳು ಪ್ರಕಟವಾಗಿವೆ. ಕೃತಿಗಳು: ಸಂತೆಯೊಳಗಣ ...
READ MORE