ಸನ್ಮತಿ- ತಿರುಪತಿ ನಾಯಕ್ ಅವರ ಚೌಪದಿಗಳ ಸಂಕಲನ. ಚೌಪದಿಗಳೆಂದರೆ ನಾಲ್ಕು ಸಾಲುಗಳ ಕವಿತೆಗಳು. ತಿರುಪತಿ ನಾಯಕ್ ಅವರು ಮೂಲತಃ ಹೈದರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕ)ವೆಂಬ ಬಿಸಿಲು ನಾಡಿನ ರಾಯಚೂರು ಜಿಲ್ಲೆಯವರಾಗಿದ್ದು, ಈಗ ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕಥೆ, ಕಾದಂಬರಿ, ಕವನಗಳು, ಪ್ರಬಂಧ ಸಂಕಲನಗಳು ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ ಬರೆದು ತಮ್ಮ ಪ್ರತಿಭೆ ಮತ್ತು ಕಳಕಳಿಯನ್ನು ಅಭಿವ್ಯಕ್ತಿಪಡಿಸುತ್ತಿದ್ದಾರೆ.
ಸನ್ಮತಿ ಸಂಕಲನದಲ್ಲಿ ಭಾಗ್ಯವಂತ ಅಂಕಿತದ ಸಾತ್ವಿಕ ಅನುಭಾವದ ಚೌಪದಿಗಳು ಇದ್ದು, ಕವಿ ಅನನ್ಯ ಭಾವ ಪ್ರಪಂಚದಲ್ಲಿ ವಿಹರಿಸಿ ಮಾನವೀಯತೆ ಮತ್ತು ವಿಶ್ವ ಮಾನವ ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ತಿರುಪತಿ ನಾಯಕ್- 1968ರಲ್ಲಿ ರಾಯಚೂರು ಜಿಲ್ಲೆ ಲಿಂಗಸಗೂರು ತಾಲ್ಲೂಕು, ಆಶಿಹಾಳ ತಾಂಡದಲ್ಲಿ ಜನಿಸಿದರು. ಆಶಿಹಾಳ್, ಮುದಗಲ್, ಮುದ್ದೇಬಿಹಾಳ್, ಧಾರವಾಡ, ಚಿದಂಬರಂ ಊರುಗಳಲ್ಲಿ ವ್ಯಾಸಂಗ, ಕನ್ನಡ, ಅರ್ಥಶಾಸ್ತ್ರಗಳಲ್ಲಿ ಸ್ನಾತಕೋತ್ತರ ಪದವಿ. ಮಲೆನಾಡಿನ ವಿವಿಧ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕ ವೃತ್ತಿ. ಕನ್ನಡ ಸಾಹಿತ್ಯ ಪರಿಷತ್ತು, ಭಾರತೀಯ ರೆಡ್ಕ್ರಾಸ್ನಲ್ಲಿ ಸಕ್ರಿಯ ಸೇವೆ. ಕನ್ನಡದ ಪ್ರಸಿದ್ದ ಪತ್ರಿಕೆಗಳಲ್ಲಿ ಬರೆದ ಅನುಭವ. ಆಕಾಶವಾಣಿಗಳಲ್ಲಿ ಹಲವಾರು ಚಿಂತನಗಳು, 'ಹಳ್ಳಿಗಳು ಸಾಯುತ್ತಿವೆ' ಪ್ರಬಂಧ ಸಂಕಲನಕ್ಕೆ ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, 'ಗಂಧ ಕುಸುಮ', 'ಭಾವ ಬಯಲು', 'ದೀಪವಿಲ್ಲದ ದಾರಿ', 'ದಮನಿತೆ' ಕವನ ಸಂಕಲನಗಳು. 'ಮುಳುಗಿದವರು', 'ನದಿ ...
READ MORE