ಕವಿ ಚಂದ್ರಶೇಖರ ಮಾಡಲಗೇರಿ ಅವರ ಕವನ ಸಂಕಲನ-ಸಂಜೆ ಮಲ್ಲಿಗೆ. ಬಿಟ್ಟು ಬಿಡದಂತೆ ಈ ಕವಿತೆಗಳು ಏಕಕಾಲಕ್ಕೆ ಜಾತಿ, ಧರ್ಮದ ಹೆಸರಿನಲ್ಲಿ ವೈಯಕ್ತಿಕ ಲಾಭಕ್ಕೆ ಹವಣಿಸುವ ವ್ಯವಸ್ಥೆಯ ಕುರಿತು ಆಕ್ರೋಶವನ್ನು ಕಾಣಬಹುದು. ಪ್ರೀತಿಯ ನದಿಯಲ್ಲಿ ಮಿಂದು ಆಂತರಿಕ ಲೋಕವೊಂದನ್ನು ಸೃಷ್ಟಿಸಿಕೊಳ್ಳುವ ಕವಿ, ಸಮಾಜದ ಕರಾಳ ರೂಪವನ್ನು ತಣ್ಣಗೆ ತೆರೆದಿಡುತ್ತಾರೆ.
ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದ ಚಂದ್ರಶೇಖರ ಮಾಡಲಗೇರಿ ಅವರು ಹಲವಾರು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ. ಸಾಹಿತ್ಯ ಕೃಷಿ, ಪತ್ರಿಕೋದ್ಯಮ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ತೊಡಗಿಕೊಂಡಿರುವ ಇವರ ನಾಲ್ಕು ಕೃತಿಗಳು ಜನಮಾನಸದಲ್ಲಿ ನೆಲೆಗೊಂಡಿವೆ. ಇವರದೇ ಪ್ರಕಾಶನಗಳಾದ ಚೇತನ ಬುಕ್ಸ್ ಅಂಡ್ ಮೀಡಿಯಾ ಹೌಸ್ ಹಾಗೂ ಸ್ಯ್ಯಾಗ್ ಪಬ್ಲಿಕೇಶನ್ ಮೂಲಕ ಎಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಸದ್ಯ ಚೇತನ ಎಂಬ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರಲ್ಲದೇ ಅಂಕಣಕಾರರಾಗಿ ಪತ್ರಕರ್ತರಾಗಿದ್ದಾರೆ. ...
READ MORE