ಬದುಕಿನ ದರ್ಶನ, ಪ್ರೀತಿ ಪ್ರೇಮದ ವಿಶಾಲತೆ, ಗಂಭೀರತೆಯನ್ನು ತೆರೆದಿಡುವ ಭಾವಗುಚ್ಛವಾಗಿದ್ದು ಓದುತ್ತಾ ಹೋದಂತೆ 'ನಾನೇ ಕವನವಾಗುವ, ಕವನಗಳೇ ನನ್ನದಾಗುವ' ಭಾವ ಹೊಸ ಅನುಭವವನ್ನು ಕಟ್ಟಿಕೊಡುತ್ತದೆ. ಬದುಕಿನ ಅರ್ಥ, ಮೌಲ್ಯಗಳ ಬುತ್ತಿಯಾಗಿ ಪ್ರೀತಿಯೇ ಎದ್ದು ಕಾಣುತ್ತದೆ. ಪ್ರೀತಿಯ ಮೌಲ್ಯಮಾಪನ ಅಡಗಿಕೊಂಡ ಕವಿತೆಗಳು ಗುಪ್ತಗಾಮಿನಿಯಾಗಿ ಹರಡಿಕೊಂಡಿದ್ದು ಅರವತ್ತನಾಲ್ಕು ಕವನಗಳು ರೂಪ, ಮಾದರಿಗೆ ಅನುಗುಣವಾಗಿ ಭಾವಲಹರಿಯ ಅಲಂಕಾರದಿಂದ ಸಹೃದಯನನ್ನು ತಟ್ಟುತ್ತವೆ.
ಅಕ್ಷತಾರಾಜ್ ಪೆರ್ಲ ಅವರ ಕಾವ್ಯ ನಾಮ ಅಕ್ಷರ. ಇವರ ತಂದೆ ವೆಂಕಟೇಶ್ ಭಾಗ್ವತ್ ಹಾಗೂ ತಾಯಿ ರಾಜೇಶ್ವರಿ.ಹುಟ್ಟೂರು ಮೂಡಬಿದ್ರೆಯಾದರೂ, ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ವಾಸವಾಗಿದ್ದಾರೆ. ಸಾಹಿತ್ಯದಲ್ಲಿ ಪದವಿ ಹಾಗೂ ಹಿಂದಿ ಪ್ರವೀಣ ಪಡೆದಿರುವ ಇವರು ಕತೆ, ಕವಿತೆ, ನಾಟಕ, ಕಾದಂಬರಿ, ವೈಚಾರಿಕ ಲೇಖನ ಸೇರಿದಮತೆ ಅನೇಕ ಸಾಹಿತ್ಯ ಕೃಷಿಯನ್ನು ಮಾಡಿದವರು. ಕನ್ನಡ, ತುಳು, ಹವ್ಯಕ, ಅರೆಭಾಷೆ, ಹಿಂದಿ, ಇಂಗ್ಲಿಷ್ ಭಾಷೆಗಳನ್ನು ಬಲ್ಲ ಇವರು, ಮಂಗಳೂರು ಆಕಾಶವಾಣಿಯಲ್ಲಿ ನಿರೂಪಕಿಯಾಕಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು : ಸಂಚಿಯೊಳಗಿನ ಸಂಜೆಗಳು - ಕನ್ನಡ ಕವಿತೆ ಸಂಕಲನ, ಕಂದೀಲು - ಕನ್ನಡ ಕತಾ ಸಂಕಲನ,ಬೊಳ್ಳಿ ...
READ MORE