ಸಮುದ್ರ ಸೂರ್ಯ -ಈ ಕೃತಿಯಲ್ಲಿ ಡಾ. ವಿ.ಕೃ. ಗೋಕಾಕ್ರ 30 ಕವಿತೆಗಳು, ಸಮಕಾಲೀನ 30 ಕವಿಗಳ ಕವಿತೆಗಳು ಹಾಗೂ ಯುವ ಬರಹಗಾರರ 31 ಕವಿತೆಗಳಿವೆ. ನಾಡೋಜ ಪಾಟೀಲ ಪುಟ್ಟಪ್ಪ ಅವರು ಮುನ್ನುಡಿ ಬರೆದಿದ್ದು, ಸಂಪಾದಿತರ ಶ್ರಮವನ್ನು ಪ್ರಶಂಸಿಸಿದ್ದಾರೆ. ಹಿರಿಯ ಕವಿಯೊಬ್ಬರ ಕವಿತೆಗಳು, ಸಮಕಾಲೀನ ಕವಿಗಳ ಹಾಗೂ ಹೊಸಬರ ಕವಿತೆಗಳ ತೌಲನಿಕ ಅಧ್ಯಯನಕ್ಕೆ ಈ ಕೃತಿ ಪ್ರಮುಖವಾಗಿ ಆಕರಗಳನ್ನು ಒದಗಿಸುತ್ತದೆ.
ಕವಿ, ಕಲಾವಿದ, ನಾಟಕಕಾರ ಸತೀಶ ಕುಲಕರ್ಣಿ ಅವರು 1951 ಜುಲೈ 13 ರಂದು ಧಾರವಾಡದಲ್ಲಿ ಜನಿಸಿದರು. ತಾಯಿ ಲೀಲಾಬಾಯಿ, ತಂದೆ ನೀಲಕಂಠರಾವ್ ಕುಲಕರ್ಣಿ. ಬಾಲ್ಯದಿಂದಲೂ ರಂಗಭೂಮಿಯಲ್ಲಿ ಆಸಕ್ತಿ ಇದ್ದ ಇವರು ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ ಹಾಗೂ ನಿರ್ದೇಶಿಸಿದ್ದಾರೆ. ಲಂಕೇಶರ ತೆರೆಗಳು, ಜೋಕುಮಾರಸ್ವಾಮಿ, ಕುಂಟಾಕುಂಟಾ ಕುರವತ್ತಿ, ಪ್ರಸ್ತುತ, ಬಂಗಾರದ ಕೊಡ, ಗಾಂಧಿ ಹಬ್ಬಿದ ಗಿಡ, ಪರಸಪ್ಪನ ಕಥೆ, ಅನಾಮಿಕ, ಕಂಪ್ಯೂಟರ್, ದೊಡ್ಡಮನುಷ್ಯ, ಹಾವು ಬಂತು ಹಾವು, ಗಗ್ಗಯ್ಯನ ಗಡಿಬಿಡಿ, ಗಾಡಿಬಂತುಗಾಡಿ ಮುಂತಾದ ನಾಟಕ ನಿರ್ದೇಶನ ಮತ್ತು ಅಭಿನಯ. ‘ವಿಷಾದಯೋಗ, ಗಾಂಧಿಗಿಡ, ಕಂಪನಿ ಸವಾಲ್, ಬೆಂಕಿನೀರು, ನೆಲದ ನೆರಳು, ವಿಕ್ಷಿಪ್ತ: ಗಾಂಧಿ ಒಡಲಾಳ ...
READ MORE