ಲೇಖಕ ಸಿ.ಎಸ್. ಆನಂದ ಅವರು ಬರೆದ ಮುಕ್ತಕಗಳ ಸಂಕಲನ-ಸಂಪ್ರೀತಿ. ಲೇಖಕರ 5ನೇ ಕವನ ಸಂಕಲನವಿದು. 74 ಪ್ರಣಯ ಮುಕ್ತಕಗಳಿವೆ. ಈ ಸಂಕಲನದ ವಸ್ತುವೇ ಪ್ರೀತಿ. ಕೃತಿಗೆ ಮುನ್ನುಡಿ ಬರೆದ ಸಾಹಿತಿ ಡಾ. ರಾಜಶೇಖರ ಮಠಪತಿ (ರಾಗಂ) ‘ಮನುಷ್ಯನ ಬುದಕಿನ ನಿಜ ಅರ್ಥ ಸಂಘರ್ಷದಲ್ಲಿ ಇಲ್ಲ. ಪ್ರೀತಿಯಲ್ಲಿದೆ ಎಂಬ ಸಂದೇಶದ ಮುಕ್ತಗಳು ಸಂಕಲನಗೊಂಡಿವೆ. ಜೀವನ ಹೋರಾಟವನ್ನೇ ವೇದಿಕೆಯಾಗಿಟ್ಟುಕೊಂಡು ಕಾವ್ಯ ರೂಪುಗೊಂಡಿದೆ. ಇವು ಮುಗಿಲ ಮಲ್ಲಿಗೆಯಲ್ಲ. ಬರೀ ಕಲ್ಪನಾ ವಿಲಾಸವಲ್ಲ. ಕುಸುರಿಯ ಕೆಲಸವಷ್ಟೇ ಅಲ್ಲ. ಶೃಂಗಾರವಲ್ಲ. ಬದಲಾಗಿ, ಜೀವನದ ಸಂಕಟಗಳಿಗೆ ಮುಖಾಮುಖಿಯಾದ ಸಂದರ್ಭಗಳ ಸಾಕ್ಷಿಪುಟವೂ ಹೌದು.ಈ ಸಂಕಲನವು ಪ್ರೀತಿಯ ಮಧುಬಟ್ಟಲು. ಅದರಾಚೆ ಇದು ಜೀವನ ಹೋರಾಟದ ಕಾವ್ಯವೂ ಕೂಡ. ಬದುಕೆಂಬ ಅಗ್ನಿರೇಖೆಯ ದಾಟುವ ಸಾಹಸಗಳನ್ನು ದಾಖಲಿಸುವ ಪದ್ಯಗಳೂ ಇಲ್ಲಿವೆ. ಕವಿ ಆನಂದ ಅವರು ಬರೀ ತಮ್ಮ ಮನಸ್ಸಿನ ಆನಂದಕ್ಕಾಗಿ ಕವನಗಳನ್ನು ರಚಿಸಿದಂತಿಲ್ಲ. ಮನಸ್ಸೆಂಬ ಮಾಯಾಬಜಾರಿನಲ್ಲಿ ಸಿಕ್ಕ, ತಪ್ಪಿ ತಿಂದ ನಂಜನ್ನೂ ನೋವಿನೊಂದಿಗೆ ದಾಖಲಿಸಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
ಯುವ ಸಾಹಿತಿ ಸಿ.ಎಸ್. ಆನಂದ: ಮೂಲತಃ ಕಲಬುರಗಿಯವರು. ವೃತ್ತಿಯಿಂದ ಇಂಗ್ಲಿಷ್ ಉಪನ್ಯಾಸಕರು. ಇವರ ಕಥೆ, ಕವನ, ಪ್ರಬಂಧ, ವಿಮರ್ಶಾತ್ಮಕ ಲೇಖನಗಳು ನಾಡಿನ ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವಾಸ್ತವದ ಮತ್ತು ಸಂಕೇತವಾದದ ಪದರುಗಳ ಪರಿಮಿತಿಯನ್ನು ತಮ್ಮ ಕಥೆ-ಕಾವ್ಯದಲ್ಲಿ ಬಹಳ ಸುಲಭವಾಗಿ ಮೀರಲೆತ್ನಿಸುತ್ತ ಮುನ್ನಡೆಸಿದ್ದಾರೆ. ಕಲಬುರಗಿ ಆಕಾಶವಾಣಿ ಕೇಂದ್ರದಿಂದ ಸುಮಾರು ಮೂವತ್ತೂ ಹೆಚ್ಚು ಭಾಷಣಗಳು, ಕಲಬುರಗಿ ದೂರದರ್ಶನ ಕೇಂದ್ರ ಮತ್ತು ಬೆಂಗಳೂರು ದೂರದರ್ಶನ ಚಂದನ ವಾಹಿನಿಯಲ್ಲಿ ಇವರ ಸಂದರ್ಶನಗಳು ಪ್ರಸಾರಗೊಂಡಿವೆ. ಕೃತಿಗಳು: ಹಡೆದವ್ವ, ಜೀವನದಿ ( ಕಥಾಸಂಕಲನಗಳು), ಒಡಲಹಾಡು, ಮಧುರ ಹನಿಗಳು (ಕವನ ಸಂಕಲನಗಳು) ತಲ್ಲಣಿಸದಿರು ಮನವೆ (ವಚನಗಳ ಸಂಕಲನ), ಬಸವನಾಡಿನ ಬೆಳಕು (ಜಾನಪದ ತ್ರಿಪದಿಗಳ ಸಂಕಲನ), ಸಂಪ್ರೀತಿ (ಮುಕ್ತಕಗಳ ...
READ MORE