ಸಮಾಧಿಗಳು ಪ್ರತಿಭಟಿಸುವುದಿಲ್ಲ

Author : ಟಿ.ಎಚ್.ಲವಕುಮಾರ್

Pages 92

₹ 100.00




Year of Publication: 2021
Published by: ಶ್ರಮಣ ಪ್ರಕಾಶನ
Address: ತಿಪ್ಪೂರು, ದೊಡ್ಡಬಳ್ಳಾಪುರ ತಾಲೂಕು, ಜಿಲ್ಲೆ: ಬೆಂಗಳೂರು ಗ್ರಾಮಾಂತರ-561203

Synopsys

ಲೇಖಕ ಟಿ.ಎಚ್. ಲವಕುಮಾರ ಅವರ ಕವಿತೆಗಳ ಸಂಕಲನ-ಸಮಾಧಿಗಳು ಪ್ರತಿಭಟಿಸುವುದಿಲ್ಲ. ಲೇಖಕಿ ಎಂ.ಆರ್. ಕಮಲ ಅವರು ಕೃತಿಗೆ ಬರೆದ ಬೆನ್ನುಡಿಯಲ್ಲಿ ‘ವಸ್ತು ವಿಷಯಗಳಲ್ಲಿಯ ಆಯ್ಕೆ ಹಾಗೂ ಅವನ್ನು ಒಂದು ಬಂಧಕ್ಕೆ ಜೋಡಿಸುವ ಅವರ ಪ್ರಯತ್ವದಲ್ಲಿ ಈ ಅಂಶ ಎದ್ದು ಕಾಣುತ್ತದೆ. ಸಂಕೇತಗಳು ಘಾಸಿಗೊಂಡಂತೆ, ಉದ್ವಿಗ್ನಗೊಂಡಂತೆ, ನಿರಾಶೆಗೊಂಡಂತೆ ಕಾಣುತ್ತಿದ್ದರೆ, ಚದುರಿರುವ ಮನುಷ್ಯ ಬದುಕಿನ ವೈರುಧ್ಯಗಳಲ್ಲಿ ಸಾಂಗತ್ಯವನ್ನು ಹುಡುಕುವ ನಿರರ್ಥಕತೆಯಲ್ಲಿ ಆರ್ಥವನ್ನು ಶೋಧಿಸುವ ಹಠ ತೊಟ್ಟಂತೆ ಕಾಣುವ ಈ ಕವಿತೆಗಳು ಅಮೂರ್ತತೆಗೆ ಹೆಚ್ಚು ಒಲಿದಿವೆ. ರೂಢಿಗತ ರೂಪಕಗಳಿಗೆ ಪ್ರತಿ ರೂಪಕಗಳನ್ನು ಸೃಷ್ಟಿಸುವ ಮೂಲಕ ಕವಿಗಳು ಬದುಕಿನ ಅರ್ಥ ಮತ್ತು ಲಯಗಳನ್ನು ಹುಡುಕಲು ಹೊರಟಿದ್ದಾರೆ. ಕಾವ್ಯದ ಸಾರ್ಥಕತೆಯನ್ನು ಮುಕ್ತ ಛಂದದಲ್ಲಿ ಹುಡುಕುವ ಪ್ರಯತ್ನವನ್ನೂ ಕಾಣಬಹುದು’ ಎಂದು ಪ್ರಶಂಸಿಸಿದ್ದಾರೆ.

 

About the Author

ಟಿ.ಎಚ್.ಲವಕುಮಾರ್

ದೊಡ್ಡಬಳ್ಳಾಪುರದ ತಾಲೂಕು ತಿಪ್ಪೂರಿನ ಡಾ. ಟಿ.ಎಚ್.ಲವಕುಮಾರ್ ನಾಟಕಕಾರ, ನಿರ್ದೇಶಕ ಹಾಗೂ ಕನ್ನಡ -ಇಂಗ್ಲಿಷ್ ಎರಡೂ ರಂಗಭೂಮಿಯಲಿ ಕೆಲಸ ಮಾಡುತ್ತಿದ್ದಾರೆ. ನೀನಾಸಂ ಪದವಿಯೊಂದಿಗೆ ಪ್ರದರ್ಶನ ಕಲೆ, ಕನ್ನಡ, ಇಂಗ್ಲಿಷ್ ಹಾಗೂ ಮನಶಾಸ್ತ್ರದಲ್ಲಿ ಪದವೀಧರರು. ಪ್ರಸ್ತುತ ಬೆಂಗಳೂರಿನ ಸಂತ ಜೋಸೆಫರ ವಾಣಿಜ್ಯ ಕಾಲೇಜಿನ ಪ್ರಾಧ್ಯಾಪಕರು.  ಹೆಣದ ಮನೆ, ಕಣಿವೆಯ ನೆರಳಲ್ಲಿ, ಯಶೋಧರೆ ಮಲಗಿರಲಿಲ್ಲ, ಜತೆಗಿರುವನು ಚಂದಿರ, ಉರಿಯ ಉಯ್ಯಾಲೆ, ತುಕ್ರನ ಕನಸು, ಕತ್ತಲೆ ದಾರಿ ದೂರ ಸೇರಿದಂತೆ 22 ಕನ್ನಡ ನಾಟಕಗಳನ್ನು ನಿರ್ದೇಶಿಸಿದ್ದಾರೆ. 16ಕ್ಕೂ ಹೆಚ್ಚು ರಂಗಭೂಮಿ ಕುರಿತ ಲೇಖನಗಳು ಹೊಸತು, ಅಗ್ನಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 35ಕ್ಕೂ ಹೆಚ್ಚು ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಕಿರಣಗಳಲ್ಲಿ ...

READ MORE

Related Books