ಕವಿ ಶ್ರೀನಿವಾಸ ಮೂರ್ತಿ ಅವರ ಕವನ ಸಂಕಲನ-”ಸೈಟಾದರೂ ಬೇಡವೇ ಸ್ವಾಮಿ ನಮಗೆ?’ ಈ ಸಂಕಲನದಲ್ಲಿ ಒಟ್ಟು 26 ಕವಿತೆಗಳಿವೆ. ವ್ಯಂಗ್ಯ-ವಿಡಂಬನೆಯಿಂದ ಪ್ರಸ್ತುತ ವಿದ್ಯಮಾನಗಳೆಡೆಗೆ ಗಮನ ಸೆಳೆಯುತ್ತವೆ.
ಕೆ. ಎಸ್. ಶ್ರೀನಿವಾಸ ಮೂರ್ತಿ ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಬೆಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಅವರ ಕೆಲವು ಕವನಗಳು 'ಶೂದ್ರ', 'ಸಂಕ್ರಮಣ' ಮುಂತಾದ ಸಾಹಿತ್ಯಕ ಪತ್ರಿಕೆಗಳಲ್ಲಿ ಮತ್ತು “ಕ್ರಿಸ್ತಾಂಜಲಿ', 'ಅಂಕಣ ಕಾವ್ಯಾಂಕ', 'ಯುವಭಾರತಿ' 1973 ಮತ್ತು 1975, ಬೆಂಗಳೂರು ವಿಶ್ವವಿದ್ಯಾಲಯ) ಮುಂತಾದ ಕವನ ಸಂಗ್ರಹಗಳಲ್ಲಿ ಪ್ರಕಟವಾಗಿವೆ. ಕನ್ನಡದ ಕಲಾಸಾಹಿತ್ಯದ ದೃಷ್ಟಿಯಿಂದ ಅವರ ಕೆಲವು ಲೇಖನಗಳು ವಿಶೇಷವಾದ ಭರವಸೆಯನ್ನು ಹುಟ್ಟಿಸಿವೆ. ಶಾಬ್ಲಿಕ ಮಾಧ್ಯಮದಲ್ಲಿ ದೃಶ್ಯ ಮಾಧ್ಯಮ' (ಅಂಕಣ') 'ಪುಷ್ಪಮಾಲ ಅವರ ಕಲೆ' (ಶೂದ್ರ), (ರುಮಾಲೆ ಅವರ ಪ್ರಕೃತಿ ಚಿತ್ರಗಳು' (ಅಂಕಣ) ಮುಂತಾದ ಕೆಲವು ಲೇಖನಗಳ ಜೊತೆಗೆ ತರುಣ ...
READ MORE