ಋತು

Author : ಡಿ. ಬಿ. ರಜಿಯಾ

Pages 80

₹ 40.00




Year of Publication: 2000
Published by: ತ್ರಿವೇಣಿ ಪಬ್ಲಿಕೇಷನ್ಸ್
Address: 1195, ಬಾಲಕೃಷ್ಣರಾವ್ ರಸ್ತೆ, ಚಾಮರಾಜಪುರಂ ಮೈಸೂರು

Synopsys

ಡಿ.ಬಿ. ರಜಿಯಾ ಅವರ ಹನಿಗವನಗಳ ಸಂಗ್ರಹ ‘ಋತು’. ಈ ಕೃತಿಗೆ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಛಾಯೆ ಮತ್ತು ಕಳೆದುಹೋಗುತ್ತೇನೆ’ ಎಂಬ ಒಳ್ಳೆ ಸಂಗ್ರಹಗಳ ಮೂಲಕ ಕನ್ನಡ ಕಾವ್ಯಕ್ಷೇತ್ರದಲ್ಲಿ ಗಮನ ಸೆಳೆಯುತ್ತಿರುವ ಡಿ.ಬಿ. ರಜಿಯಾ ಇಲ್ಲಿ ವಿಶೇಷವಾಗಿ ಹನಿಗವನಗಳ ಕಡೆಗೆ ವಾಲಿದವರು. ನರ್ನತಕನಿಗೆ ವೇದಿಕೆ ಕಿರಿದಾದಂತೆ ಹೃದಯೊತ್ಫಲ್ಲತೆಯ ಪ್ರದರ್ಶನ ಆಹ್ವಾನವಾಗುತ್ತದೆ. ಹಾಗೆಯೇ ಕವಿಗಳಿಗೆ ಕಿರುಗವನ ಸಮಸ್ಯೆ ಮತ್ತು ಸವಾಲಾಗಿ ಪರಿಣಮಿಸುತ್ತದೆ. ಕವಿಕರ್ಮಕ್ಕೆ ಭಾವಾರ್ಥದ್ಯೋತನದ ಆಹ್ವಾನ ಎದುರಾಗುತ್ತದೆ. ಅಂಥ ಪ್ರಶ್ನೆಗಳ ಕಾವ್ಯ ಗುಹಾದ್ವಾರದಲ್ಲಿ ರಜಿಯಾ ನಿಂತಿದ್ದಾರೆ. ಮುಗ್ಧಭಾವ- ದೀಪಾರತಿ ಹಿಡಿದು ಮಂದಹಾಸ ಬೀರುತ್ತಿದ್ದಾರೆ. ನಿನ್ನಂತರಂಗದ ಅಭೀಪ್ಸೆಗೆ ಶಬ್ದ ಹೇಗಾಗಲಿ ಎಂಬ ನೋವು ಪ್ರೀತಿ-ಬದುಕು-ಕಾವ್ಯಗಳನ್ನು ಪ್ರಶ್ನೆಯಾಗಿಸಿ ಎಲ್ಲವನ್ನೂ ಏಕಕಾಲದಲ್ಲಿ ಅನಾವರಣಗೊಳಿಸುವ ಪರಿ ಇಲ್ಲಿಯ ಬೆಡಗು. ಎದೆಗೂಡಿನಲ್ಲಿ ಕಪ್ಪುಮೋಡಗಳಾಗಿ ದಟ್ಟೈಸಿದ ನೆನಪುಗಳನ್ನು ಮಳೆಯಾಗಿಸಿ ಇಳೆಗಿಳಿಸುವ ಉತ್ಸಾಹ ಹೆಚ್ಚಿನ ಹನಿಗಳಲ್ಲಿ ಮಡುಗಟ್ಟಿದೆ. ಬಾಳ ಜಾತ್ರೆಯಲ್ಲಿ ಸಂಧಿಸಿದ ಪ್ರಿಯತಮನನ್ನು ಸಮಸ್ತ ಸೃಷ್ಟಿಯಲ್ಲಿ ಪರಿಭಾವಿಸಿ ಪ್ರೀತಿಯ ಕುಲುಮೆಯಲ್ಲಿ ಚಂದ್ರ ಸೂರ್ಯ ಕಡಲು ಬಣ್ಣಗಳ ಹಾಳೆಗಳ ಮೇಲೆ ಪುನರ್ರಚಿಸುವ ಆಯತ್ನಿತ ಮಾದಕ ಉಸಿರಾಟ ಇಲ್ಲಿ ಗಂಧ ಸೂಸಿದೆ. ಅರಿವು ಮರೆವುಗಳ ಬೆಳಕು ನೆಳಲಾಟ ಸರಳ ಭಾಷೆ- ಬಂಧ ಶಬ್ದ ಚಮತ್ಕಾರಗಳಲ್ಲಿ ಎದೆಯಂಗಳಾಗಿ ಮಧುಕಂಗಾಳಾಗಿ ಬೆಳದಿಂಗಳಾಗಿ ಹೊಳೆದಿದೆ. ರಜಿಯಾ ಬಚ್ಚಿಟ್ಟಿದ್ದ ಹಲವು ಹಂಬಲ ಒನಪು ವೈಯಾರಗಳು ಹೃನ್ನಿಧಿಯಾಗಿ ಗೆಜ್ಜೆಯಾಟ ನಡೆಸಿವೆ. ಆದರೂ ರಜಿಯಾ ಬದುಕಿನ ಕಾವನ್ನು ಕಾವ್ಯವನ್ನ ಇನ್ನೂ ಅಗೆಯಬೇಕು, ಮೊಗೆಯಬೇಕು ಎಂಬ ಅರಿವು ಮೂಡಿದ, ಅವರ ಹೆಚ್ಚಿನ ಹನಿಗಳು ಓದುವವರ ಬೆನ್ನಿಗೆ ಬಿದ್ದ ಸಂಬಂಧ ಸಂದೇಹಗಳೇ ಆಗಿ ಚಿಗುರೊಡೆಯುವುದು ಇಲ್ಲಿಯ ಬರವಣಿಗೆಯ ಯಶಸ್ಸು ಎಂದಿದ್ದಾರೆ ಸಿದ್ಧಲಿಂಗ ಪಟ್ಟಣಶೆಟ್ಟಿ.

About the Author

ಡಿ. ಬಿ. ರಜಿಯಾ
(26 January 1954)

ಡಿ. ಬಿ. ರಜಿಯಾ  ಮೂಲತಃ ಬಳ್ಳಾರಿ ಜಿಲ್ಲೆಯ ಹಿರೇಕಾಳಿನವರು. 1954 ಜನವರಿ 26ರಂದು ಜನನ. ತಂದೆ ಹೆಚ್. ಇಬ್ರಾಹಿಂ,  ತಾಯಿ ಸಕೀನಾ ಬೇಗಂ. ‘ಛಾಯೆ, ಕಳೆದು ಹೋಗುತ್ತೇವೆ, ಋತು’ ಎಂಬ ಹನಿಗವನಗಳನ್ನು ರಚಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆಯಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ. ‘ವಾಸ್ತವದ ಕನವರಿಕೆ’ ಅವರ ಕಥಾ ಸಂಕಲನವಾಗಿದೆ. ಅವರಿಗೆ ಡಾ. ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ದತ್ತಿ ಬಹುಮಾನ, ಕರಾವಳಿ ಲೇಖಕಿಯರು ವಾಚಕಿಯರ ಸಂಘದ ಕೃಷ್ಣಬಾಯಿ ದತ್ತಿ ಬಹುಮಾನ, ಅಮ್ಮ ಪ್ರಶಸ್ತಿ, ಮಾತೃಶ್ರೀ ರತ್ನಮ್ಮ ಹೆಗಡೆ ಬಹುಮಾನ , ಹರಿಹರಶ್ರೀ ಪ್ರಶಸ್ತಿ, ...

READ MORE

Related Books