ವಿಮರ್ಶಕರೆಂದು ಜನಪ್ರಿಯರಾಗಿರುವ ಗಿರಡ್ಡಿ ಗೋವಿಂದರಾಜ ಅವರ ಕವಿತೆಗಳ ಸಂಕಲನ. ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೇ ’ಶಾರದಾ ಲಹರಿ’ ಎಂಬ ಕವಿತೆ ಪ್ರಕಟಿಸಿದ್ದ ಗಿರಡ್ಡಿಯವರು ಕಾಲೇಜು ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ಪ್ರಕಟಿಸಿದ ಕವಿತೆಗಳ ಮೊದಲ ಸಂಕಲನವಿದು. ನಂತರ ಕತೆಗಾರ-ವಿಮರ್ಶಕರಾಗಿ ಹೆಸರು ಮಾಡಿದ ಗಿರಡ್ಡಿಯವರ ಆರಂಭಿಕ ಕವನ ರಚನೆಯ ಪ್ರಯತ್ನಗಳನ್ನು ಈ ಸಂಕಲನದಲ್ಲಿ ಗಮನಿಸಬಹುದು.
ಈ ಸಂಕಲನಕ್ಕೆ ಮುನ್ನುಡಿ ಬರೆದಿರುವ ಕವಿ ವಿ.ಕೃ,ಗೋಕಾಕ ಅವರು ’ಗೋವಿಂದರಾಜರ ಕವನಗಳಲ್ಲಿ ಒಂದು ಸಹಜಲಲಿತವಾದ ಓಟವಿದೆ. ಜಾನಪದ ಧಾಟಿಯೇ ಆಗಲಿ, ಭಾವಗೀತೆಯದಾಗಲೀ, ನವ್ಯಕಾವ್ಯವೇ ಆಗಲಿ,- ಅವರ ಛಂದೋಗತಿಗೆ ಕುಂದಿಲ್ಲ. ಅವರ ಬರವಣಿಗೆಯಲ್ಲಿ ಒಂದು ನಿರರ್‍ಗಳತೆಯಿದೆ. ಪ್ರಕೃತಿದೇವಿ ಇವರ ಭಾವ ಜೀವನಕ್ಕೆ ತುಂಬ ಒಲಿದಿದ್ದಾಳೆ. ಇಲ್ಲಿ ಒಂದು ತನ್ಮಯತೆಯಿದೆ. ಕಾವ್ಯದ ದುರ್ದಮ್ಯ ನೈಸರ್ಗಿಕತೆಯನ್ನು ಅವರು ಕಂಡುಕೊಂಡಿದ್ದಾರೆ. ಅನುಭವದ ನೈಜತೆ ಹಾಗೂ ಉತ್ಕಟತೆ ಬಂದಲ್ಲಿ ನಿರೂಪಣೆ ಪ್ರಸನ್ನವಾಗುತ್ತದೆ. ಇಂತಹ ಪ್ರಸನ್ನತೆಯನ್ನು ಇಲ್ಲಿಯ ಪ್ರಕೃತಿಗೀತೆಗಳಲ್ಲಿ ನಾವು ಕಾಣುತ್ತೇವೆ. ಜಾನಪದ, ಭಾವಗೀತ ಇಲ್ಲವೆ ನವ್ಯರೀತಿಯಲ್ಲಿಯೂ ಅದು ವ್ಯಕ್ತವಾಗಿದೆ’ ಎಂದು ವಿವರಿಸಿದ್ದಾರೆ.
ಖ್ಯಾತ ವಿಮರ್ಶಕ ಗಿರಡ್ಡಿ ಗೋವಿಂದರಾಜ ಅವರು ಮೂಲತಃ ಧಾರವಾಡ ಜಿಲ್ಲೆಯ ಅಬ್ಬಿಗೇರಿಯವರು. ತಂದೆ ಅಂದಾನಪ್ಪ ಮತ್ತು ತಾಯಿ ನಾಗಮ್ಮ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು. ಸಣ್ಣಕತೆ-ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಇಂಗ್ಲೆಂಡ್, ಬೆಲ್ಸಿಯಂ, ಫ್ರಾನ್ಸ್, ಸರೆಂಡ್, ಇಟಲಿಗಳಲ್ಲಿ ಉಪನ್ಯಾಸ ನೀಡಿರುವ ಅವರು ಇಂಗ್ಲಿಷ್ ಸ್ಟಡೀಸ್ ನಲ್ಲಿ ಡಿಪ್ಲಮೊ ಪಡೆದು ಕಲಬುರ್ಗಿಯ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದರು. ಬ್ರಿಟಿಷ್ ಕೌನ್ಸಿಲ್ ವಿದ್ಯಾರ್ಥಿ ವೇತನ ಪಡೆದು ಇಂಗ್ಲೆಂಡಿಗೆ ಭಾಷಾ ವಿಜ್ಞಾನದಲ್ಲಿ ವಿಶೇಷ ಅಧ್ಯಯನ ನಡೆಸಿದರು. ಅವರು ಹೈಸ್ಕೂಲಿನಲ್ಲಿರುವಾಗಲೇ 'ಶಾರದಾಲಹರಿ' ಎಂಬ ನೀಳ್ಗವಿತೆ ಪ್ರಕಟಿಸಿದ್ದರು. ನಾಟಕ ಅಕಾಡೆಮಿಯ ಫೆಲೋಶಿಪ್ ದೊರೆತಿರುವ ...
READ MORE