ರಸಾಲ

Author : ಪಿ.ಎಸ್. ರಾಮಾನುಜಂ

Pages 286

₹ 150.00




Year of Publication: 1997
Published by: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ
Address: ಗೋಕುಲಂ ಮೂರನೆಯ ಹಂತ ಮೈಸೂರು- 570002

Synopsys

'ರಸಾಲ'  ಪಿ.ಎಸ್. ರಾಮಾನುಜಂ ಅವರ ಸಮಗ್ರ ಕಾವ್ಯ ಸಂಕಲನ. ಎಂಟು ಕಾವ್ಯಸಂಕಲನಗಳನ್ನು ಒಟ್ಟುಗೂಡಿಸಿ ಈ ಸಂಕಲನ ಪ್ರಕಟಿಸಲಾಗಿದೆ. 'ರಸಾಲ'ವೆಂದರೆ ಮಾವಿನಹಣ್ಣು. ಅದು ನಮ್ಮದೇ ನೆಲದಲ್ಲಿ ಬೆಳೆಯುವ ವರ್ಣಮಯ, ರಸಭರಿತ ಹಣ್ಣು ಆದ್ದರಿಂದಲೇ ನಮ್ಮ ದೇಶದ ಪರಂಪರೆಯ ಸಂಸ್ಕಾರಗಳ ಹಿನ್ನೆಲೆಯಲ್ಲಿ ಬರೆದಿರುವ ಈ ಕವನಗಳ ಸಂಕಲನಕ್ಕೆ 'ರಸಾಲ'  ಎಂಬ ಹೆಸರು ಉಚಿತವೆಂದು ಲೇಖಕರು ಆಯ್ಕೆಮಾಡಿಕೊಂಡಿದ್ದಾಗಿ ಹೇಳುತ್ತಾರೆ.

ಈ ಸಂಕಲನದಲ್ಲಿ ಆಧ್ಯಾತ್ಮಿಕತೆ, ಆತ್ಮಾವಲೋಕನ, ಹಾಗೂ ಅಂತರಂಗಗಳ ಪ್ರಯಾಣಗಳ ಕವನಗಳೇ ಹೆಚ್ಚು. ಕೊನೆಯ ಸಾಲಿನಲ್ಲಿ ಅರ್ಥವು ಅಸ್ಫೋಟಿಸಿಕೊಂಡು ಬರುವಂತಹ ಚಮತ್ಕೃತಿಯ ಕವನಗಳೂ ಇವೆ. 

About the Author

ಪಿ.ಎಸ್. ರಾಮಾನುಜಂ
(16 October 1941)

ಪಿ.ಎಸ್. ರಾಮಾನುಜಂ ಕರ್ನಾಟಕ ರಾಜ್ಯ ಪೊಲಿಸ್ ಇಲಾಖೆಯಲ್ಲಿ IPS ಅಧಿಕಾರಿಗಳಾಗಿದ್ದು ಎಡಿಶನಲ್ ಡೈರೆಕ್ಟರ್ ಜನರಲ್ ಆಫ್ ಪೊಲಿಸ್ (ADGP) ಆಗಿ ಕಾರ್ಯನಿರ್ವಹಿಸಿ 2001ರಲ್ಲಿ ನಿವೃತ್ತರಾದರು. ಸಾಹಿತ್ಯ, ಆಡಳಿತ ಎರಡನ್ನೂ ಸಮರ್ಥವಾಗಿ ನಿರ್ವಹಿಸಿದ ಅವರ ಹುಟ್ಟೂರು ಚಾಮರಾಜನಗರ ಜಿಲ್ಲೆಯ ಬೇಡಮೂಡಲು ಗ್ರಾಮ. ತಂದೆ ಪ್ರತಿವಾದಿ ಭಯಂಕರ ಎಂದೇ ಬಿರುದಾಂಕಿತರಾಗಿದ್ದ ಸಂಪತ್ ಕುಮಾರ ಆಚಾರ್ಯ, ತಾಯಿ ಇಂದಿರಮ್ಮ. ಆರಂಭಿಕ ಶಿಕ್ಷಣ ಹರದನಹಳ್ಳಿ, ಚಾಮರಾಜನಗರದಲ್ಲಿ ಪೂರ್ಣಗೊಳಿಸಿದ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ(ಆನರ್ಸ್) ಪದವಿ ಪಡೆದರು,ಆನಂತರ ಕನ್ನಡ ಪಂಡಿತ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್, ಎಂ.ಎ ಪ್ರಥಮ ರ್ಯಾಂಕ್ ಸೇರಿದಂತೆ ಐದು ಚಿನ್ನದ ...

READ MORE

Related Books