‘ರಾಮು ಕವಿತೆಗಳು’ ಇದೊಂದು ವಿಭಿನ್ನ ರೀತಿಯ ಕವನ ಸಂಕಲನ ಇದರಲ್ಲಿ ಲೇಖಕರ ಹೆಸರು ಬಳಸಿಲ್ಲಾ. ಕವಿತೆಯು ಭಾಷೆಯಲ್ಲಿಯೇ ಆಗಬೇಕು ಎಂಬುದನ್ನು ವ್ರತದಂತೆ ಪಾಲಿಸುವ ಇಲ್ಲಿನ ಕವಿತೆಗಳು ಕನ್ನಡ ಭಾಷೆ ಮತ್ತು ಕನ್ನಡ ಸಾಹಿತ್ಯಕ್ಕೆ ಹೊಸ ದನಿಯನ್ನು ಸೇರಿಸುತ್ತಿವೆ. ಮನುಷ್ಯನ ಅಸಾಹಯಕತೆ, ಸಂಭ್ರಮ, ವಿರಾಹ, ವಿಷಾದ, ನೋವು, ಪ್ರತಿಭಟನೆ ಇತ್ಯಾದಿ ಭಾವಗಳನ್ನು ಅತಿ ಸರಳ ಭಾಷೆಯಲ್ಲಿ ಉಸುರುವ ಈ ಕವಿತೆಗಳು ಭಾಷಾಲೋಕದ ಬೆರಗನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಕಾರಣದಿಂದಲೇ ತನ್ನದೇ ವಿಶಿಷ್ಠ ಭಾಷೆ ಮತ್ತು ನುಡಿಗಟ್ಟನ್ನು ಸೃಷ್ಟಿಸಿಕೊಂಡಿದೆ.