ಪ್ರೇಮ ಉಕ್ಕಿತೋ ಸಾಗರದ್ಹಾಂಗ ಎಂಬ ಕೃತಿಯು ಜಿ.ಎನ್.ನಾಗರಾಜ್ ಅವರ ಕೃತಿಯಾಗಿದೆ. ಈ ಕೃತಿಯಲ್ಲಿ ಪ್ರೀತಿ, ಪ್ರೇಮವೆಂಬುದು ಸುಂದರ ಲಹರಿ, ಅದು ಪುಳಕಗೊಂಡಷ್ಟೂ ನೋಡುವವರಿಗೂ ಲಹರಿಯಲ್ಲಿರುವವರಿಗೂ ಆನಂದವೋ ಆನಂದ! ಆದರೆ ಇತ್ತೀಚಿಗೆ ನಾನಾ ಸಂಕೋಲೆಗಳ ಕೊಳಕು ಪ್ರೇಮಕ್ಕೆ ರಾಚಿ ಜಾತಿ-ಧರ್ಮದಿಂದ ಪ್ರೇಮ ಕಲುಷಿತಗೊಂಡಿದೆ. ವರ್ತಮಾನದ ಈ ಸಂಕಷ್ಟಗಳನ್ನು ಕವಿಗಳ,ಹಿರಿಯರ,ಯುವಕರ,ಪ್ರಾಜ್ಞರ ಚಿಂತನಾಲಹರಿಯನ್ನು ಸೇರಿಸಿ ಸ್ವಚ್ಛಗೊಳಿಸುವ ಪ್ರಯತ್ನವೇ ಪ್ರೇಮ ಉಕ್ಕಿತೋ ಸಾಗರದ್ಹಾಂಗ ಪುಸ್ತಕ.
ಎಡಪಂಥೀಯ ಚಿಂತನೆಗಳ ಮೂಲಕ ಕನ್ನಡಿಗರಿಗೆ ಪರಿಚಿತರಿರುವ ಜಿ.ಎನ್. ನಾಗರಾಜ್ ಅವರು ಹೈಸ್ಕೂಲ್ ಶಿಕ್ಷಣವನ್ನು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿನಲ್ಲಿ ಪಡೆದರು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಬಿಎಸ್ಸಿ (1971 ಅಗ್ರಿ) ಹಾಗೂ ಎಂಎಸ್ಸಿ (1973) ಪದವಿ ಪಡೆದರು. ಸದ್ಯ ಕೃಷಿ ಕೂಲಿಕಾರರ ಸಂಘ ಕರ್ನಾಟಕ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ...
READ MORE