ಪೊರೆ ಕಳಚಿದ ಮೇಲೆ

Author : ಸಿಬಂತಿ ಪದ್ಮನಾಭ ಕೆ.ವಿ

Pages 80

₹ 40.00




Year of Publication: 2007
Published by: ಅಭಿನವ ಪ್ರಕಾಶನ
Address: ಮುಖ್ಯರಸ್ತೆ, ಮಾರೇನಹಳ್ಳಿ, 17/18-2, 1ನೇ ವಿಜಯನಗರ, ಬೆಂಗಳೂರು -560040
Phone: 9448804905

Synopsys

ಕವಿ ಸಿಬಂತಿ ಪದ್ಮನಾಭ ಅವರ ಕವನ ಸಂಕಲನ ’ಪೊರೆ ಕಳಚಿದ ಮೇಲೆ’.

ಇವರ ಬಹುತೇಕ ಕವನಗಳು ಪ್ರಕೃತಿ ಕೇಂದ್ರಿತವಾಗಿಯೇ ಇರುವಂತದ್ದು.  ಮಳೆ, ಮರ, ಸೂರ್ಯ, ತೊರೆ, ಬಾನು, ಎಲ್ಲವೂ ಇವರ ಕವನಗಳ ವಸ್ತುವಾಗಿದೆ. ಮತ್ತು ಅಷ್ಟೇ ದುಗುಡ, ಬೇಸರ, ನಿರಾಸೆ, ಒಂಟಿತನದ ಭಾವಗಳಿಂದ ತುಂಬಿದ ಕವಿತೆಗಳೂ ಸಹ ಕವಿಯ ರಚನೆಯಲ್ಲಿ ಕಾಣಬಹುದು.

ಬದುಕಿನ ಹಲವಾರು ಚಿತ್ರಣಗಳೊಂದಿಗೆ ಮುಖಾಮುಖಿಯಾಗುವ  ಪ್ರೀತಿ, ಸಿಟ್ಟು, ವಿಷಾದ, ನೋವು, ಭಯ, ಕನಸುಗಳನ್ನೆಲ್ಲ ಕವಿ ತಮ್ಮ ಕವಿತೆಗಳಲ್ಲಿ ಬಿತ್ತರಿಸಿದ್ದಾರೆ.  ಕೆಲವಡೆ ಅಸ್ಪಷ್ಟ ಹಾದಿಯಲ್ಲಿ ಮುನ್ನಡೆಯುವ ಒಂಟಿಪಯಣದಂತೆ ಕವಿ ಹೀಗೆ ರಚಿಸಿದ್ದಾರೆ :

ಇತಿಹಾಸದ ಪುಟಗಳಂತೆ

ಮೈಚಾಚಿ ಮಲಗಿರುವ

ಪದರುಪದರು ತರಗೆಲೆಗಳ ಕೆಳಗೆ,

ವರ್ತಮಾನದ ಕನ್ನಡಿಗಳಂತೆ

ಹುಲ್ಲು ಹಾಸಿಗೆಯ ಮೇಲೆ

ಬಾಯ್ಮುಚ್ಚಿ ಮುದುರಿರುವ

ನುಣ್ಣನೆಯ ಇಬ್ಬನಿಗಳ ಒಳಗೆ ….ಹೀಗೆ ಕವಿಯ ಕವಿತೆಯ ವಸ್ತು ಸಾಗುತ್ತದೆ.

About the Author

ಸಿಬಂತಿ ಪದ್ಮನಾಭ ಕೆ.ವಿ

ಸಿಬಂತಿ ಪದ್ಮನಾಭ ಕೆ. ವಿ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದವರು. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಬಿಎ ವ್ಯಾಸಂಗ , ಆನಂತರ ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.  ಯುಜಿಸಿ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯೊಂದಿದ್ದು ಫೆಲೋಶಿಪ್‌ಗೆ ಆಯ್ಕೆಯಾಗಿ,  'ವಿಜಯ್ ಟೈಮ್' ಹಾಗೂ 'ಡೆಕ್ಕನ್ ಹೆರಾಲ್ಡ್' ದೈನಿಕಗಳಲ್ಲಿ ಪತ್ರಕರ್ತರಾಗಿದ್ದರು.   ಪ್ರಸ್ತುತ ತುಮಕೂರು ವಿಶ್ವವಿದ್ಯಾನಿಲಯದ ಘಟಕ ಸಂಸ್ಥೆ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ಪತ್ರಿಕೋದ್ಯಮ ಸಹಾಯಕ ಪ್ರಾಧ್ಯಾಪಕರಾಗಿದ್ದು, ರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಶೋಧನ ಪ್ರಬಂಧಗಳನ್ನು ಮಂಡಿಸಿದ್ದಾರೆ. ಯಕ್ಷಗಾನ, ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. “ಪೊರೆ ಕಳಚಿದ ಮೇಲೆ', 'ತುಮಕೂರು ಜಿಲ್ಲೆಯ ...

READ MORE

Related Books