`ಪಿಸುಗುಡುವ ಹಕ್ಕಿ’ ಕೃತಿಯು ಸರಸ್ವತಿ ಕೆ ನಾಗರಾಜ್ ಅವರ ಕವನ ಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ರಾಜುಕವಿ ಸೂಲೇನಹಳ್ಳಿ ಅವರು, `ಇಲ್ಲಿರುವ ಕವನಗಳ ಶೀರ್ಷಿಕೆ ಹೀಗಿವೆ; ಕವಿ ಮನ, ಎದೆಯಾಳದಿಂದ, ಕವಿ ಸ್ವಾರ್ಥಿಯಾಗದಿರು ನೀನೆಂದೂ, ಸೋತಿರುವೆವು ಪ್ರಕೃತಿಯ ಎದುರು, ಪರಿವರ್ತನೆ, ಮುಂಜಾನೆ ಮೊದಲ ಸೂರ್ಯ ರಶ್ಮಿ, ಸ್ಪಂದಿಸುವರಾರು, ಹೃದಯದಿಂದ, ದೇವರ ಆಟ, ಜಗವೇ ಒಂದು ನಾಟಕರಂಗ. ಹಂಬಲ, ನವ ಮನ್ವಂತರ, ಬೆವರು ನೀರುಂಡು. ಹಳ್ಳಿಯ ಸೊಗಡು, ಮಾಣಿಕ್ಯ ಬಿಂದು, ಓ ನನ್ನ ಕನ್ನಡಾಂಬೆ, ಬದುಕಿನ ಬಂಡಿ, ಪಿಸುಗುಡುವ ಹಕ್ಕಿ, ಮಧುರ ಸಂಜೆಯಲಿ, ಜನುಮ ಸಾರ್ಥಕ ವಾಗೋದು ಸಾಧಿಸಿದ ಮೇಲೆ, ನನ್ನಪ್ಪ, ಅಣ್ಣನೆಂದರೆ, ಓ ಚಂದಮಾಮ, ಬದುಕೆಂದರೆ ಹೀಗೆ, ಪಂಜರದ ಬದುಕು, ಅವಳೇ ನನ್ನಮ್ಮ, ಈ ಎಲ್ಲಾ ಕವನಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕವಿ ಮನ ಕವಿತೆಯಲ್ಲಿ ಒಬ್ಬ ಕವಿ ಏನನ್ನ ನೋಡಿ ಬರೆಯಬೇಕು ಯಾವ ಅಂಶ ಹೇಳಬೇಕು ಎನ್ನುವ ಸಲಹೆ ಹಾಗೂ ಮಾರ್ಗದರ್ಶನ ಮಾತುಗಳು ಈ ಕವನದಲ್ಲಿ ಹೊರ ಹೊಮ್ಮುತ್ತವೆ ಎನ್ನುತ್ತಾರೆ. ಇನ್ನೂ ಎದೆಯಾಳದಿಂದ ಕವನದಲ್ಲಿ ಮನಸ್ಸು ಎಷ್ಟು-ಭಾರ ಎಂತಹ ಸೂಪ್ತ ಭಾವಗಳ ಸಂತೆ ಆಗಿರುತ್ತದೆ ಆದರೂ ಹೊರ ಬರಲಾರವು ಎಂಬ ವಿಚಾರ ಈ ಕವನ ತೋರಿಸುತ್ತದೆ. ಮುಂದುವರೆದು ಸೋತಿರು ಪ್ರಕೃತಿಯ ಎದುರು ಈ ಕವನ ದೊಳಗೆ ಏನಿದೆ ಬದುಕಲಿ ಪರಿಸರ ದೈವ ಕೊಟ್ಟ ವರ ಆದಕ್ಕೆ ನಾವು ಬೆಳೆಸುವ ಹಾಗೂ ಸಂರಕ್ಷಣೆ ಮಾಡುವ ದಿಸೆಯಲ್ಲಿ ಸಾಗಬೇಕು ಹೊರತು ನಶಿಸುವ ಕಾರ್ಯ ಸಲ್ಲದು ಎನ್ನುವಂತಹ ಪರಿಸ್ಥಿತಿ ಕುರಿತು ಮನವರಿಕೆ ಮಾಡುತ್ತಾರೆ. ಹಾಗೆಯೇ , ಪರಿವರ್ತನೆ ಕವನದಲ್ಲಿ ಬೇರೆಯವರ ಮೇಲೆ ಆರೋಪ ಮಾಡೋ ಮುನ್ನ ನಮ್ಮ ಅಂತರಂಗದ ಬದಲಾವಣೆ ಜಗದೊಳಗೆ ಅನಿವಾರ್ಯ ನಮ್ಮ ಮನದೊಳಗಿನ ಕಿಚ್ಚು, ಖಿನ್ನತೆ, ದ್ವೇಷ ಕಿತ್ತೊಗೆಯಬೇಕು ಹಾಗೂ ಬದಲಾವಣೆ ನಮ್ಮಿಂದ ಮಾತ್ರ ಸಾಧ್ಯ ಎಂದು ಈ ಕವನದಲ್ಲಿ ಲೇಖಕಿ ವಿಶ್ಲೇಷಿಸಿದ್ದಾರೆ' ಎಂದು ಪ್ರಶಂಸಿಸಿದ್ದಾರೆ.
ಸರಸ್ವತಿ ಕೆ ನಾಗರಾಜ್ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನವರು. ಬಿ.ಕಾಂ. ಡಿ ಇಡಿ ಪದವೀಧರರು. ಕವನ, ಚುಟುಕು, ಲೇಖನಗಳ ಬರಹ ಅವರ ಹವ್ಯಾಸ. ವರದಿಗಾರರೂ ಹೌದು. ರಾಜ್ಯದ ವಿವಿಧೆಡೆ ನಡೆದ ಕವಿಗೋಷ್ಠಿ ಮತ್ತು ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ. ಕೃತಿಗಳು ; ಪಿಸುಗುಡುವ ಹಕ್ಕಿ (ಕವನ ಸಂಕಲನ) ಪ್ರಶಸ್ತಿ-ಪುರಸ್ಕಾರಗಳು: ಕನ್ನಡ ಸೇವಾ ತಪಸ್ವಿ ಪ್ರಶಸ್ತಿ, ಇಂಚರ ಸಾಹಿತ್ಯ ಕುಟೀರದ ಕವಿ ಕಣ್ಮಣಿ ಪ್ರಶಸ್ತಿ, ಬೆಳದಿಂಗಳ ಸಾಹಿತ್ಯ ಬಳಗದ ಸಾಹಿತ್ಯ ರತ್ನ ಪ್ರಶಸ್ತಿ, ಕಲಾದೇಗುಲ ಭಾವನೆಗಳ ಸಂಗಮ ವೇದಿಕೆಯ ಕವಿ ಕುಸುಮ ಪ್ರಶಸ್ತಿ, ಇಂಚರ ಸಾಹಿತ್ಯ ಕುಟೀರದ ಕನ್ನಡ ಕಣ್ಮಣಿ ಪ್ರಶಸ್ತಿ, ಕನ್ನಡದ ಕವನ ಕಣ್ಮಣಿ (ಚಿತ್ರ ಕಾವ್ಯ ಅಭಿಯಾನ ಕರ್ನಾಟಕ ವೇದಿಕೆ), ರಾಜ್ಯ ...
READ MORE