ಪತ್ರ... ಪುಷ್ಪ... ಫಲ

Author : ದೊಡ್ಡರಂಗೇಗೌಡ

Pages 160

₹ 70.00




Year of Publication: 2010
Published by: ದೇಸಿ ಪ್ರಕಾಶನ
Address: #4067/37 ’ಬಿ’ ಬ್ಲಾಕ್, 3 ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, 2 ನೇ ಅಂತ ರಾಜಾಜಿನಗರ, ಬೆಂಗಳೂರು-560010

Synopsys

ಕವಿ ಡಾ. ದೊಡ್ಡರಂಗೇಗೌಡ ಅವರ ಕವನ ಸಂಕಲನ-ಪತ್ರ ಪುಷ್ಪ ಫಲ. ಕೃತಿಗೆ ಮುನ್ನುಡಿ ಬರೆದ ಸಾಹಿತಿ ಜಿ. ನಾಗರಾಜ್ ಅವರು, ಈ ಜಗತ್ತೇ ಒಂದು ಅನುಭವಗಳ ಆಗರ; ಕವಿಯಾದವನಿಗೆ ಅದು ಸ್ಪೂರ್ತಿ ಸಾಗರ. ಅಲ್ಲಿ ನಿತ್ಯ ಹೊಸತನಗಳ ರಂಗು . ರಸಭಾವಗಳ ಗುಂಗು ಅಲೆ ಅಲೆಯಾಗಿ ತೇಲಿ ಬರುತ್ತಲೇ ಇರುತ್ತವೆ. ಕವಿ ಆ ಸಾಗರದಲ್ಲಿ ಈಜುತ್ತಾ, ಅದರ ಹೊಳಹನ್ನು ಕಾಣುತ್ತಾ, ಕಾವ್ಯ ನೆಲೆಯನ್ನು ಹುಟ್ಟು ಹುಡುಕುವವರಿಗೆ ಈ ಸತ್ಯ ಅರಿವಾಗಿ ಬಿಡುತ್ತದೆ. ಅವರ ಬರವಣಿಗೆಯೇ ಅಂಥದ್ದು. ಅಲ್ಲಿ ವಿಶ್ವದ ಎಲ್ಲ ಮುಖಗಳೂ ಅನಾವರಣಗೊಳ್ಳುತ್ತವೆ. ಪುಷ್ಪ ಕಮಲದಲ್ಲಿ ಅವರದೇ ಆದ ಛಾಪು ಮೂಡಿದೆ. ಇಲ್ಲಿನ ಕವನಗಳು ಅವರ ಅನುಭವಕ್ಕೆ ಅಂಟಿದ ನಲ್ಮೆಯ ನಂಟುಗಳಾಗಿವೆ. ಕಾವ್ಯ ಗುಚ್ಛಕ್ಕೆ ಯಾವುದೇ ’ ನಲ್ನುಡಿ’ಯ ಆಭರಣದ ಅಲಂಕಾರದ ಅವಶ್ಯಕತೆ ಇಲ್ಲವಾಗಿದ್ದು, ಕವನಗಳೇ ನೇರವಾಗಿ ಓದುಗನ ಮನಸ್ಸಿಗೆ ನಾಟಿ ಬಿಡುತ್ತವೆ. ಅಷ್ಟು ಸರಳವಾಗಿ ಹಾಗೂ ನೇರವಾಗಿರುತ್ತವೆ ಪದ್ಯಗಳು. ಕವನದಲ್ಲಿ ಭಾವತೀವ್ರತೆಯ ಸರಿತೆಗಳಿವೆ ಜೊತೆಗೆ ಸಮಾಜಮುಖಿ ಚಿಂತನೆಗಳಿವೆ, ಬಾಳಿನ ಏಳು ಬೀಳಿನ ತಿರುಳುಗಳಿವೆ, ಭಕ್ತಿಗೀತೆ, ಭಾವಗೀತೆ ಹಾಗೂ ನವ್ಯೋತ್ತರಗಳ ಝಲಕ್ಕೂ ಇದೆ. ಮನಸ್ಸಿನ ಭಾವಗಳಿಗೆ ಅವರು ನೀಡುವ ಕಾವ್ಯ ಚಿತ್ರಣ ಸೊಗಸಾಗಿರುತ್ತದೆ’ ಪ್ರಶಂಸಿಸಿದ್ದಾರೆ. 

About the Author

ದೊಡ್ಡರಂಗೇಗೌಡ
(07 February 1946)

ಕವಿ, ಸಾಹಿತಿ ಮನುಜ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ದೊಡ್ಡರಂಗೇಗೌಡ ಅವರು, ತುಮಕೂರು ಜಿಲ್ಲೆ ಕುರುಬರಹಳ್ಳಿಯಲ್ಲಿ 1946 ಫೆಬ್ರುವರಿ 7ರಂದು ಜನಿಸಿದರು. ತಂದೆ ರಂಗೇಗೌಡ, ತಾಯಿ ಅಕ್ಕಮ್ಮ.  ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಇವರು, ‘ಕನ್ನಡ ನವೋದಯ ಕಾವ್ಯ- ಒಂದು ಪುನರ್‌ಮೌಲ್ಯಮಾಪನ ’ ಎಂಬ ಪ್ರಬಂಧ ಮಂಡಿಸಿ ಪಿಎಚ್‌ಡಿ ಪಡೆದರು. ಬೆಂಗಳೂರಿನ ಎಸ್‌.ಎಲ್‌.ಎನ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.  ಕಾಲೇಜು ದಿನಗಳಲ್ಲೇ ಕವನ, ಕತೆ ರಚನೆಯಲ್ಲಿ ತೊಡಗಿಕೊಂಡಿದ್ದ ಇವರು ಸುಮಾರು 500ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ಬರೆದಿದ್ದಾರೆ. ಕಾವ್ಯ, ವಿಮರ್ಶಾ ಕೃತಿಗಳು, ಭಾವಗೀತೆ ಹಾಗೂ ...

READ MORE

Related Books