ಪರ್ಣ

Author : ವಿಶ್ವನಾಥ ಅರಬಿ

Pages 92

₹ 115.00




Year of Publication: 2024
Published by: ಸಂಗೀತಾಜಗತ್ತು ಪಬ್ಲಿಕೇಷನ್ಸ್
Address: #01, ಯಕಾಚಿ ಬಿಲ್ಡಿಂಗ್, ನ್ಯೂ ವಿಟ್ಟಲ ಮಂದಿರ, ಬಿದರಿ ಆಸ್ಪತ್ರೆಯ ಎದುರುಗಡೆ, ವಿಜಯಪುರ-586101
Phone: 9686604710

Synopsys

`ಪರ್ಣ’ವಿಶ್ವನಾಥ ಅರಬಿ ಅವರ ತಾಂಕಾ ಸಂಕಲನವಾಗಿದೆ. ಕೃತಿಯ ಕುರಿತು ಲೇಖಕ ಹೀಗೆ ಹೇಳುತ್ತಾರೆ; ತಾಂಕಾ ಸಾಹಿತ್ಯವು ಜಪಾನಿ ಸಾಹಿತ್ಯದ ಒಂದು ಪ್ರಕಾರವಾಗಿದ್ದು, ಇದು ನನ್ನನ್ನು ಬಹಳಷ್ಟು ತನ್ನೆಡೆಗೆ ಸೆಳೆದಿದೆ. ಸುಂದರ ಪ್ರಕೃತಿ, ಪ್ರೀತಿ-ಪ್ರೇಮ, ಸ್ನೇಹ- ಸಂಬಂಧ ಮತ್ತು ನೈತಿಕತೆಯ ವಿಷಯಗಳನ್ನು ಐದು ಸಾಲುಗಳಲ್ಲಿ ವರ್ಣಿಸುವ ಕಾರ್ಯಕ್ಕೆ ಮುಂದಾಗಿದ್ದೆ ತಾಂಕಾ ಸಂಕಲನದ ಜನನಕ್ಕೆ ಕಾರಣವಾಯಿತು. ತಾಂಕಾ ಸಾಹಿತ್ಯವು ಹಾಯ್ಕುವಿನ ಮುಂದುವರೆದ ಭಾಗದಂತಿದ್ದು, ಈಗಾಗಲೇ ಹಾಯ್ಕುವಿನಲ್ಲಿ ಪಳಗಿದ್ದ ನನಗೆ ತಾಂಕಾ ಮತ್ತಷ್ಟು ರುಚಿ ನೀಡತೊಡಗಿತು. ಹೀಗಾಗಿ, ಈ ಕೃತಿಯನ್ನು ತಮ್ಮ ಮನಸ್ಸಿಗೆ ಹಿಡಿಸುವಂತೆ ಬರೆಯಲು ಯತ್ನಿಸಿದ್ದೇನೆ ಎಂದಿದ್ದಾರೆ.

About the Author

ವಿಶ್ವನಾಥ ಅರಬಿ
(02 May 1999)

ಲೇಖಕ ವಿಶ್ವನಾಥ ಅರಬಿ ಅವರು ಮೂಲತಃ  ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಾವೂರಿನವರು. ವಿಜಯಪುರದಲ್ಲಿ ವಾಸವಾಗಿದ್ದಾರೆ. ತಂದೆ ಬಸಪ್ಪ, ತಾಯಿ ಶಂಕ್ರಮ್ಮ, ವಿಜಯಪುರದಲ್ಲಿ ಪ್ರಾಥಮಿಕ-ಪ್ರೌಢಶಿಕ್ಷಣ, ಪಿ ಯು ಸಿ.ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ, ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಎ. ಸ್ನಾತಕೋತ್ತರ (ಅರ್ಥಶಾಸ್ತ್ರ)  ಪದವಿ ಪಡೆದರು. ಕಾಲೇಜು ಹಂತದಲ್ಲಿ ಚರ್ಚಾ ಸ್ಪರ್ಧೆ,ಭಾಷಣ ಸ್ಪರ್ಧೆ, ಆಶುಭಾಷಣ, ದೇಶ ಭಕ್ತಿ ಗೀತೆ ಹೀಗೆ ರಾಜ್ಯಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಹಲವು ಪ್ರಶಸ್ತಿಗಳನ್ನು ಹಾಗೂ 2016-2017 ಸಾಲಿನಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಅಣಕು ಯುವ ...

READ MORE

Related Books