ಅಂಬರೀಷ ಎಸ್. ಪೂಜಾರಿ ಅವರ ಕವನ ಸಂಕಲನ ಪರಿವರ್ತನೆ. ಪ.ಗು.ಸಿದ್ದಾಪುರ ಅವರು ಈ ಕೃತಿಯಲ್ಲಿ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಅಂಬರೀಷ ಪೂಜಾರಿಯವರು ಗ್ರಾಮೀಣ ಪ್ರದೇಶದಲ್ಲಿ ಕಂಡುಂಡ ಅನುಭವಗಳನ್ನು ರಸವತ್ತಾಘಿ, ಮಾರ್ಮಿಕವಾಗಿ ಹೆಣೆದಿದ್ದಾರೆ. ಕಾವ್ಯ ಓತಪ್ರೋತವಾಗಿ ಹರಿದುಬಂದಿದೆ. ಎಲ್ಲೂ ತಡವರಿಸುವುದಿಲ್ಲ. ಪಳಗಿದ ಕೈ ಎಂದೆನಿಸುತ್ತದೆ. ಎಲ್ಲ ಕವಿತೆಗಳು ಓದುಗರ ಹೃದಯವನ್ನು ತಟ್ಟುತ್ತವೆ, ಮುಟ್ಟುತ್ತವೆ ಎಂದಿದ್ದಾರೆ.
ಅಂಬರೀಷ ಎಸ್. ಪೂಜಾರಿ ಅವರು ಬಿಜಾಪುರ ಜಿಲ್ಲೆಯ ಯಕ್ಕುಂಡಿಯವರು. ಪ್ರಾಥಮಿಕ ಶಿಕ್ಷಣವನ್ನು ಯಕ್ಕುಂಡಿಯಲ್ಲೇ ಮುಗಿಸಿ, ಬಬ್ಲೇಶ್ವರದಲ್ಲಿ ಶಿಕ್ಷಣದಲ್ಲಿ ನಂತರದ ಶಿಕ್ಷಣ ಹಾಗೂ ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಎಂ.ಎ ಪದವಿ ಪಡೆದರು. ಸದ್ಯ ರಾಮನಗರದ ಜಿಲ್ಲಾ ಕಾರಾಗೃಹದಲ್ಲಿ ಅಧೀಕ್ಷಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೃತಿಗಳು: ಪರಿವರ್ತನೆ (ಕವನ ಸಂಕಲನ), ಕರೋನ ಮತ್ತು ಇತರೆ ಕವಿತೆಗಳು (ಕವನ ಸಂಕಲನ). ...
READ MORE