‘ಪಣತಿ ಮತ್ತು ಮಹಾನವಮಿ’ ಡಾ. ಸಿ.ಬಿ. ಚಿಲ್ಕರಾಗಿ ಅವರ ಕವನಸಂಕಲನ. ಇಲ್ಲಿ ಕವಿ ತಮ್ಮ ಊರು, ವೃತ್ತಿ, ನಾಡು, ಗಾಂಧಿ, ಅಂಬೇಡ್ಕರ್, ಅಕ್ಕಮಹಾದೇವಿ, ಕನಕ, ಚೆಗೆವಾರ, ಎಸ್ ಇ ಝಡ್, ಜಾಗತೀಕರಣ, ಉದಾರೀಕರಣ, ಎಲ್ಲದಕ್ಕೂ ಪ್ರತಿಕ್ರಿಯಿಸುವ ಉತ್ಸಾಹದಲ್ಲಿ ತಮ್ಮ ಆಶಯವನ್ನು ತೋರಿದ್ದಾರೆ. ಕರಡಿ ಕೂದಲು, ಬೆಳ್ಳಗಿದ್ದದ್ದು, ಮಾನ ದಂತಹ ರಚನೆಗಳು ಕುತೂಹಲ ಮೂಡಿಸುತ್ತ ಭರವಸೆ ನೀಡುತ್ತವೆ.
ಡಾ. ಸಿ.ಬಿ. ಚಿಲ್ಕರಾಗಿ ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಚಿಲ್ಕರಾಗಿ ಗ್ರಾಮದವರು. ಚಿಲ್ಕರಾಗಿ, ಗುಡಿಹಾಳ, ಮಸ್ಕಿ ಮತ್ತು ಕೊಪ್ಪಳ ಜಿಲ್ಲೆಯ ಕನಕಗಿರಿ, ಗಂಗಾವತಿ ಪ್ರೌಢ ಶಿಕ್ಷಣ ಹಾಗೂ ಕಾಲೇಜು, ಪದವಿ ಶಿಕ್ಷಣ ನಂತರ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದರು. ಸದ್ಯಕ್ಕೆ, ಕೊಪ್ಪಳ ಜಿಲ್ಲಾ ಕೇಂದ್ರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದಾರೆ. ಕೃತಿಗಳು:ತಿಳಿವಳಿಕೆ ಬಯಲು, ನೂರೆಂಟು ನಾಯಿ ಬೊಗಳಿದರೇನು, ಪಣತಿ ಮತ್ತು ಮಹಾನವಮಿ, ಎಲ್ಲಿತ್ತು ಈ ಮೊದಲು ಎಲ್ಲಿಂದ ಬಂತವ್ವ ಹಾಗೂ ಹಮ್ಮಿಗೆ ಬ್ರಹ್ಮ ತಾ ಕೆಟ್ಟ ಎನ್ನುವ ಕೃತಿಗಳನ್ನುರಚಿಸಿದ್ದಾರೆ. ...
READ MORE