ಒಂದು ಹನಿ ಮೌನ..

Author : ಅಮೃತಾ ಮೆಹೆಂದಳೆ

₹ 120.00




Year of Publication: 2022
Published by: ಸಂಜೆ ಪಬ್ಲಿಕೇಷನ್ಸ್‌
Address: ನಂ.11, 2ನೇ ಕ್ರಾಸ್‌, ಕೆಂಪೇಗೌಡ ನಗರ, ಟೆನಿಸ್‌ ವಿಲೇಜ್‌ ಹಿಂಭಾಗ, ಕೊಡಿಗೇಹಳ್ಳಿ, ಬೆಂಗಳೂರು- 560097
Phone: 9481278257

Synopsys

ಅಮೃತಾ ಮಹೆಂದಳೆ ಅವರ ಹನಿಗವನ ಸಂಕಲನ ಕೃತಿ ʻಒಂದು ಹನಿ ಮೌನʼ. ಲೇಖಕಿ 2016ರಿಂದ ಇಲ್ಲಿಯ ವರೆಗೆ ಬರೆದ ಹನಿಗವನಗಳು ಇದರಲ್ಲಿವೆ. ಹಲವಾರು ದಿನ ಪತ್ರಿಕೆಗಳಲ್ಲಿ ಅವುಗಳು ಪ್ರಕಟವಾಗಿವೆ ಕೂಡಾ. ತಮ್ಮ ಕಣ್ಣೆದುರು ಕಂಡದ್ದನ್ನು ಮತ್ತು ಪರಿಭಾವಿಸಿದ ಬಾಳನ್ನು ಇಲ್ಲಿ ಹಾಡಿನಲ್ಲಿ ತಂದಿದ್ಧಾರೆ. ಪುಸ್ತಕದ ಮುನ್ನುಡಿಯಲ್ಲಿ ವಾಸುದೇವ ನಾಡಿಗ್ ಅವರು, ಅಮೃತಾ ಅವರ ನೋಟ ಚುರುಕು ಮತ್ತು ತುಸು ವ್ಯಂಗ್ಯ ಅನಿಸುವಂತಹ ಹನಿಗಳು ಇಲ್ಲಿವೆ. ಅವರು ಎಲ್ಲೂ ಹೀಗೆ ಎಂದು ಶರಾ ಬರೆಯದೇ ಇದು ಹೀಗಿದೆ ಇಷ್ಟಿದೆ ಎಂದೇ ಪರಿಭಾವಿಸುತ್ತಾರೆ ಆದ್ದರಿಂದ ಇವು ಅತಿಯಾದ ತಾತ್ವಿಕತೆಯಿಂದ ಭಾರವಾದ ಭೋದನೆ ಎನಿಸುವುದಿಲ್ಲ, ಬದಲಿಗೆ ಸುಖ ದುಃಖ ನೋವು ನಲಿವು ರೋಮಾಂಚನ ನಿರಾಶೆ ವಿಷಾದ ನಿರುದ್ವಿಗ್ನತೆ, ನಿರ್ಲಿಪ್ತತೆ ಮತ್ತು ಸಣ್ಣ ಶಂಕೆ ಎಲ್ಲಕ್ಕೂ ಹನಿಗವನದ ಆಕೃತಿ ನೀಡುತ್ತಾರೆ. ಅವು ಸರಳವಾಗಿ ಒಡನಾಡುತ್ತವೆ. ಸರಳತೆ ಅಮೃತಾ ಅವರ ಸಾಲುಗಳ ಶಕ್ತಿ ಕೂಡಾ. ಕೆಲವೊಮ್ಮೆ ವಿಸ್ತಾರಗೊಳಿಸಬಹುದಾಗಿದ್ದ ವಿಷಯ ವಸ್ತುವನ್ನು ಕೂಡ ಹನಿಗೆ ಸೀಮಿತಗೊಳಿಸುತ್ತಾರೆ. ಇದು ಅವರೇ ಹಾಕಿಕೊಳ್ಳುವ ಮಿತಿಯೋ ಅಥವಾ ಅವರೇ ಕಂಡುಕೊಂಡ ಹನಿಗಳ ಸಾಮರ್ಥ್ಯವೋ ನೋಡಬೇಕು. ಹನಿ ರಚನೆಯಲ್ಲಿ ಇದೊಂದು ಅಪಾಯ ಇದ್ದೇ ಇರುತ್ತದೆ. ಅದು ಭಾವದ ವಿಸ್ತಾರವನ್ನು ಬಗೆ ಬಗೆಯ ರೂಪಕಗಳಿಂದ ನಿರೂಪಿಸುವ ದೀರ್ಘ ಧ್ಯಾನ ಮತ್ತು ಕಾವ್ಯ ತಾಳ್ಮೆಯಿಂದ ವಂಚಿಸಿ ಬಿಡಬಲ್ಲದು. ಹನಿಗೇ ಸೀಮಿತವಾದ ಸೃಜನಶೀಲತೆ ಕೆಲವೊಮ್ಮೆ ತನ್ನಷ್ಟಕ್ಕೆ ತಾನು ತನಗೇ ಮಿತಿಯನ್ನೂ ಹಾಕಿಕೊಂಡುಬಿಡುತ್ತದೆ. ಬಹುಷ ಅಮೃತಾ ಮೆಹೆಂದಳೆಯವರಿಗೂ ಇದು ಅನುಭವಕ್ಕೆ ಬಂದಿರಬಹುದು. ಏನೆಲ್ಲವನ್ನೂ ಇಂತಿಷ್ಟೇ ಸಾಲುಗಳಲ್ಲಿ ಅಡಕಗೊಳಿಸಬೇಕೆಂಬ ಕಟು ನಿರ್ಧಾರ ಪದ ಮತ್ತು ಅರ್ಥ ವಿಸ್ತಾರದ ಸಾಧ್ಯತೆಗಳನ್ನೇ ಮರೆಮಾಚಿಸುವಂತೆ ಮಾಡಬಹುದು” ಎಂದು ಹೇಳಿದ್ದಾರೆ.

About the Author

ಅಮೃತಾ ಮೆಹೆಂದಳೆ

ಅಮೃತಾ ಮೆಹೆಂದಳೆ ಅವರು ವಾಣಿಜ್ಯ ಪದವೀಧರೆ, ಕನ್ನಡ ಸ್ನಾತಕೋತ್ತರ ಪದವೀಧರೆಯಾಗಿದ್ದು, ಸಾಹಿತ್ಯ ಚಟುವಟಿಕೆ: ನೂರಾರು ಹನಿಗವನಗಳು, ಲೇಖನ, ಕವನ, ಕಥೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಕಟಿತ ಕೃತಿ: 2003 ರಲ್ಲಿ " ಮೌನದ ಮಾತುಗಳು" ಕವನ ಸಂಕಲನ ಪ್ರಕಟವಾಗಿದೆ. 2017 ರಲ್ಲಿ " ಹನಿಯೆಂಬ ಹೊಸ ಭಾಷ್ಯ " ಹನಿಗವನ ಸಂಕಲನ ಪ್ರಕಟವಾಗಿದ್ದು, " ಚೇತನಾ" ಸಾಹಿತ್ಯ ಪ್ರಶಸ್ತಿ, " ಅಡ್ವೈಸರ್" ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಗಳೊಂದಿಗೆ " ಪರೀಕ್ಷಾ ಪದ್ಧತಿ" ಎಂಬ ಪುಸ್ತಕ ಪ್ರಕಟವಾಗಿದೆ. ಸಾಹಿತ್ಯ ಅಕಾಡೆಮಿಗಾಗಿ "ಕವಿತೆ 2016" ಸಂಪಾದಿತ ಕೃತಿ ...

READ MORE

Related Books