‘ಒಮ್ಮೆ ನಾ ಯೋಚಿಸಿದೆ’ ಕೃತಿಯು ಆರ್ಯ ಬಿ. ಯಡಿವಾಳ ಅವರ ಕವನ ಸಂಕಲನವಾಗಿದೆ. ಹದಿಹರೆಯದ ಮನಸ್ಸುಗಳ ವಸ್ತುಗಳನ್ನು ಒಳಗೊಂಡಿದೆ. ಕವನಗಳಲ್ಲಿ ಸ್ನಿಗ್ಧ ಸೌಂದರ್ಯವಿದೆ. ಮಾಧುರ್ಯವಿದೆ. ಮೋಹಕ ಸೆಳೆತವಿದೆ. ಆಪ್ತತೆ ಇದೆ. ಆರ್ಯ, ಕಡಲಿನ ಬಗ್ಗೆ ಬರೆಯುತ್ತಾರೆ, ರಜೆಯ ಬಗ್ಗೆ, ಚುನಾವಣೆಯ ಬಗ್ಗೆ, ಬಡತನದ ಬಗ್ಗೆಯೆಲ್ಲ ಬರೆಯುತ್ತಾರೆ. ಇವುಗಳ ನಡುವೆ ಧರ್ಮದ ಬಗ್ಗೆಯೂ ಬರೆಯುತ್ತಾರೆ. ಸ್ವಾರಸ್ಯವೆಂದರೆ ಹಿಂದೂ, ಇಸ್ಲಾಂ, ಕ್ರಿಶ್ಚಿಯನ್, ಪಾರ್ಸಿ, ಜೈನ, ಬೌದ್ಧ, ಸಿಖ್ ಎಲ್ಲದರ ಬಗ್ಗೆಯೂ ಬರೆದು ಅವರು ನಿಲ್ಲಿಸುವುದು ಬಲು ಚಂದ : ಎಲ್ಲಾ ಧರ್ಮಗಳೊಂದಾಗಿ ಒಟ್ಟಿಗೆ ಮುಂದಕೆ ಸಾಗಿ ವಿಶ್ವಕ್ಕೊಂದು ಮಾದರಿಯಾಗಿ ಹೋರಾಡುವರು ಏಕತೆಗಾಗಿ ಇಲ್ಲಿ ಹೋರಾಟ ಏಕತೆಗಾಗಿ ಏನ್ನುವುದು ವಿರೋಧಗಳ ಮುಖಾಮುಖಿಯ ಒಡಲಿನಿಂದ ಹುಟ್ಟುವ ಅದ್ಭುತ ರೂಪಕ! ಯಾರೊಂದಿಗಾದರೂ ನಿರರ್ಗಳವಾಗಿ ಜಗಳವಾಡುತ್ತಾ ಹೋದಾಗ ಒಂದು ಹಂತದಲ್ಲಿ ನಾನೂ ಅವನೂ ಒಂದನ್ನೇ ಬೇರೆ ಬೇರೆ ರೂಪದಲ್ಲಿ ಹೇಳುತ್ತಿದ್ದೇನೆ ಎಂದು ಅರ್ಥವಾದಲ್ಲಿಗೆ ಜಗಳ ಮುಗಿಯುತ್ತದೆ. ದ್ವೈತದ ಮುಖಾಮುಖಿಗಳು ಅದ್ವೈತದಲ್ಲಿ ಒಂದಾಗುವ ಈ ವೈರುಧ್ಯದ ಮುಖಾಮುಖಿ ಎಲ್ಲರೂ ಹೋರಾಡುವುದು ಏಕತೆಗಾಗಿ ಎನ್ನುವ ಮಾತಿನಲ್ಲಿ ಚೇತೋಹಾರಿಯಾಗಿ ಮೂಡಿಬಂದಿದೆ’ ಎಂದಿದ್ದಾರೆ.
ಲೇಖಕ ಆರ್ಯ ಬಿ ಯಡಿಯಾಳ ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದ ಹಳ್ಳಿಹೊಳೆಯ ಬರೆಗುಂಡಿಯವರು. ಬರವಣಿಗೆ, ಓದುವುದು ಅವರ ಆಸಕ್ತಿ ಕ್ಷೇತ್ರ. ಕೃತಿಗಳು : ಒಮ್ಮೆ ನಾ ಯೋಚಿಸಿದೆ ...
READ MORE