ಲೇಖಕ ಮದನ ಕುಮಾರ ಅವರ ಚೊಚ್ಚಲ ಕವನ ಸಂಕಲನ-ಒಲವಿನ ಕವಿತೆ. ಒಟ್ಟು 60 ಕವನಗಳಿವೆ. ಕೃತಿಗೆ ಮುನ್ನುಡಿ ಬರೆದ ಸಯ್ಯದ್ ಯೇಜಸ್ ಪಾಷ ಅವರು ’ಬಹುತೇಕ ಕವನಗಳು ವಿರಹದ ಹಾದಿಯ ಪ್ರೀತಿಯನ್ನು ತೋರುವಂತಿದೆ. ಇದಕ್ಕೆ ಸಾಕ್ಷಿಯಾಗಿ ತಮ್ಮ ಈ "ಒಲವಿನ ಕವಿತೆ" ಕವನ ಸಂಕಲನ ಅರ್ಪಣೆಗೆ, ಜೀವಕೊಟ್ಟ ಅಮ್ಮನಿಗೂ, ಕನ್ನಡಮ್ಮನಿಗೂ ಗುರುವಿನ ಜೊತೆಯಲ್ಲಿ "ಒಲವಿನ ದೇವತೆ" ಎಂದು ಆಕೆಯನ್ನು ಕರೆದಿರುವುದು ಉರಿಬಿಸಿಲು ಆರಿ ತಣ್ಣಾಗುವಂತೆ, ಭಗ್ನಪ್ರೇಮದಲ್ಲೂ ಪ್ರೀತಿ ಹುಡುಕುತ್ತ ಅಲೆಯುವ ಮನಸ್ಸಿನಲ್ಲಿ ವ್ಯಕ್ತವಾಗುವ ಭಾವನೆಗಳನ್ನು ಪದಗಳಲ್ಲಿ ಕಾಣಬಹುದಾಗಿದೆ.’ ಎಂದಿದ್ದಾರೆ.
ಲೇಖಕ ಮದನ ಕುಮಾರ ಅವರು ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಿಳಿಜಗಲಿಮೋಳೆ ಗ್ರಾಮದವರು. ತಂದೆ ರಾಮಶೆಟ್ಟಿ ತಾಯಿ ಸುಧಾ. ‘ಬಿರಾಸುಮಕು’ ಇವರ ಕಾವ್ಯನಾಮ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಸರ್ಕಾರಿ ಪ್ರೌಢಶಾಲೆ ಸರಗೂರಿನಲ್ಲಿ ಪ್ರೌಢಶಿಕ್ಷಣ ಮುಗಿಸಿ ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದು ವಿಜಯನಗರದ ಸರ್ಕಾರಿ ಪ್ರ ದರ್ಜೆ ಕಾಲೇಜ್ ನಲ್ಲಿ ಬಿಕಾಂ ಪದವಿ ಪಡೆದರು. ನಂತರ ಅವರು ಬಿಪಿಎಡ್ ಪದವೀಧರರು. ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತಿದ್ದಾರೆ. ‘ಒಲವಿನ ಕವಿತೆ’ ಇವರ ಚೊಚ್ಚಲ ಕೃತಿ. ...
READ MORE