ಬೇಂದ್ರೆಯವರ ಪ್ರೇಮ ಕವಿತೆಗಳ ಸಂಗ್ರಹ. ಈ ಸಂಕಲನದ ಕವಿತೆಗಳನ್ನು ಬೇಂದ್ರೆಯವರು ೯ ಭಾಗಗಳಲ್ಲಿ ವಿಂಗಡಿಸಿದ್ದಾರೆ. ಮದಲನೆ ಭಾಗ ಅನುರಾಗ ಗೀತೆಗಳು, ಎರಡನೆಯ ಭಾಗ ವಿರಹ ಗೀತೆಗಳು, ಮೂರನೆಯ ಭಾಗದಲ್ಲಿ ಕೌಟುಂಬಿಕ ಗೀತೆಗಳಿವೆ. ನಾಲ್ಕನೆಯ ಭಾಗದಲ್ಲಿ ಸಖಿಗೀತ ಮತ್ತು ಐದನೆಯ ಭಾಗದಲ್ಲಿ ಕನ್ನಡ ಮೇಘದೂತದ ಆಯ್ದ ಭಾಗಗಳಿವೆ. ಗಂಡಸು, ಹೆಂಗಸಿಗೆ, ಆರನೆಯ ಭಾಗದಲ್ಲಿ, ಸೌಂದರ್ಯಾನುಭವದ ಸಾಂಕೇತಿಕ ಅನುಭಾವಿ ಗೀತೆಗಳು ಏಳನೆಯ ಭಾಗದಲ್ಲಿ, ಸ್ನೇಹ ಗೀತೆಗಳು ಎಂಟನೆಯ ಭಾಗದಲ್ಲಿ ,ಪ್ರೇಮತತ್ವ ದರ್ಶನ ಒಂಬತ್ತನೆಯ ಭಾಗದಲ್ಲಿವೆ. ಒಲವೇ ನಮ್ಮ ಬದುಕು ಸಂಗ್ರಹದಲ್ಲಿ ಒಟ್ಟು ೧೫೦ ಕವಿತೆಗಳಿವೆ. ಕವಿತೆಗೆ ಪೂರಕವಾಗಿ ಇರುವ ಟಿಪ್ಪಣಿಗಳನ್ನು ನೇಡಿರುವುದು ಈ ಸಂಕಲನದ ವಿಶೇಷ. ಬೇಂಧ್ರೆಯವರ ಒಲವಿನ ನಿಲುವು ಕುರಿತು ವಾಮನ ಬೇಂದ್ರೆ ಬರೆದಿದ್ದಾರೆ. ಈ ಸಂಕಲನಕ್ಕೆ ೩ಪೀಠಿಕೆಗಳಿವೆ. ಮೊದಲನೆಯ ಪೀಠಿಕೆಯನ್ನು ಬನ್ನಂಜಯ ಗೋವಿಂದಾಚಾರ ನೀ-ಶ್ರೀಶ ಬಲ್ಲಾಳ, ಮೂರನೆಯ ಪೀಠಿಕೆಯನ್ನು ಕು,ಶೀ , ಹರಿದಾಸ ಭಟ್ಟರು ಬರೆದಿದ್ದಾರೆ. ಬೇಂದ್ರೆಯವರ ದೃಷ್ಟಿಯಲ್ಲಿ ಪ್ರೀತಿಯೆಂಬುದು ಸರ್ವವ್ಯಾಪಿ ತತ್ವವಾಗಿದ್ದು ಅದರಲ್ಲಿ ಜೇವನದ ರಹಸ್ಯಗಳೆಲ್ಲವೂ ಹುದುಗಿರುವುದರಿಂದ ಈ ಸಂಗ್ರಹದಲ್ಲಿ ಪ್ರಣಯ, ಪ್ರೇಮ,ಒಲವು ಎಂಬ ಶಬ್ದವನ್ನು ವ್ಯಾಪಕ ಅರ್ಥದಲ್ಲಿ ಬಳಸಲಾಗಿದೆ. ಸಖಿಗೀತ, ಮತ್ತೆ ಬಂತು ಶ್ರಾವಣ, ಕನ್ನಡ ಮೇಘದೂತ ಇವು ಸ್ವಯಂ ಪೂರ್ಣ ಕವಿತೆಗಳಾಗಿದ್ದು ಪ್ರತ್ಯೆಕವಾಗಿ ಪ್ರಕಟಗೊಂಡಿರುವುದರಿಂದ ಆಯ್ದ ಭಾಗಗಳನ್ನು ಕು,ಶೀ, ಹರಿದಾಸಭಟ್ಟರು ತಿಳಿಸಿದ್ದಾರೆ. ಖ್ಯಾತ ಕಲಾವಿದ ಕೆ,ಕೆ ಹೆಬ್ಬಾರರು ರಚಿಸಿದ ಎಂಟು ರೇಖಾ ಚಿತ್ರಗಳು ಈ ಸಂಕಲನದ ವಿಶೇಷ.
ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...
READ MORE